ರಾಯಸೇನ (ಮಧ್ಯಪ್ರದೇಶ) ಇಲ್ಲಿ ಹಿಂದೂಗಳ ಮೇಲೆ ದಾಳಿ ಮಾಡಿದ ಮತಾಂದರ ಅಕ್ರಮ ಕಟ್ಟಡಗಳ ಮೇಲೆ ಸರಕಾರದಿಂದ ಕಾರ್ಯಾಚರಣೆ

ಈ ಮತಾಂಧರಿಂದ ಹಿಂದೂಗಳ ಮೇಲೆ ದಾಳಿ ನಡೆಯದಿದಿದ್ದರೆ, ಅವರ ಈ ಅಕ್ರಮ ಕಟ್ಟಡಗಳ ಮೇಲೆ ಕ್ರಮಕೈಗೊಳ್ಳಲಾಗುತ್ತಿರಲಿಲ್ಲ, ಎಂದು ಇದರಿಂದ ತಿಳಿಯಬೇಕೆ ?

ಈ ಕಟ್ಟಡ ನಿರ್ಮಾಣವಾಗುವವರೆಗೆ ಆಡಳಿತ ನಿದ್ದೆ ಮಾಡುತ್ತಿತ್ತೆ ? ಹೀಗೆ ಇನ್ನು ಎಷ್ಟು ಅಕ್ರಮ ಕಟ್ಟಡಗಳನ್ನು ಮತಾಂಧರು ನಿರ್ಮಿಸಿದ್ದಾರೆ, ಇದನ್ನು ಮಧ್ಯಪ್ರದೇಶ ಸರಕಾರ ಕಂಡುಹಿಡಿದು ಅದರ ಮೇಲೆ ಕ್ರಮ ಕೈಗೊಳ್ಳುವರೇ ?

ರಾಯಸೆನ (ಮಧ್ಯಪ್ರದೇಶ) – ಇಲ್ಲಿಯ ಖಮರಿಯಾ ಗ್ರಾಮದಲ್ಲಿ ಹೋಳಿಯ ದಿನದಂದು ಮತಾಂಧರು ಆದಿವಾಸಿ ಹಿಂದೂಗಳ ಮೇಲೆ ನಡೆಸಿದ ದಾಳಿಯಲ್ಲಿ ಓರ್ವ ಆದಿವಾಸಿ ಹಿಂದೂ ಸಾವನ್ನಪ್ಪಿದನು ಹಾಗೂ ೫೦ ಕ್ಕೂ ಹೆಚ್ಚಿನ ಜನರು ಗಾಯಗೊಂಡಿದ್ದರು. ಅದರ ನಂತರ ಈಗ ಸರಕಾರ ಆರೋಪಿ ಮತಾಂಧರ ಅನಧಿಕೃತ ಕಟ್ಟಡಗಳ ಮೇಲೆ ಕ್ರಮ ಕೈಗೊಳ್ಳುತ್ತಿದ್ದಾರೆ. ಜಿಲ್ಲಾಡಳಿತ, ಅರಣ್ಯ ಇಲಾಖೆಯ ಸಹಾಯದಿಂದ ಈ ಆರೋಪಿಗಳ ಅಕ್ರಮ ಕಟ್ಟಡಗಳ ಮೇಲೆ ಬುಲ್ಡೋಜರ್‌ದಿಂದ ನೆಲಸಮ ಮಾಡಿದರು ಹಾಗೂ ಬೆಲೆಬಾಳುವ ಮರದ ವಸ್ತುಗಳು ವಶಪಡಿಸಿಕೊಂಡರು. ಒಟ್ಟು ೧೬ ರಲ್ಲಿ ೧೩ ಆರೋಪಿಗಳನ್ನು ಬಂಧಿಸಿದ್ದಾರೆ. (ಈ ಆರೋಪಿಗಳಿಗೆ ಗಲ್ಲು ಶಿಕ್ಷೆಯಾಗಲು ಸರಕಾರ ಪ್ರಯತ್ನಿಸಬೇಕು, ಎಂದು ಹಿಂದೂಗಳಿಗೆ ಅನಿಸುತ್ತದೆ ! – ಸಂಪಾದಕರು)