ಮಧ್ಯಪ್ರದೇಶದಲ್ಲಿ ಸರಕಾರದಿಂದ ಮತಾಂಧ ಆರೋಪಿಯ ಅಕ್ರಮ ಕಟ್ಟಡಗಳ ಮೇಲೆ ಕ್ರಮ

ಮತಾಂಧರಿಂದ ಅಕ್ರಮವಾಗಿ ಕಟ್ಟಡ ಕಟ್ಟುವವರೆಗೂ ಸರಕಾರ ನಿದ್ದೆ ಮಾಡುತ್ತಿತ್ತೆ ?

ಭೋಪಾಲ (ಮಧ್ಯಪ್ರದೇಶ) – ರಾಜ್ಯದಲ್ಲಿ ಶಹಡೊಲ ಇಲ್ಲಿಯ ಬಲಾತ್ಕಾರದ ಆರೋಪಿ ಶಾದಾಬ್ ಖಾನ್ ಇವನ ಮನೆ ಬುಲ್ಡೋಜರದಿಂದ ನೆಲಸಮ ಮಾಡಲಾಗಿದೆ. ಮನೆ ನೆಲಸಮ ಮಾಡುವ ಮೊದಲು ಶಾದಾಬ ಖಾನ್ ಇವನ ಪತ್ನಿಗೆ ನೋಟಿಸ್ ಜಾರಿಗೊಳಿಸಿತ್ತು. ಇನ್ನೊಂದೆಡೆಗೆ ರತಾಲಾಮ ಜಿಲ್ಲೆಯ ಜಾವರನಲ್ಲಿ ಅಪಹರಣದ ಪ್ರಕರಣದಲ್ಲಿನ ಆರೋಪಿ ಜಹಿರವುದ್ದಿನ ಅಲಿಯಾಸ್ ಫೌಜಿ, ಫಿರೋಜ್ ಮತ್ತು ಅಯ್ಯೂಬ್ ಅಲಿಯಾಸ್ ಲಾಲಾ ಇವರನ್ನು ಪೊಲೀಸರು ಬಂಧಿಸಿ ರಸ್ತೆಯಲ್ಲಿಯೇ ನಡೆಸಿ ನ್ಯಾಯಾಲಯದಲ್ಲಿ ಹಾಜರುಪಡಿಸಿದರು. ಜೊತೆಗೆ ಮುಖ್ಯ ಆರೋಪಿ ಭೂರು, ಜಹರ್ ಉದ್ದಿನ ಅಲಿಯಾಸ್ ಫೌಜಿ ಮತ್ತು ಉಮರ್ ಖಾನ್ ಇವರ ಅಕ್ರಮ ಕಟ್ಟಡದ ಮೇಲೆ ಕ್ರಮ ಕೈಗೊಂಡು ನೆಲಸಮಮಾಡಲಾಯಿತು. ಸಾಲವಾಗಿ ಕೊಟ್ಟಿರುವ ದುಡ್ಡಿನ ಬಡ್ಡಿಯ ಹಣದ ಬಗ್ಗೆ ನಿರ್ಮಾಣವಾಗಿರುವ ವಿವಾದದಲ್ಲಿ ಆರೋಪಿಯು ಕರಣ ಸಿಂಹ ಎಂಬ ಯುವಕನನ್ನು ಅಪಹರಿಸಿದ್ದರು.