‘ದ ಕಶ್ಮೀರ ಫಾಯಿಲ್ಸ್‌ ಚಲನಚಿತ್ರದಿಂದ ‘ಗಂಗಾ-ಜಮುನಿ’ ಸಂಸ್ಕೃತಿಯನ್ನು ಒಡೆಯುವ ಕಾರ್ಯ ನಡೆಯುತ್ತಿದೆ !’ (ಅಂತೆ)

ಸಮಾಜವಾದಿ ಪಕ್ಷದ ಶಾಸಕರಾದ ಎಸ್‌. ಟಿ. ಹಸನರವರ ದಡ್ಡತನ !

* ಈ ದೇಶದಲ್ಲಿ ತಥಾಕಥಿತ ‘ಗಂಗಾ-ಜಮುನಿ’ ಸಂಸ್ಕೃತಿಯ ಹೆಸರಿನಡಿಯಲ್ಲಿ ಇಂದಿನ ವರೆಗೆ ಹಿಂದೂಗಳ ಮೇಲೆ ಮತಾಂಧರಿಂದ ಅತ್ಯಾಚಾರಗಳು ನಡೆದವು ಮತ್ತು ಇಂದಿಗೂ ನಡೆಯುತ್ತಿವೆ. ಹಿಂದೂಗಳು ಮತಾಂಧರ ಇಂತಹ ಮೋಸದ ಸಂಗತಿಗಳನ್ನು ಗುರುತಿಸಿ ಧೈರ್ಯದಿಂದ ಅವರಿಗೆ ಸತ್ಯವನ್ನು ಹೇಳಬೇಕು ! -ಸಂಪಾದಕರು 

(ಉತ್ತರ ಭಾರತದಲ್ಲಿ ಇಸ್ಲಾಮಿ ಆಕ್ರಮಣಕಾರರು ಮುಂದೆ ಹಿಂದೂಗಳೊಂದಿಗೆ ಇರಲು ಆರಂಭಿಸಿದ್ದರಿಂದ ಎರಡೂ ಧರ್ಮಗಳೂ ಸೇರಿ ಒಂದು ವಿಭಿನ್ನ ಸಂಸ್ಕೃತಿ ನಿರ್ಮಾಣವಾಯಿತು, ಅದಕ್ಕೆ ಮುಂದೆ ‘ಗಂಗಾ-ಜಮುನಿ ಸಂಸ್ಕೃತಿ’ ಎಂದೂ ಕರೆಯಲಾಯಿತು.)

ಸಮಾಜವಾದಿ ಪಕ್ಷದ ಶಾಸಕರಾದ ಎಸ್‌. ಟಿ. ಹಸನ (ಬಲ)

ಮುರಾದಾಬಾದ (ಉತ್ತರಪ್ರದೇಶ) – ಕಾಶ್ಮೀರಿ ಹಿಂದೂಗಳ ದುಃಖವು ನಮ್ಮ ಹೃದಯದಲ್ಲಿಯೂ ಇದೆ. ಅವರು ತಮ್ಮದೇ ದೇಶದಲ್ಲಿ ನಿರಾಶ್ರಿತರಾಗಿದ್ದಾರೆ; ಆದರೆ ಅದಕ್ಕೆ ಇಷ್ಟೊಂದು ಮಹತ್ವ ನೀಡಿ ನಮ್ಮ ಗಂಗಾ-ಜಮುನಿ ಸಂಸ್ಕೃತಿಯನ್ನು ಒಡೆಯುವ ಕಾರ್ಯ ನಡೆಯುತ್ತಿದೆ. ದ್ವೇಷವನ್ನು ಹೆಚ್ಚಿಸಲಾಗುತ್ತಿದೆ. (ಮತಾಂಧರು ಹಿಂದೂಗಳ ಮೇಲೆ ಮಾಡಿರುವ ಅತ್ಯಾಚಾರಗಳನ್ನು ಜಗತ್ತಿನ ಎದುರು ತಂದಾಗ ತಥಾಕಥಿತ ಗಂಗಾ-ಜಮುನಿಯ ಸತ್ಯತೆಯು ಬೆಳಕಿಗೆ ಬರುತ್ತಿದೆ. ಆದುದರಿಂದ ಈಗ ಮತಾಂಧರಿಗೆ ಕಷ್ಟವಾಗುತ್ತಿದೆ. ಆದುದರಿಂದಲೇ ಅವರು ಇಂತಹ ಹೇಳಿಕೆಗಳನ್ನು ನೀಡಲು ಆರಂಭಿಸಿದ್ದಾರೆ ! – ಸಂಪಾದಕರು) ಆದುದರಿಂದ ‘ದ ಕಶ್ಮೀರ ಫಾಯಿಲ್ಸ್‌’ ಚಲನಚಿತ್ರದ ಮೇಲೆ ನಿರ್ಬಂಧವನ್ನು ಹೇರಬೇಕಿದೆ. ಈ ಚಲನಚಿತ್ರಕ್ಕೆ ಅನುಮತಿಯನ್ನು ನೀಡಿದರೆ ನಾಳೆ ಮುರಾದಾಬಾದ, ಭಾಗಲಪೂರ ಮತ್ತು ಗುಜರಾತಿನಲ್ಲಿ ನಡೆದಿರುವ ದಂಗೆಗಳ ಮೇಲೆಯೂ ಚಲನಚಿತ್ರವನ್ನು ನಿರ್ಮಿಸಬಹುದು. ಈ ಮಾಲಿಕೆಯು ನಿಲ್ಲುವುದು ಯಾವಾಗ ? ಎಂಬ ದಡ್ಡತನದ ಹೇಳಿಕೆಯನ್ನು ಅಲ್ಲಿನ ಸಮಾಜವಾದಿ ಪಕ್ಷದ ಶಾಸಕರಾದ ಎಸ್‌. ಟಿ. ಹಸನ ರವರು ನೀಡಿದ್ದಾರೆ.