ಸೂಪೌಲ (ಬಿಹಾರ) ಇಲ್ಲಿಯ ಮತಾಂಧ ಸರಪಂಚ ಮತ್ತು ಅವನ ಸಹಚರರಿಂದ ಒಂದು ಮನೆಗೆ ನುಗ್ಗಿ ಹುಡುಗಿಗೆ ಕಿರುಕುಳ ನೀಡುವ ಪ್ರಯತ್ನ !

  • ವಿರೋಧಿಸುವವರಿಗೆ ಕಬ್ಬಿಣದ ಸಲಾಕೆಯಿಂದ ಥಳಿತ

  • ಚೂಪಾದ ಶಸ್ತ್ರದಿಂದ ಹುಡುಗಿಯ ಮೂಗನ್ನು ಕತ್ತರಿಸಿದರು

ಬಿಹಾರ ಮತ್ತೆ ಜಂಗಲ ರಾಜ್‌ನ ದಿಕ್ಕಿನತ್ತ ನಡೆಯುತ್ತಿದೆ, ಎಂದು ಇದರಿಂದ ಕಂಡುಬರುತ್ತದೆ !

ಸುಪೌಲ (ಬಿಹಾರ) – ಇಲ್ಲಿಯ ಲೋಧ ಗ್ರಾಮದ ಸರಪಂಚ ಮಹಮ್ಮದ ಮುಸ್ತಕಿನ ಇವನು ತನ್ನ ಸಹಚರರ ಜೊತೆ ಒಂದು ಮನೆಗೆ ನುಗ್ಗಿ ೩ ಹೆಣ್ಣು ಮಕ್ಕಳಿಗೆ ಕಿರುಕುಳ ನೀಡಲು ಪ್ರಯತ್ನ ಮಾಡಿದರು. ಇದ್ದಕ್ಕೆ ಹೆಣ್ಣು ಮಕ್ಕಳು ವಿರೋಧಿಸಿದ ನಂತರ ಮುಸ್ಕಿನ ಇವನು ಹರಿತವಾದ ಶಸ್ತ್ರದಿಂದ ಓರ್ವ ಹೆಣ್ಣು ಮಗುವಿನ ಮೂಗು ಕತ್ತರಿಸಿದನು ಹಾಗೂ ಆಕೆಯ ತಂದೆ, ತಾಯಿ ಮತ್ತು ಸಹೋದರಿಯರ ಮೇಲೆ ಕಬ್ಬಿಣದ ಸಲಾಕೆಯಿಂದ ದಾಳಿ ನಡೆಸಿದರು.

ಅದರ ನಂತರ ಅವರ ಮನೆಯಲ್ಲಿನ ೫೦ ಸಾವಿರ ರೂಪಾಯಿ ಮತ್ತು ಒಂದು ಬ್ಯಾಗ್ ತೆಗೆದುಕೊಂಡು ಪರಾರಿಯಾದರು. ಗಾಯಗೊಂಡಿರುವವರಿಗೆ ಆಸ್ಪತ್ರೆಯಲ್ಲಿ ಚಿಕಿತ್ಸೆ ನೀಡಲಾಗುತ್ತಿದೆ. ಈ ಪ್ರಕರಣದಲ್ಲಿ ಪೊಲೀಸರಲ್ಲಿ ದೂರನ್ನು ದಾಖಲಿಸಿದ್ದಾರೆ.