ಕರ್ನಾಟಕದ ಭಾಜಪದ ಶಾಸಕನ ಮತಾಂತರಗೊಂಡಿದ್ದ ತಾಯಿ ಸಹಿತ 4 ಕುಟುಂಬದವರಿಂದ ಹಿಂದೂ ಧರ್ಮಕ್ಕೆ ಮರುಪ್ರವೇಶ !

* ಹಿಂದುತ್ವನಿಷ್ಠ ಪಕ್ಷವಾಗಿರುವ ಹಾಗೂ ರಾಜ್ಯದಲ್ಲಿ ಅಧಿಕಾರದಲ್ಲಿರುವ ಭಾಜಪದ ಶಾಸಕನ ತಾಯಿಯನ್ನೂ ಸಹ ಮತಾಂತರಿಸಲು ಕ್ರೈಸ್ತ ಮತಪ್ರಚಾರಕರು ಹೆದರುವುದಿಲ್ಲ, ಇದರಿಂದ ಇವರಿಗೆ ಯಾವುದೇ ಭಯ ಉಳಿದಿಲ್ಲ ಎಂಬುದು ಸ್ಪಷ್ಟವಾಗುತ್ತದೆ ! -ಸಂಪಾದಕರು 

* ಮತಾಂತರದ ಬಿಸಿ ತಮ್ಮದೇ ಪಕ್ಷದ ಜನಪ್ರತಿನಿಧಿಗಳಿಗೆ ತಟ್ಟಿದ್ದರಿಂದ ಈಗಲಾದರೂ ಕೇಂದ್ರದ ಭಾಜಪ ಸರಕಾರ ಮತಾಂತರ ವಿರೋಧಿ ಕಾನೂನನ್ನು ಜಾರಿಗೊಳಿಸುವುದೇ ?- ಸಂಪಾದಕರು 

(ಎಡದಲ್ಲಿ) ಭಾಜಪದ ಶಾಸಕ ಗೂಳಿಹಟ್ಟಿ ಶೇಖರ

ಬೆಂಗಳೂರು – ವಿಧಾನಸಭೆಯಲ್ಲಿ ಹಿಂದೂಗಳ ಮತಾಂತರದ ಅಂಶವನ್ನು ಮಂಡಿಸಿದ ಚಿತ್ರದುರ್ಗ ಜಿಲ್ಲೆಯ ಭಾಜಪದ ಶಾಸಕ ಗೂಳಿಹಟ್ಟಿ ಶೇಖರ ಇವರ ಮತಾಂತರಗೊಂಡಿದ್ದ ತಾಯಿಯ ಸಹಿತ 4 ಕುಟುಂಬದವರು ಹಿಂದೂ ಧರ್ಮಕ್ಕೆ ಮರುಪ್ರವೇಶ ಮಾಡಿದ್ದಾರೆ. ಶಾಸಕ ಶೇಖರ ಇವರು, ಹೀಗೆ ಮಾಡಿ ಎಲ್ಲರೂ ತಮ್ಮ ತಪ್ಪನ್ನು ಸುಧಾರಿಸಿದ್ದಾರೆ. ಎಲ್ಲರನ್ನು ಆಮಿಷವೊಡ್ಡಿ ಮತಾಂತರಿಸಲಾಗಿತ್ತು ಎಂದು ಹೇಳಿದರು. ಹಿಂದೂ ಧರ್ಮದಲ್ಲಿ ಮರುಪ್ರವೇಶ ಮಾಡಿದ ನಂತರ ಮೊದಲು ದೇವಾಲಯಕ್ಕೆ ಹೋಗಿ ಪೂಜಾರ್ಚನೆ ಮಾಡಲಾಗಿತ್ತು.

ವಿಧಾನಸಭೆಯ ಮಳೆಗಾಲದ ಅಧಿವೇಶನದಲ್ಲಿ ಈ ಅಂಶವನ್ನು ಮಂಡಿಸುತ್ತಾ, ಕ್ರೈಸ್ತರು ತಮ್ಮ ತಾಯಿ ಸೇರಿದಂತೆ 20 ಸಾವಿರಕ್ಕಿಂತಲೂ ಹೆಚ್ಚು ಜನರನ್ನು ಮತಾಂತರಿಸಿದ್ದಾರೆ. (ಒಂದು ರಾಜ್ಯದಲ್ಲಿ ಇಷ್ಟು ದೊಡ್ಡ ಪ್ರಮಾಣದಲ್ಲಿ ಹಿಂದೂಗಳ ಮತಾಂತರವಾಗುತ್ತಿರುವಾಗ ಸರಕಾರಿ ವ್ಯವಸ್ಥೆಗಳು ನಿದ್ರೆಗೆ ಜಾರಿದ್ದರೇ ? – ಸಂಪಾದಕರು) ಎಂದು ಹೇಳಿದ್ದರು. ಈ ಸಮಯದಲ್ಲಿ ಅವರು ಕ್ರೈಸ್ತ ಮತಪ್ರಚಾರಕರ ಮೇಲೆ ಕ್ರಮ ಕೈಗೊಳ್ಳುವಂತೆ ಒತ್ತಾಯಿಸಿದ್ದರು. ಯಾರು ಕ್ರೈಸ್ತ ಮತಪ್ರಚಾರಕರನ್ನು ವಿರೋಧಿಸುತ್ತಾರೆಯೋ, ಅವರನ್ನು ಕ್ರೈಸ್ತ ಮತಪ್ರಚಾರಕರು ಸುಳ್ಳು ಪ್ರಕರಣದಲ್ಲಿ ಸಿಲುಕಿಸುತ್ತಾರೆ ಎಂದೂ ಸಹ ಹೇಳಿದರು. (ಇದರಿಂದ ಕ್ರೈಸ್ತ ಮತಪ್ರಚಾರಕರು ಎಷ್ಟು ಉದ್ಧಟರಾಗಿದ್ದಾರೆ, ಎಂಬುದು ಸ್ಪಷ್ಟವಾಗುತ್ತದೆ ! – ಸಂಪಾದಕರು) ಈ ಬಗ್ಗೆ ರಾಜ್ಯದ ಗೃಹಸಚಿವರು ಅವರ ಮೇಲೆ ಕ್ರಮ ಕೈಗೊಳ್ಳಲಾಗುವುದು ಎಂದು ಭರವಸೆಯನ್ನು ನೀಡಿದ್ದರು. ಈ ಸಮಯದಲ್ಲಿ ಶೇಖರ ಅವರು ಮಾತನಾಡುತ್ತಾ, ತಾಯಿಯನ್ನು ಮತಾಂತರಿಸಿದ ನಂತರ ಅವರಿಗೆ ಹಣೆಯ ಮೇಲೆ ಕುಂಕುಮ ಇಡಲು ನಿರ್ಬಂಧಿಸಲಾಗಿತ್ತು. ತಾಯಿಯು ದೇವರ ಕೋಣೆಯಲ್ಲಿದ್ದ ದೇವರ ಚಿತ್ರಗಳನ್ನೂ ನೋಡುತ್ತಿರಲಿಲ್ಲ ಎಂದು ಹೇಳಿದ್ದರು.