ಶ್ರೀ ದುರ್ಗಾದೇವಿಯನ್ನು ‘ವೇಶ್ಯೆ’ ಎಂದು ಹೇಳಿದ ಭೀಮ ಆರ್ಮಿಯ ನಾಯಕನ ಬಂಧನ

ಇಂತಹವರಿಗೆ ಜೀವಾವಧಿ ಶಿಕ್ಷೆಯಾಗಲು ಕೇಂದ್ರ ಸರಕಾರವು ಕಠಿಣ ಕಾನೂನು ನಿರ್ಮಿಸುವುದು ಅವಶ್ಯಕವಾಗಿದೆ !- ಸಂಪಾದಕರು 

ಹಿಂದೂಗಳ ದೇವತೆಗಳನ್ನು ಅವಮಾನಿಸುವ ಧೈರ್ಯವೇ ಬರಬಾರದು ಆ ರೀತಿಯ ಸ್ಥಿತಿಯನ್ನು ಹಿಂದೂಗಳು ನಿರ್ಮಿಸುವುದು ಅವಶ್ಯಕವಾಗಿದೆ!- ಸಂಪಾದಕರು 

ಬಂಧಿತ ಆರೋಪಿ ಭೀಮ ಆರ್ಮಿಯ ನಾಯಕ ಅನಿಲ ಚೌಧರಿ(ಮಧ್ಯದಲ್ಲಿ)

ಫಿರೋಜಾಬಾದ್ (ಉತ್ತರಪ್ರದೇಶ) – ಶ್ರೀ ದುರ್ಗಾದೇವಿಯನ್ನು ‘ವೇಶ್ಯೆ’ ಎಂದು ಹೇಳಿದ ಪ್ರಕರಣದಲ್ಲಿ ಇಲ್ಲಿಯ ಭೀಮ ಆರ್ಮಿಯ ನಾಯಕ ಅನಿಲ ಚೌಧರಿಯನ್ನು ಬಂಧಿಸಲಾಗಿದೆ. ಅನಿಲ ಚೌಧರಿಯು ಭೀಮ ಆರ್ಮಿಯ ‘ಆಜಾದ ಸಮಾಜ ಪಾರ್ಟಿ’ಯ ಜಿಲ್ಲಾಧ್ಯಕ್ಷನಾಗಿದ್ದಾನೆ. ಹಿಂದೂ ವಾಹಿನಿಯ ಕಾರ್ಯಕರ್ತರು ನೀಡಿರುವ ದೂರಿನ ನಂತರ ಚೌಧರಿಯನ್ನು ಬಂಧಿಸಲಾಗಿದೆ. ಬಂಧನದ ಭೀತಿಯಿಂದ ಆತ ಟ್ವೀಟ್ ಮಾಡಿ ಕ್ಷಮೆಯಾಚಿಸಲು ಪ್ರಯತ್ನಿಸಿದನು. ‘ನನಗೆ ಯಾರ ಭಾವನೆಗಳಿಗೆ ನೋವನ್ನುಂಟುಮಾಡುವ ಉದ್ದೇಶ ಇರಲಿಲ್ಲ. ಈ ಪೋಸ್ಟ ತಪ್ಪಾಗಿ ಆಗಿದೆ’, ಎಂದು ಹೇಳಿಕೆಯನ್ನು ನೀಡಿದ್ದಾನೆ.