ರತಲಾಮ (ಮಧ್ಯಪ್ರದೇಶ) – ವಿಶ್ವ ಹಿಂದೂ ಪರಿಷತ್ತಿನಿಂದ ಇಲ್ಲಿಯ ಶ್ರೀ ದುರ್ಗಾಪೂಜೆಯ ಮಂಟಪದಲ್ಲಿ ಹಾಗೂ ಇತರ ಧಾರ್ಮಿಕ ಕಾರ್ಯಕ್ರಮಗಳಲ್ಲಿ ಇತರ ಧರ್ಮದವರಿಗೆ ಪ್ರವೇಶ ನಿರ್ಬಂಧಿಸಲಾಗಿದೆ. ಈ ವಿಷಯವಾಗಿ ಭಿತ್ತಿಪತ್ರಕಗಳನ್ನು ಸಂಪೂರ್ಣ ನಗರದಲ್ಲಿ ಹಚ್ಚಲಾಗಿತ್ತು.
VHP puts up posters barring the entry of non-Hindus in Durga Puja pandals https://t.co/44vSHhVQNo
— Hindustan Times (@HindustanTimes) October 10, 2021
1. ಅಹಿಂದೂ ಜನರು ಹಿಂದೂಗಳ ಧಾರ್ಮಿಕ ಶ್ರದ್ಧೆ ಮತ್ತು ಪೂಜಾ ಪದ್ಧತಿಯನ್ನು ಪಾಲಿಸುವುದಿಲ್ಲ; ಆದ್ದರಿಂದ ಅವರು ಮಂಟಪದೊಳಗೆ ಬರಬಾರದು. ಕಳೆದ ಕೆಲವು ವರ್ಷಗಳಿಂದ ಮಂಟಪದಲ್ಲಿ ಅಹಿಂದೂ ಯುವಕರಿಂದ ಸಮಾಜಘಾತಕ ಕೃತ್ಯಗಳನ್ನು ನಡೆಸಲಾಗುತ್ತಿದೆ. ಆದ್ದರಿಂದಲೇ ಭಿತ್ತಿಪತ್ರಗಳನ್ನು ಅಂಟಿಸಿ ಅಹಿಂದೂಗಳಿಗೆ ಮಂಟಪದಲ್ಲಿ ಬರಬಾರದೆಂದು ಸೂಚನೆ ನೀಡಲಾಗಿದೆ ಎಂದು ವಿಶ್ವ ಹಿಂದೂ ಪರಿಷತ್ತಿನ ಕಾರ್ಯಕರ್ತರು, ಹೇಳಿದ್ದಾರೆ.
2. ಈ ಬಗ್ಗೆ ರತಲಾಮ ಆಡಳಿತವು, ‘ಈ ವಿಷಯವಾಗಿ ಇಲ್ಲಿಯವರೆಗೂ ಯಾವುದೇ ದೂರು ನಮಗೆ ಬಂದಿಲ್ಲ. ನಮ್ಮಲ್ಲಿ ದೂರು ಬಂದರೆ ನಾವು ಕ್ರಮ ಕೈಗೊಳ್ಳುವೆವು’, ಎಂದು ಹೇಳಿದೆ. (ದೂರು ಬಂದರೆ ಆಡಳಿತವು ಕ್ರಮ ಏಕೆ ಕೈಗೊಳ್ಳಬೇಕು ? ಪ್ರತಿಯೊಂದು ಧರ್ಮದವರಿಗೆ ತಮ್ಮ ಧಾರ್ಮಿಕ ಕೃತಿಗಳಲ್ಲಿ ಯಾರು ಸಹಭಾಗಿ ಆಗಬೇಕು ಆಗಬಾರದು ? ಇದನ್ನು ನಿರ್ಧರಿಸುವ ಅಧಿಕಾರ ಇರಲೇಬೇಕು. ಮಧ್ಯಪ್ರದೇಶದಲ್ಲಿ ಭಾಜಪದ ಸರಕಾರ ಇರುವಾಗ ಇಂತಹ ಕ್ರಮ ಕೈಗೊಳ್ಳುವುದಾದರೆ, ಇದು ಹಿಂದೂಗಳಿಗೆ ಅಪೇಕ್ಷಿತವಿಲ್ಲ ! – ಸಂಪಾದಕರು)