ಹರಿಯಾಣಾದ ಭಾಜಪ ಸರಕಾರವು ಇತಿಹಾಸದಲ್ಲಾದ ತಪ್ಪುಗಳನ್ನು ಬದಲಾಯಿಸಲು ಸಾಹಸ ತೋರಿಸಿದೆ ! – ಚೇತನ ರಾಜಹಂಸ, ರಾಷ್ಟ್ರೀಯ ವಕ್ತಾರರು, ಸನಾತನ ಸಂಸ್ಥೆ

ಶ್ರೀ. ಚೇತನ ರಾಜಹಂಸ

ನವ ದೆಹಲಿ – ಹರಿಯಾಣಾ ಸರಕಾರೀ ನೌಕರರು ರಾಷ್ಟ್ರೀಯ ಸ್ವಯಂಸೇವಕ ಸಂಘದ ಶಾಖೆಯಲ್ಲಿ ಹಾಗೂ ವಿವಿಧ ಕಾರ್ಯಕ್ರಮದಲ್ಲಿ ಭಾಗವಹಿಸಬಹುದು’. ಎಂಬ ವಿಷಯವಾಗಿ ಭಾಜಪ ನೇತೃತ್ವದ ಹರಿಯಾಣಾ ಸರಕಾರವು ನೀಡಿರುವ ಸುತ್ತೋಲೆಯಲ್ಲಿ ಇತಿಹಾಸದಲ್ಲಾದ ತಪ್ಪನ್ನು ಸರಿಪಡಿಸಲಾಗಿದೆ. ಈ ಮೂಲಕ ಸರಕಾರವು ಇತಿಹಾಸದಲ್ಲಾದ ತಪ್ಪನ್ನು ಬದಲಾಯಿಸುವ ಧೈರ್ಯವನ್ನು ತೋರಿಸಿದೆ, ಎಂದು ಸನಾತನ ಸಂಸ್ಥೆಯ ರಾಷ್ಟ್ರೀಯ ವಕ್ತಾರರಾದ ಶ್ರೀ. ಚೇತನ ರಾಜಹಂಸರವರು ಪ್ರತಿಕ್ರಿಯೆ ವ್ಯಕ್ತಪಡಿಸಿದ್ದಾರೆ.

ಶ್ರೀ. ರಾಜಹಂಸರವರು ಮುಂದೆ ನುಡಿದರು, ವರ್ಷ ೧೯೮೦ರಲ್ಲಿ ಜನತಾ ದಳದ ಕೇಂದ್ರದಲ್ಲಿನ ಸರಕಾರವು ಕುಸಿದಿದರಿಂದ ಹಾಗೂ ಇಂದಿರಾ ಗಾಂಧಿಯವರು ಮತ್ತೊಮ್ಮೆ ಅಧಿಕಾರಕ್ಕೆ ಬಂದರು. ವರ್ಷ ೧೯೭೭ರಲ್ಲಿ ಮೊಟ್ಟ ಮೊದಲಿಗೆ ದೇಶದ ಮಟ್ಟದಲ್ಲಿ ಕಾಂಗ್ರೆಸ್‌ಗೆ ಪರಾಜಯ ನೋಡಬೇಕಾಗಿ ಬಂತು. ‘ಆ ಪರಾಜಯಕ್ಕೆ ಸಂಘವೇ ಕಾರಣ’ ಎಂದು ಕಾಂಗ್ರೆಸ್‌ ನ ರಾಜಕೀಯ ಬುದ್ಧಿಯು ತಿಳಿದುಕೊಂಡಿತು. ಆದ್ದರಿಂದ ೧೯೮೦ರಲ್ಲಿ ಕೇಂದ್ರ ಹಾಗೂ ರಾಜ್ಯಮಟ್ಟದಲ್ಲಿ ಅಧಿಕಾರಕ್ಕೆ ಬಂದ ತಕ್ಷಣ ಕಾಂಗ್ರೆಸ್‌ ನ ಆಡಳಿತಗಾರರು ಮೊದಲು ಸರಕಾರೀ ಸಿಬ್ಬಂದಿಗಳಿಗೆ ಒಂದು ನಿಯಮವನ್ನು ಮಾಡಿದರು, ಅದೆಂದರೆ ಸಂಘದ ಶಾಖೆ ಹಾಗೂ ಕಾರ್ಯಕ್ರಮದಲ್ಲಿ ಯಾವುದೇ ಸರಕಾರಿ ಅಧಿಕಾರಿಯಾಗಲಿ ಅಥವಾ ಸಿಬ್ಬಂದಿವರ್ಗದವರಾಗಲಿ ಪಾಲ್ಗೊಳ್ಳಬಾರದು. ಈ ತೀರ್ಮಾನವೆಂದರೆ ಕಾಂಗ್ರೆಸ್‌ ಅಧಿಕಾರದಲ್ಲಿರುವಾಗ ಹೇಗೆ ಒಂದು ರೀತಿಯಲ್ಲಿ ತಮ್ಮ ವಿರೋಧಕರನ್ನು ಕಾಯಿದೆಯ ಕೆಳಗೆ ಕಟ್ಟಿಡಬಹುದು, ಎಂಬುದಕ್ಕೆ ಉತ್ತಮ ಉದಾಹರಣೆಯಾಯಿತು. ಈ ರೀತಿಯ ತೀರ್ಮಾನದಿಂದ ಹಾಗೂ ಸೇಡಿನ ಬುದ್ಧಿಯಿಂದ ಹಾಗೂ ಅದಕ್ಕೂ ಮುಂದಕ್ಕೆ ಹೋಗಿ, ಅದು ‘ಫಾಸಿಸ್ಟ್’ (ನಿರಂಕುಶ ಪ್ರಭುತ್ವ) ವೃತ್ತಿಗೆ ಪ್ರತ್ಯಯ ನೀಡುವುದಾಗಿತ್ತು. ಈ ತೀರ್ಮಾನದಿಂದ ಪ್ರಜಾಪ್ರಭುತ್ವವನ್ನು ಹಾಗೂ ಸಂವಿಧಾನವು ನೀಡಿದ ಅಭಿವ್ಯಕ್ತಿ ಸ್ವತಂತ್ರ್ಯವನ್ನು ಕೊಲೆ ಮಾಡಲಾಯಿತು. ಕಳೆದ ೪೧ ವರ್ಷಗಳಿಂದ ಆ ನಿರ್ಣಯವನ್ನು ಸರ್ವಪಕ್ಷೀಯ ಸರಕಾರಗಳು ಪಾಲಿಸಿದವು ಹಾಗೂ ಸರಕಾರೀ ಕೆಲಸಗಾರರ ಅಭಿವ್ಯಕ್ತಿ ಸ್ವಾತಂತ್ರ್ಯವನ್ನು ಸೀಮಿತಗೊಳಿಸಲಾಯಿತು. ಹಾಗಾಗಿ ‘ಹರಿಯಾಣಾ ಸರಕಾರದ ಉದಾರಮತವಾದದಿಂದ ಅಭಿವ್ಯಕ್ತಿ ಸ್ವಾತಂತ್ರ್ಯಕ್ಕೆ ಸಂವಿಧಾನವು ನೀಡಿರುವ ಅಧಿಕಾರವು ಹರಿಯಾಣಾದಲ್ಲಿನ ಸರಕಾರೀ ನೌಕರರಿಗೆ ಸಿಕ್ಕಿದೆ’, ಎಂದು ಹೇಳಬಹುದು. ಹೇಗೆ ಗುಲಾಮಗಿರಿಯ ಕುರುಹುಗಳನ್ನು ಸ್ವಾತಂತ್ರ್ಯ ಸಿಕ್ಕಿದ ಬಳಿಕ ಅಳಿಸಿ ಹಾಕಬೇಕಾಗುತ್ತದೆಯೋ, ಅದೇ ರೀತಿ ಹಳೆಯ ಆಡಳಿತಗಾರರು ಮಾಡಿರುವ ಐತಿಹಾಸಿಕ ತಪ್ಪುಗಳನ್ನು ಸರಿಪಡಿಸಬೇಕಾಗುತ್ತದೆ. ಹರಿಯಾಣಾದಲ್ಲಿನ ಭಾಜಪಪ್ರಣೀತ ಸರಕಾರವು ಇತಿಹಾಸದಲ್ಲಾದ ತಪ್ಪನ್ನು ಬದಲಾಯಿಸುವ ಸಾಹಸ ತೋರಿಸಿದೆ ಎಂಬುದಕ್ಕೆ ಅದಕ್ಕೆ ಅಭಿನಂದನೆಗಳನ್ನು ನೀಡಬೇಕು.

ಹರಿಯಾಣಾದಲ್ಲಿ ಸರಕಾರಿ ನೌಕರರು ರಾ. ಸ್ವ. ಸಂಘದ ಕಾರ್ಯಕ್ರಮದಲ್ಲಿ ಭಾಗವಹಿಸಬಹುದು !

ಚಂಡೀಗಡ – ವರ್ಷ ೧೯೮೦ರಲ್ಲಿ ಹರಿಯಾಣದ ಸಮಕಾಲೀನ ಮುಖ್ಯ ಸಚಿವರ ಕಾರ್ಯಾಲಯವು ಆದೇಶ ನೀಡಿ ಸರಕಾರೀ ನೌಕರರು ರಾಷ್ಟ್ರೀಯ ಸ್ವಯಂಸೇವಕ ಸಂಘದ ಕಾರ್ಯಕ್ರಮದಲ್ಲಿ ಭಾಗವಹಿಸಲು ನಿರಾಕರಿಸಲಾಗಿತ್ತು. ಅದೇ ರೀತಿಯ ಆದೇಶವನ್ನು ವರ್ಷ ೧೦೬೭ರಲ್ಲಿ ಕೂಡ ನೀಡಲಾಯಿತು; ಆದರೆ ಈಗ ಈ ಎರಡೂ ಆದೇಶಗಳನ್ನು ಹರಿಯಾಣಾ ಸರಕಾರವು ರದ್ದು ಪಡಿಸಿದೆ. ಇದರಿಂದ ಸರಕಾರೀ ನೌಕರರು ರಾಷ್ಟ್ರೀಯ ಸ್ವಯಂಸೇವಕ ಸಂಘದ ಕಾರ್ಯಕ್ರಮಗಳಲ್ಲಿ ಭಾಗವಹಿಸಲು ಸಮ್ಮತಿಸಲಾಗಿದೆ. ಅದಕ್ಕೆ ಕಾಂಗ್ರೆಸ ವಕ್ತಾರರಾದ ರಣದೀಪ ಸುರಜೇವಾಲಾರವರು ‘ಸರಕಾರ ನಡೆಸಲಾಗುತ್ತಿದೆಯೇ ಅಥವಾ ಭಾಜಪ ಹಾಗೂ ಸಂಘದ ಶಾಖೆಗಳನ್ನು ?’, ಎಂಬ ಶಬ್ಧಗಳಲ್ಲಿ ಟೀಕಿಸಿದ್ದಾರೆ.