ಪರೀಕ್ಷೆಯನ್ನು ಬಹಿಷ್ಕರಿಸಿದ ಹಿಜಾಬ್ ಬೆಂಬಲಿಸುವ ವಿದ್ಯಾರ್ಥಿನಿಯರಿಗೆ ಮತ್ತೆ ಪರೀಕ್ಷೆ ಬರೆಯಲು ಅವಕಾಶವಿಲ್ಲ ! – ಕರ್ನಾಟಕ ಸರಕಾರ

ಬೆಂಗಳೂರು – ಕರ್ನಾಟಕ ಉಚ್ಚ ನ್ಯಾಯಾಲಯದ ಆದೇಶದ ನಂತರವೂ ಸಹ ಮುಸಲ್ಮಾನ ವಿದ್ಯಾರ್ಥಿನಿ ಹಿಜಾಬ್ ಧರಿಸದೆ ಶಾಲೆಗೆ ಬರಲು ನಿರಾಕರಿಸಿದ್ದಾರೆ. ಆದ್ದರಿಂದ ಈಗ ರಾಜ್ಯ ಸರಕಾರ ಕಠೋರ ನಿಲುವು ತಾಳುತ್ತ ಪ್ರಾಯೋಗಿಕ ಪರೀಕ್ಷೆಗೆ ಹಾಜರಿರದ ಹಿಜಬ್ ಪರವಾಗಿ ಆಂದೋಲನ ಮಾಡುವ ವಿದ್ಯಾರ್ಥಿನಿಯರಿಗೆ ಮತ್ತೆ ಪರೀಕ್ಷೆ ಬರೆಯಲು ಅವಕಾಶ ನೀಡಲಾಗುವುದಿಲ್ಲ ಎಂದು ನಿರ್ಣಯ ಕೈಗೊಂಡಿದೆ. ಫೆಬ್ರವರಿ ತಿಂಗಳಿನಲ್ಲಿ ಕೆಲವು ವಿದ್ಯಾರ್ಥಿನಿಯರು ಹಿಜಬ್‌ಅನ್ನು ಬೆಂಬಲಿಸಿ ಪ್ರಾಯೋಗಿಕ ಪರೀಕ್ಷೆಯನ್ನು ಬಹಿಷ್ಕರಿಸಿದ್ದರು. ಕರ್ನಾಟಕದ ಶಿಕ್ಷಣ ಇಲಾಖೆಯ ಪರೀಕ್ಷೆಯಲ್ಲಿ ಪ್ರಾಯೋಗಿಕ ಪರೀಕ್ಷೆಗೆ ೩೦ ಅಂಕಗಳು ಇರುತ್ತವೆ ಹಾಗೂ ೭೦ ಅಂಕಗಳು ಲಿಖಿತ ಪರೀಕ್ಷೆಗೆ ಇರುತ್ತವೆ. ಆದ್ದರಿಂದ ಪ್ರಾಯೋಗಿಕ ಪರೀಕ್ಷೆ ಬಹಿಷ್ಕರಿಸಿರುವುದರಿಂದ ವಿದ್ಯಾರ್ಥಿನಿಯರ ನೇರ ೩೦ ಅಂಕಗಳು ನಷ್ಟವಾಗುವುದು.

ಕರ್ನಾಟಕದ ಶಿಕ್ಷಣ ಸಚಿವ ಬಿ.ಸಿ. ನಾಗೇಶ್ ಇವರು ಪರೀಕ್ಷೆಯ ಕುರಿತು ಸರಕಾರದ ನಿಲುವು ಸ್ಪಷ್ಟ ಪಡಿಸುತ್ತಾ, ನಾವು ಮತ್ತೆ ಪರೀಕ್ಷೆ ತೆಗೆದುಕೊಳ್ಳುವ ಸಾಧ್ಯತೆಗಳ ಮೇಲೆ ಯೋಚನೆಯಾದರೂ ಹೇಗೆ ಮಾಡಲು ಸಾಧ್ಯ ? ಹಿಜಾಬ್‌ಗಾಗಿ ಪರೀಕ್ಷೆ ಬಹಿಷ್ಕರಿಸುವ ವಿದ್ಯಾರ್ಥಿನಿಗಳಿಗೆ ನಾವು ಉಚ್ಚ ನ್ಯಾಯಾಲಯದ ಮಧ್ಯಂತರ ಆದೇಶದ ನಂತರ ಮತ್ತೆ ಅವಕಾಶ ನೀಡಿದರೇ, ನಾಳೆ ಇತರ ವಿದ್ಯಾರ್ಥಿಗಳು ಬೇರೆ ಕಾರಣಗಳನ್ನು ಹೇಳಿ ಪುನಃ ಪರೀಕ್ಷೆ ನಡೆಸಲು ಒತ್ತಾಯಿಸುವರು. ಆದ್ದರಿಂದ ಮತ್ತೆ ಪರೀಕ್ಷೆ ತೆಗೆದುಕೊಳ್ಳುವುದು ಅಸಾಧ್ಯ.; ಆದರೆ ಶಾಲೆಯ ಮಟ್ಟದಲ್ಲಿ ತೆಗೆದುಕೊಳ್ಳುವ ೮ ನೇ ತರಗತಿ ೯ ನೇ ತರಗತಿ, ಮತ್ತು ೧೧ ನೇ ತರಗತಿ ವಿದ್ಯಾರ್ಥಿನಿಗಳಿಗೆ ಮತ್ತೆ ಪರೀಕ್ಷೆಯ ಅವಕಾಶ ನೀಡಬಹುದು, ಎಂದು ಸ್ಪಷ್ಟಪಡಿಸಿದರು.