ಭಾರತದಲ್ಲಿ 2 ರಿಂದ 18 ವಯಸ್ಸಿನ ಮಕ್ಕಳಿಗಾಗಿ `ಕೊವ್ಯಾಕ್ಸೀನ್’ ಲಸಿಕೆಗೆ ಕೇಂದ್ರ ಸರಕಾರದಿಂದ ಒಪ್ಪಿಗೆ


ನವ ದೆಹಲಿ – ಕೇಂದ್ರ ಸರಕಾರವು ಸಣ್ಣ ಮಕ್ಕಳಿಗಾಗಿ ಕೊರೊನಾದ ಮೇಲಿನ ‘ಕೊವ್ಯಾಕ್ಸೀನ್’ ಲಸಿಕೆಗೆ ಒಪ್ಪಿಗೆ ನೀಡಿದೆ. ಇದರಿಂದ ಇನ್ನು 2 ರಿಂದ 18 ವರ್ಷ ವಯಸ್ಸಿನ ಮಕ್ಕಳಿಗೆ ಕೊರೊನಾದ ಲಸಿಕೆ ಸಿಗಲಿದೆ. ಅಮೇರಿಕಾ, ಸಿಂಗಾಪುರ ಸೇರಿದಂತೆ ಜಗತ್ತಿನಾದ್ಯಂತ 20 ದೇಶಗಳಲ್ಲಿ ಈ ಹಿಂದೆಯೇ ಸಣ್ಣ ಮಕ್ಕಳಿಗೆ ಕೊರೊನಾದ ಲಸಿಕೆ ನೀಡಲು ಆರಂಭಿಸಲಾಗಿದೆ.