ದೇವತೆಗಳು ಪ್ರಾಚೀನ ಮೂರ್ತಿಗಳು ಕಳವಾಗಬಾರದು, ಅದಕ್ಕಾಗಿ ಸರಕಾರ ಇನ್ನಾದರೂ ಕಠಿಣ ಹೆಜ್ಜೆಗಳನ್ನು ಇಡುವುದೇ ?
ನವ ದೆಹಲಿ – ಭಾರತದಿಂದ ಕಳವು ಮಾಡಿದ್ದ ೨೯ ಪ್ರಾಚೀನ ವಸ್ತುಗಳು ಆಸ್ಟ್ರೇಲಿಯಾದಿಂದ ಭಾರತಕ್ಕೆ ಹಿಂಪಡೆಯಲಾಗಿದೆ. ಇದರಲ್ಲಿ ಮುಖ್ಯವಾಗಿ ದೇವತೆಗಳ ಚಿತ್ರಗಳು, ಮೂರ್ತಿ ಮತ್ತು ಶಿಲ್ಪ ಇದರ ಸಮಾವೇಶವಿದೆ. ಹಿಮಾಚಲ ಪ್ರದೇಶ, ರಾಜಸ್ಥಾನ, ಮಧ್ಯಪ್ರದೇಶ, ಗುಜರಾತ, ಬಂಗಾಲ, ತೆಲಂಗಾಣ, ತಮಿಳುನಾಡು ಮುಂತಾದ ರಾಜ್ಯಗಳಿಂದ ಈ ವಸ್ತುಗಳು ಕಳುವಾಗಿದ್ದವು. ಆಯಾ ಸಂಬಂಧಪಟ್ಟ ರಾಜ್ಯಗಳಿಗೆ ಮತ್ತೆ ಒಪ್ಪಿಸಲಾಗುವುದು. ಪ್ರಧಾನಿ ನರೇಂದ್ರ ಮೋದಿಯವರು ಈ ಪ್ರಾಚೀನ ಮೂರ್ತಿಗಳ ನಿರೀಕ್ಷಣೆ ಮಾಡಿದರು ಮತ್ತು ಆಸ್ಟ್ರೇಲಿಯಾಗೆ ಈ ಬಗ್ಗೆ ವಿಶೇಷ ಧನ್ಯವಾದ ನೀಡಿದ್ದಾರೆ. ಇದರಲ್ಲಿ ಕೆಲವು ಮೂರ್ತಿ ಇವುಗಳು ೯ನೇ ಮತ್ತು ೧೦ ನೇ ಶತಮಾನದ್ದಾಗಿದೆ ಮತ್ತು ಇತರ ಮೂರ್ತಿಗಳು ನೂರಾರು ವರ್ಷಗಳಷ್ಟು ಪ್ರಾಚೀನವಾಗಿದೆ. ಈ ಪ್ರಾಚೀನ ವಸ್ತುಗಳಲ್ಲಿ ಶಿವ ಮತ್ತು ಅವರ ಶಿಷ್ಯರು, ಶಕ್ತಿಯ ಪೂಜೆ, ಭಗವಾನ್ ವಿಷ್ಣು ಮತ್ತು ಅವರ ರೂಪಗಳು, ಜೈನ ಪರಂಪರೆ, ಚಿತ್ರಗಳು ಮತ್ತು ಅಲಂಕಾರಿಕ ವಸ್ತುಗಳು ಒಳಗೊಂಡಿವೆ.
In a historic move, 29 antiquities have been repatriated to #India by #Australia. Take a look @PMOIndia @NarendraModi @ScottMorrisonMP @priyadarshi108 #IndiaAustralia pic.twitter.com/iJJzGhwEUe
— ET NOW (@ETNOWlive) March 21, 2022