ರಾಜ್ಯಗಳು ತಮ್ಮಲ್ಲಿ ಲಬ್ಧವಿರುವ ಹೆಚ್ಚುವರಿ ವಿದ್ಯುತ್ತಿನ ಮಾಹಿತಿ ನೀಡಬೇಕು ! – ಕೇಂದ್ರ ಸರಕಾರದ ಸೂಚನೆ

ವಿದ್ಯುತ್ ನಿರ್ಮಿತಿಗಾಗಿ ಕಲ್ಲಿದ್ದಿಲು ಪೂರೈಕೆಯ ಸಂಕಷ್ಟ

ಪ್ರತಿನಿಧಿಕ ಛಾಯಾಚಿತ್ರ

ನವದೆಹಲಿ – ಕಲ್ಲಿದ್ದಿಲಿನ ಕೊರತೆಯ ಹಿನ್ನಲೆಯಲ್ಲಿ ಕೇಂದ್ರೀಯ ಇಂಧನ ಸಚಿವಾಲಯವು ಕೇಂದ್ರೀಯ ವಿದ್ಯುತ್ ನಿರ್ಮಿತಿ ಕೇಂದ್ರದಿಂದ ಸರಬರಾಜು ಮಾಡಲು ವಿದ್ಯುತ್ ಉಪಯೋಗದ ನಿಯಮಾವಳಿ ಘೋಷಣೆ ಮಾಡಿದೆ. ‘ರಾಜ್ಯಗಳಿಗೆ ನೀಡಲಾಗಿರುವ ವಿದ್ಯುತ್ ಅವರು ಗ್ರಾಹಕರಿಗಾಗಿ ಉಪಯೋಗಿಸಬೇಕು’, ಎಂದು ಸೂಚನೆ ನೀಡಲಾಗಿದೆ. ‘ಯಾವ ರಾಜ್ಯದಲ್ಲಿ ಹೆಚ್ಚುವರಿ ವಿದ್ಯುತ್ ಉಪಲಬ್ಧವಿದೆ, ಅವರು ಆ ವಿಷಯದ ಮಾಹಿತಿಯನ್ನು ನೀಡಬೇಕು, ಇದರಿಂದ ಆ ವಿದ್ಯುತ್ ಅನ್ನು ಅವಶ್ಯಕತೆಯಿರುವ ರಾಜ್ಯಗಳಿಗಾಗಿ ಉಪಯೋಗಿಸಬಹುದು’, ಎಂದು ಮನವಿ ಮಾಡಲಾಗಿದೆ. ಅದಕ್ಕಾಗಿ ಅಧಿಸೂಚನೆಯನ್ನು ಜಾರಿ ಮಾಡಲಾಗಿದೆ. ವಿದ್ಯುತ್ ಕೊರತೆಯ ಅಪಾಯ ಕೇವಲ ಭಾರತಕ್ಕೆ ಅಲ್ಲದೆ, ಅಮೇರಿಕ, ಚೀನಾ ಮತ್ತು ಯುರೋಪ್‍ನಲ್ಲಿಯೂ ಉದ್ಭವಿಸಿದೆ.

‘ಕೇಂದ್ರೀಯ ವಿದ್ಯುತ್ ಪ್ರಾಧಿಕರಣ’ದ (`ಸೆಂಟ್ರಲ್ ಎಲೆಕ್ಟ್ರಿಕ್ ಸಿಟಿ ಅಥಾರಿಟಿ’ಯ) ಅಕ್ಟೋಬರ್ 7 ರಂದು ನೀಡಲಾದ ವರದಿಯನುಸಾರ, ದೇಶದಲ್ಲಿ 135 ರ ಪೈಕಿ 110 ವಿದ್ಯುತ್ ಪ್ರಕಲ್ಪಗಳಲ್ಲಿ ಕಲ್ಲಿದ್ದಲಿನ ಸಂಗ್ರಹ ಕಡಿಮೆ ಆಗಿರುವುದರಿಂದ ಸಂಕಷ್ಟ ಉದ್ಭವಿಸಿದೆ. 16 ಪ್ರಕಲ್ಪಗಳಲ್ಲಿ ಒಂದು ದಿನದ ಕಲ್ಲಿದ್ದಲು ಸಂಗ್ರಹ ಉಳಿದಿಲ್ಲ. 30 ಪ್ರಕಲ್ಪಗಳಲ್ಲಿ ಒಂದು ದಿನದ ಕಲ್ಲಿದ್ದಲು ಸಂಗ್ರಹ ಇದೆ. ಹಾಗೂ 18 ಪ್ರಕಲ್ಪಗಳಲ್ಲಿ ಕೇವಲ ಎರಡು ದಿನಕ್ಕೆ ಸಾಕಾಗುವಷ್ಟು ಸಂಗ್ರಹ ಉಳಿದಿದೆ.