ಪ್ರಯಾಣಿಕರು ಉಗುಳಿ ಹಾಳು ಮಾಡಿದ ಕೋಚ್‍ಗಳು ಮತ್ತು ಪರಿಸರಗಳನ್ನು ಸ್ವಚ್ಛಗೊಳಿಸಲು ರೈಲ್ವೆಗೆ ಪ್ರತಿ ವರ್ಷ 1200 ಕೋಟಿ ರೂಪಾಯಿ ವೆಚ್ಚವಾಗುತ್ತದೆ !

ಸ್ವಾತಂತ್ರ್ಯದ 74 ವರ್ಷಗಳಲ್ಲಿ ಎಲ್ಲಾ ಪಕ್ಷದ ಆಡಳಿತಗಾರರು ಜನರನ್ನು ಶಿಸ್ತುಬದ್ಧಗೊಳಿಸುವಲ್ಲಿ ವಿಫಲವಾದ ಪರಿಣಾಮವೇ ಇದು ! ಇದು ಭಾರತೀಯರಿಗೆ ನಾಚಿಕೆಗೇಡು ! – ಸಂಪಾದಕರು 

ಪ್ರತಿನಿಧಿಕ ಛಾಯಾಚಿತ್ರ

ನವ ದೆಹಲಿ – ಪ್ರತಿ ವರ್ಷ ಭಾರತೀಯ ರೈಲ್ವೇ ಆಡಳಿತಕ್ಕೆ ಪ್ರಯಾಣಿಕರ ಉಗುಳುವಿಕೆಯ ಅಭ್ಯಾಸದಿಂದ ಉಂಟಾಗುವ ಕಲೆಗಳನ್ನು ಹಾಗೂ ಇತರ ನಿಯಮಿತ ಸ್ವಚ್ಛತೆಗಾಗಿ ಲಕ್ಷಗಟ್ಟಲೆ ಲೀಟರ ನೀರನ್ನು ಬಳಸಬೇಕಾಗುತ್ತದೆ. ಒಟ್ಟಾರೆ ಸ್ವಚ್ಛತೆಗಾಗಿ ಪ್ರತಿ ವರ್ಷ 1,200 ಕೋಟಿ ರೂಪಾಯಿಯಷ್ಟು ಖರ್ಚಾಗುತ್ತದೆ. ವಿಶೇಷವೆಂದರೆ ಪಾನ್ ಮಸಾಲಾ ಮತ್ತು ತಂಬಾಕು ತಿಂದು ಉಗುಳುವ ಜನರಿಂದ ರೈಲ್ವೆ ಕೋಚ್‍ಗಳು, ರೈಲ್ವೆಯ ಮಾಲಿಕತ್ವದ ಸ್ಥಳ ಮತ್ತು ಆಸ್ತಿಯ ಮೇಲೆ ಉಗುಳಿ ಹೊಲಸು ಮಾಡಿರುವುದನ್ನು ಸ್ವಚ್ಛಗೊಳಿಸಲು ಈ ವೆಚ್ಚ ಬರುತ್ತಿದೆ.

ರೈಲ್ವೆ ಪ್ರದೇಶದಲ್ಲಿ ಉಗುಳಲು ಆಡಳಿತವರ್ಗದಿಂದ ಪ್ರಯಾಣಿಕರಿಗೆ ‘ಸ್ಪಿಟಾನ್’ ಬಳಸಲು ಸಲಹೆ !

(‘ಸ್ಪಿಟಾನ್’ ಎಂದರೆ ಉಗುಳಲು ಹತ್ತಿಯಿಂದ ನಿರ್ಮಿಸಲಾದ ವಿಶಿಷ್ಟರೀತಿಯ ಮುದ್ದೆ !)

ಪ್ರಯಾಣಿಕರು ಅಶಿಸ್ತಿನವರಾಗಿದ್ದರೆ, ಅವರು ‘ಸ್ಪಿಟಾನ್’ ಬಳಸುತ್ತಾರೆಯೇ ? ಉಗುಳುವ ಸೌಲಭ್ಯವನ್ನು ಮಾಡುವುದರ ಜೊತೆಗೆ ಎಲ್ಲೆಲ್ಲೋ ಉಗುಳುವವರಿಂದ ಕಠಿಣ ಆರ್ಥಿಕ ದಂಡವನ್ನು ವಸೂಲಿ ಮಾಡಿದಾಗಲೇ ಈ ಪ್ರಕಾರಗಳು ನಿಲ್ಲುತ್ತವೆ ! – ಸಂಪಾದಕರು 

ಉಗುಳುವ ಮಾಧ್ಯಮದಿಂದಾಗುವ ಅಸ್ವಚ್ಛತೆ, ಅದೇ ರೀತಿ ಸೋಂಕನ್ನು ತಡೆಗಟ್ಟಲು ರೈಲ್ವೆಯ ಆಡಳಿತವರ್ಗದಿಂದ ಪ್ರಯಾಣಿಕರಿಗೆ ‘ಸ್ಪಿಟಾನ್’ಗೆ ಆದ್ಯತೆ ನೀಡುವಂತೆ ಸಲಹೆ ನೀಡಲಾಗುತ್ತದೆ. ‘ಸ್ಪಿಟಾನ್’ನ ಅರ್ಥ ಉಗುಳುವ ಪಾತ್ರೆ; ಆದರೆ ರೈಲ್ವೆ ಆಡಳಿತವು ತಯಾರಿಸಿದ `ಸ್ಪಿಟಾನ್’ ಉಗುಳುವುದಕ್ಕಾಗಿ ತಯಾರಿಸಿದಂತಹ ವಿಶೇಷ ರೀತಿಯ ಹತ್ತಿ ಮುದ್ದೆಯಾಗಿದೆ. ಈ ಮುದ್ದೆಯಲ್ಲಿ ಮರದ ಬೀಜಗಳು ಸಹ ಇರುತ್ತವೆ. ಬಳಕೆಯ ನಂತರ ಈ ಮುದ್ದೆಯನ್ನು ಎಸೆಯಬಹುದು. ರೈಲ್ವೆಯು 42 ನಿಲ್ದಾಣಗಳಲ್ಲಿ ‘ಸ್ಪಿಟಾನ್’ ಪೌಚ್ ಮಾರಾಟಕ್ಕಾಗಿ ಹೆಂಡಿಂಗ್ ಮಶೀನ್ಸ್‍ಗಳನ್ನು(ಹಣ ಹಾಕಿದ ನಂತರ ಸಂಬಂಧಟ್ಟ ವಸ್ತು ಹೊರಗೆ ಬರುವ ಯಂತ್ರ) ಅಳವಡಿಸಲು ಅನುಮತಿ ನೀಡಿದೆ. ಈ ಸ್ಪಿಟಾನ್‍ಗಳು 5 ರಿಂದ 10 ರೂಪಾಯಿಗಳಿಗೆ ಲಭ್ಯವಿರುತ್ತವೆ. ಈ ಪೌಚ್‍ಅನ್ನು 15 ರಿಂದ 20 ಬಾರಿ ಬಳಸಬಹುದು. ಪೂರ್ಣ ಬಳಕೆಯ ನಂತರ ಪೌಚ್‍ಅನ್ನು ಮಣ್ಣಿನಲ್ಲಿ ಎಸೆಯಬಹುದು. ಈ ಪೌಚ್‍ಗಳು ಸಂಪೂರ್ಣವಾಗಿ ಮಣ್ಣಿನೊಂದಿಗೆ ಬೆರೆಯುತ್ತವೆ. ಇದರಿಂದ ಮಾಲಿನ್ಯದ ಸಮಸ್ಯೆ ಉಂಟಾಗುವುದಿಲ್ಲ. ‘ಸ್ಪಿಟಾನ್’ ತಯಾರಿಸಲು ವಿಶೇಷ ತಂತ್ರಜ್ಞಾನವನ್ನು ಬಳಸಲಾಗಿದೆ. ಈ ಮಾಧ್ಯಮದಿಂದಾಗಿ ಉಗುಳಿನಲ್ಲಿರುವ ವೈರಸ್ ಗಳು ಸ್ಪಿಟಾನ್‍ನಲ್ಲಿ ಸಿಕ್ಕಿಹಾಕಿಕೊಳ್ಳುತ್ತವೆ ಮತ್ತು ಈ ಸ್ಪಿಟಾನ್ ಮೂಲಕ ಸೋಂಕನ್ನು ತಡೆಯಲಾಗುತ್ತದೆ.