ಆಯುರ್ವೇದದಿಂದ ಮಗಳ ದೃಷ್ಟಿದೋಷ ಕಡಿಮೆಯಾಗಿ ಆಕೆಗೆ ಸರಿಯಾಗಿ ಕಾಣಿಸಲು ತೊಡಗಿದ್ದರಿಂದ ಕೀನ್ಯಾದ ಮಾಜಿ ಪ್ರಧಾನಿ ಭಾರತಕ್ಕೆ ಆಭಾರ ಮನ್ನಿಸಿದರು !

ಕೀನ್ಯಾದ ಮಾಜಿ ಪ್ರಧಾನಿ ರೈಲಾ ಓಡಿಂಗಾ ಇವರ ಮಗಳಿಗೆ ದೃಷ್ಟಿದೋಷ ಇರುವುದರಿಂದ ಆಕೆಗೆ ನೋಡಲು ತೊಂದರೆ ನಿರ್ಮಾಣವಾಗಿತ್ತು. ವಿವಿಧ ಉಪಚಾರ ಪದ್ಧತಿಯಿಂದ ಚಿಕಿತ್ಸೆ ಕೊಡಿಸಿದ ನಂತರ ಓಡಿಂಗಾ ಇವರು ಆಕೆಯನ್ನು ಕೊಚ್ಚಿ (ಕೇರಳ) ಇಲ್ಲಿಯ ಆಯುರ್ವೇದ ಚಿಕಿತ್ಸೆಗಾಗಿ ಆಸ್ಪತ್ರೆಗೆ ದಾಖಲಿಸಲಾಯಿತು.

ಭಾರತ ಸರಕಾರದಿಂದ ಚೀನಾದ ೫೪ ‘ಆಪ್’ ಗಳ ಮೇಲೆ ನಿಷೇಧ !

ಭಾರತೀಯರ ಗೌಪ್ಯತೆ ಮತ್ತು ಭದ್ರತೆಗೆ ಅಪಾಯ ಇರುವುದರಿಂದ ಚೀನಾದ ೫೪ ಕ್ಕಿಂತಲೂ ಹೆಚ್ಚು ‘ಆಪ್’ಗಳನ್ನು ಕೇಂದ್ರ ಸರಕಾರ ನಿಷೇಧಿಸಿದೆ. ಈ ‘ಆಪ್’ಗಳು ೨೦೨೦ ರಿಂದ ಭಾರತದಲ್ಲಿ ನಿಷೇಧಿಸಲಾದ ಚಿನಾದ ‘ಆಪ್’ಗಳನ್ನು ಹೆಸರು ಬದಲಿಸಿ ಅಥವಾ ಬೇರೆ ‘ಬ್ರಾಂಡ್’ನ ಹೆಸರಿನಲ್ಲಿ ಹೊಸದಾಗಿ ಪರಿಚಯಿಸಿದ್ದರು.

ಒಂದೇ ಬಾರಿ ಬಳಸಬಹುದಾದ ಪ್ಲಾಸ್ಟಿಕಿನ ಮೇಲೆ ಜುಲೈ ೧, ೨೦೨೨ರಿಂದ ನಿರ್ಬಂಧ !

ಪರಿಸರಕ್ಕೆ ಹಾನಿಕಾರಕವಾದ ಒಂದೇ ಬಾರಿ ಬಳಸಬಹುದಾದ ಪ್ಲಾಸ್ಟಿಕಿನ ಮೇಲೆ ಜುಲೈ ೧, ೨೦೨೨ರಿಂದ ನಿರ್ಬಂಧ ಹೇರಲಾಗುವುದು. ಈ ಸಂದರ್ಭದಲ್ಲಿ ಕೇಂದ್ರೀಯ ಮಾಲಿನ್ಯ ನಿಯಂತ್ರಣ ಮಂಡಳಿಯು ಉತ್ಪಾದನೆ, ಸಂಗ್ರಹಣೆ, ವಿತರಣೆ ಮತ್ತು ಬಳಕೆಗೆ ಸಂಬಂಧಿಸಿದ ಎಲ್ಲ ಸಂಸ್ಥೆಗಳಿಗೆ ನೋಟಿಸ್ ಕಳಿಸಿದೆ.

‘ಹಿಜಾಬ್ ಅನ್ನು ಧರಿಸದಿರುವುದರಿಂದಲೇ ಜಗತ್ತಿನಲ್ಲಿನ ಅತ್ಯಂತ ಹೆಚ್ಚು ಬಲಾತ್ಕಾರಗಳು ಭಾರತದಲ್ಲಿ ಆಗುತ್ತವೆ !’ – ಕಾಂಗ್ರೆಸ್ ನೇತಾರ ಜಮೀರ ಅಹಮದ

‘ಇಸ್ಲಾಮಿನಲ್ಲಿ ಹಿಜಾಬ ಅಂದರೆ ಪರದೆ. ವಯಸ್ಸಿಗೆ ಬಂದನಂತರ ಹುಡುಗಿಯರು ಹಿಜಾಬ ಧರಿಸಿ ತಮ್ಮ ಸೌಂದರ್ಯವನ್ನು ಅಡಗಿಸಿಡಬೇಕು. ಜಗತ್ತಿನಲ್ಲಿ ಅತ್ಯಂತ ಹೆಚ್ಚಿನ ಬಲಾತ್ಕಾರಗಳು ಭಾರತದಲ್ಲಿ ನಡೆಯುತ್ತವೆ. ಇದರ ಕಾರಣವೇನು ? ಆ ಮಹಿಳೆಯು ತನ್ನ ಮುಖವನ್ನು ಅಡಗಿಸುವುದಿಲ್ಲ’, ಎಂಬ ಹೇಳಿಕೆಯನ್ನು ಕರ್ನಾಟಕದಲ್ಲಿನ ಕಾಂಗ್ರೆಸ್ ನೇತಾರರಾದ ಜಮೀರ ಅಹಮದರವರು ನೀಡಿದ್ದಾರೆ.

ಮೈಸೂರು -ಬೆಂಗಳೂರು ಟಿಪ್ಪು ಎಕ್ಸಪ್ರೆಸ್ನ ಹೆಸರನ್ನು ಒಡೆಯರ್ ಎಕ್ಸಪ್ರೆಸ್ ಎಂದು ಬದಲಾಯಿಸಿ ! – ಮೈಸೂರಿನ ಭಾಜಪದ ಶಾಸಕ ಪ್ರತಾಪ್ ಸಿಂಹರವರ ಬೇಡಿಕೆ

ಭಾಜಪದ ಶಾಸಕ ಪ್ರತಾಪ ಸಿಂಹ ಇವರು ಮೈಸೂರು -ಬೆಂಗಳೂರು ಟಿಪ್ಪು ಎಕ್ಸಪ್ರೆಸ್ನ ಹೆಸರನ್ನು ಬದಲಿಸಿ ಒಡೆಯರ ಎಕ್ಸಪ್ರೆಸ್ ಮಾಡುವಂತೆ ರೈಲ್ವೆ ಸಚಿವ ಶ್ರೀ. ಅಶ್ವಿನಿ ವೈಷ್ಣವ್ ಇವರಿಗೆ ಪತ್ರದ ಮೂಲಕ ಒತ್ತಾಯಿಸಿದ್ದಾರೆ.

ಒರಿಸ್ಸಾದ ಒಂದು ಗ್ರಾಮದ ಸರಪಂಚ ಸ್ಥಾನಕ್ಕಾಗಿ ಚುನಾವಣೆಯಲ್ಲಿ ಸ್ಪರ್ಧಿಸುತ್ತಿರುವ ಅಭ್ಯರ್ಥಿಯನ್ನು ಗ್ರಾಮಸ್ಥರು ಮೌಖಿಕ ಹಾಗೂ ಲಿಖಿತ ಪರೀಕ್ಷೆ ತೆಗೆದುಕೊಂಡರು !

ಓರಿಸ್ಸಾ ರಾಜ್ಯದ ಪಂಚಾಯಿತಿ ಚುನಾವಣೆಯ ಪ್ರಕ್ರಿಯೆ ನಡೆಯುತ್ತಿದೆ. ಇದರ ಸಂದರ್ಭದಲ್ಲಿ ಸುಂದರಗಡ ಜಿಲ್ಲೆಯ ಮಾಲುಪಾಡಾ ಗ್ರಾಮಸ್ಥರು ಸರಪಂಚ ಸ್ಥಾನಕ್ಕಾಗಿ ಚುನಾವಣೆಯಲ್ಲಿ ಸ್ಪರ್ಧಿಸಲಿರುವ ಅಭ್ಯರ್ಥಿಗಳ ಒಂದು ಲಿಖಿತ ಹಾಗೂ ಮೌಖಿಕ ಪರೀಕ್ಷೆ ತೆಗೆದುಕೊಳ್ಳಲಾಯಿತು.

ವಿಶ್ವವಿಖ್ಯಾತ ನಾಲಂದಾ ವಿಶ್ವವಿದ್ಯಾಲಯ ಈಗ ಸಾರ್ವಜನಿಕರಿಗಾಗಿ ಆಕರ್ಷಣೆಯ ಕೇಂದ್ರ !

ಬಿಹಾರದ ನಾಲಂದಾ ವಿಶ್ವವಿದ್ಯಾಲಯವು ಜಗತ್ತಿನ ಮೊದಲ ವಿಶ್ವವಿದ್ಯಾಲಯವಾಗಿತ್ತು. ಅದು ಒಂದು ಕಾಲದಲ್ಲಿ ಜ್ಞಾನದ ಅಂತರರಾಷ್ಟ್ರೀಯ ಕೇಂದ್ರವಾಗಿತ್ತು. ಈ ವಿಶ್ವವಿದ್ಯಾಲಯದ ಸ್ಥಾಪನೆಯನ್ನು ಗುಪ್ತರ ರಾಜಮನೆತನದ ಕಾಲದಲ್ಲಿ ೫ನೇ ಶತಕದಲ್ಲಿ ಆಗಿತ್ತು.

ಹಿಜಾಬ್ ನೆಪದಲ್ಲಿ ನ್ಯಾಯಾಲಯದ ಆದೇಶದ ಉಲ್ಲಂಘಿಸುವ ಹಾಗೂ ಹಿಂದೂಗಳ ಮೇಲೆ ಹಲ್ಲೆ ನಡೆಸುವವರ ಮೇಲೆ ಕ್ರಮಕೈಗೊಳ್ಳಿ !

ಕರ್ನಾಟಕ ಉಚ್ಚ ನ್ಯಾಯಾಲಯವು ಸದ್ಯ ಶಾಲೆಗಳಲ್ಲಿ ಯಾವುದೇ ಧಾರ್ಮಿಕ ಚಿಹ್ನೆ ಬಳಸದಂತೆ ಮಧ್ಯಂತರ ಆದೇಶವನ್ನು ನೀಡಿದರೂ ಸಹ ರಾಜ್ಯದ ಅನೇಕ ಶಾಲೆಗಳಲ್ಲಿ ಅನ್ಯ ಸಮುದಾಯದ ಮಕ್ಕಳು, ಶಿಕ್ಷಕರು ಹಿಜಾಬ್, ಬುರ್ಖಾ ಧರಿಸಿ ತರಗತಿಯಲ್ಲಿ ಭಾಗವಹಿಸಿ, ಮಾನ್ಯ ನ್ಯಾಯಾಲಯದ ಆದೇಶದ ನಿಂದನೆಯಾಗುತ್ತಿರುವುದು ಗಮನಕ್ಕೆ ಬರುತ್ತಿದೆ.

ಭಾಗ್ಯನಗರ(ತೇಲಂಗಾಣಾ)ದಲ್ಲಿ ೧೦ ವರ್ಷದ ಹುಡುಗನ ಲೈಂಗಿಕ ಶೋಷಣೆ ಮಾಡಿದ ಪ್ರಕರಣದಲ್ಲಿ ಮೌಲ್ವಿಯ ಬಂಧನ !

ದಾರೂಲ ಉಲೂಮ ಮದರಸಾದಲ್ಲಿ ೧೦ ವರ್ಷದ ಒಬ್ಬ ಹುಡುಗನ ಮೇಲೆ ಲೈಂಗಿಕ ಅತ್ಯಾಚಾರ ಮಾಡಿರುವ ಪ್ರಕರಣ ಇಲ್ಲಿಯ ಅರಬ್ಬಿ ಭಾಷೆ ಕಲಿಸುವ ೨೫ ವರ್ಷದ ಮೌಲಾನಾ ಶೋಯಬ ಅಖ್ತರನನ್ನು ಬಂಧಿಸಲಾಗಿದೆ.

ಬುರ್ಖಾ ಮತ್ತು ಹಿಜಾಬ ಇವು ಮುಸಲ್ಮಾನ ಮಹಿಳೆಯರ ಮೇಲಿನ ಅತ್ಯಾಚಾರ ಮತ್ತು ಅಪಮಾನಗಳ ಪ್ರತೀಕವಾಗಿದೆ ! – ತಸ್ಲೀಮಾ ನಸರೀನ

ಓರ್ವ ಮಹಿಳೆಗೆ ಹಿಜಾಬ ಧರಿಸಲು ಬಾಧ್ಯಳಾಗಿಸುವಾಗ ನಾನು ಹಿಜಾಬನ್ನು ಎಸೆಯುವ ಪಕ್ಷದಲ್ಲಿರುತ್ತೇನೆ. ವೈಯಕ್ತಿಕವಾಗಿ ನಾನು ಬುರ್ಖಾ ಮತ್ತು ಹಿಜಾಬಗಳ ವಿರೋಧಿಯಾಗಿದ್ದೇನೆ. ನನಗೆ ‘ಮಹಿಳೆಯರಿಗೆ ಬುರ್ಖಾ ಧರಿಸಲು ಬಾಧ್ಯಳನ್ನಾಗಿಸುವವರು ಪಿತೃಶಾಹಿಗಳಾಗಿದ್ದಾರೆ’, ಎಂದು ತಸ್ಲೀಮಾ ನಸರೀನರವರು ಲೇಖನದಲ್ಲಿ ವ್ಯಕ್ತಪಡಿಸಿದ್ದಾರೆ