‘ಮುಸಲ್ಮಾನರಿಗೆ ವ್ಯಾಪಾರ ಮಾಡಲು ಅನುಮತಿ ನೀಡಬೇಕು !’ (ಅಂತೆ) – ಮುಸಲ್ಮಾನ ವ್ಯಾಪಾರಿ ಸಂಘಟನೆಯ ಬೇಡಿಕೆ

ಉಡುಪಿಯಲ್ಲಿನ ಕಾಪು ಮಾರಿಗುಡಿ ಜಾತ್ರೆಯಲ್ಲಿ ಮುಸಲ್ಮಾನ ವ್ಯಾಪಾರಿಗಳ ಮೇಲೆ ನಿರ್ಬಂಧ ಹೇರಿರುವ ಪ್ರಕರಣ

ಹಿಜಾಬಿನ ವಿಷಯದಲ್ಲಿ ಕರ್ನಾಟಕ ಉಚ್ಚ ನ್ಯಾಯಾಲಯದ ತೀರ್ಪಿನ ವಿರುದ್ಧ ವ್ಯಾಪಾರಿಗಳೂ ಆಂದೋಲನವನ್ನು ಮಾಡಿದ್ದರಿಂದ ಅವರಿಗೆ ಹಿಂದೂಗಳ ಜಾತ್ರೆಯಲ್ಲಿ ವ್ಯಾಪಾರ ನಡೆಸಲು ನಿರ್ಬಂಧ ಹೇರಲಾಗಿದೆ !

* ಹಿಂದೂಗಳು ನೇರವಾದ ಸ್ಥಿತಿಯನ್ನು ಅವಲಂಬಿಸಿದರೆ ಏನಾಗುತ್ತದೆ, ಎಂಬುದು ಇದರಿಂದ ಕಂಡು ಬರುತ್ತದೆ ! ಈಗ ಎಲ್ಲೆಡೆ ಹಿಂದೂಗಳು ಇಂತಹ ಸ್ಥಿತಿಯನ್ನು ಅವಲಂಭಿಸಿದರೆ ಆಶ್ಚರ್ಯವೆನಿಸಬಾರದು ! – ಸಂಪಾದಕರು 

ಉಡುಪಿ (ಕರ್ನಾಟಕ) – ಜಿಲ್ಲೆಯಲ್ಲಿನ ಕಾಪು ಮಾರಿಗುಡಿ ಜಾತ್ರೆಯೊಂದಿಗೆ ಕರಾವಳಿ ಉತ್ಸವ, ರಥೋತ್ಸವ ಹಾಗೂ ಧಾರ್ಮಿಕ ಕಾರ್ಯಕ್ರಮಗಳಲ್ಲಿ ಮುಸಲ್ಮಾನ ವ್ಯಾಪಾರಿಗಳಿಗೆ ವ್ಯಾಪಾರ ಮಾಡುವ ಅನುಮತಿ ನೀಡಬೇಕು ಎಂದು ರಸ್ತೆಯ ಮೇಲೆ ಚಿಲ್ಲರೆ ವ್ಯಾಪಾರ ಮಾಡುವ ಹಾಗೂ ಜಾತ್ರೆಯಲ್ಲಿ ವ್ಯಾಪಾರ ಮಾಡುವ ಸಂಘಟನೆಯ ಪ್ರಮುಖರಾದ ಮಹಮ್ಮದ ಆರಿಫರವರು ಪತ್ರಿಕಾ ಪರಿಷತ್ತಿನಲ್ಲಿ ಮನವಿ ಮಾಡಿದ್ದಾರೆ. ಕರ್ನಾಟಕ ಉಚ್ಚ ನ್ಯಾಯಾಲಯವು ಶೈಕ್ಷಣಿಕ ಸಂಸ್ಥೆಗಳಲ್ಲಿ ಹಿಜಾಬನ್ನು ಧರಿಸುವುದು ಅನಿವಾರ್ಯವಲ್ಲ ಎಂಬ ತೀರ್ಪು ನೀಡಿದ್ದರಿಂದ ರಾಜ್ಯದಲ್ಲಿ ಅನೇಕ ಕಡೆಗಳಲ್ಲಿ ಬಂದ್‌ ನಡೆಸಲಾಗಿತ್ತು. ಇದರಲ್ಲಿ ಹಿಂದೂಗಳ ದೇವಸ್ಥಾನಗಳ ಜಾಗದಲ್ಲಿ ಅಂಗಡಿಗಳನ್ನು ಹಾಕಿರುವ ಮುಸಲ್ಮಾನರೂ ಸಹಭಾಗಿಯಾಗಿದ್ದರು. ಆದುದರಿಂದ ಈಗ ಅವರ ಅಂಗಡಿಗಳಿಗೆ ಅನುಮತಿಯನ್ನು ನಿರಾಕರಿಸಲಾಗಿದೆ.

ಆರಿಫರವರು ಮಾತನಾಡುತ್ತ ‘ಅನೇಕ ವರ್ಷಗಳಿಂದ ಹಿಂದೂಗಳ ಧಾರ್ಮಿಕ ಕಾರ್ಯಕ್ರಮಗಳಲ್ಲಿ ನಾವು ವ್ಯಾಪಾರ ಮಾಡಿ ಧಾರ್ಮಿಕ ಐಕ್ಯತೆಯನ್ನು ಕಾಪಾಡಿಕೊಂಡು ಬಂದಿದ್ದೇವೆ. ಆದರೆ ಇತ್ತೀಚೆಗೆ ಹಿಂದೂಗಳ ಕಾರ್ಯಕ್ರಮದಲ್ಲಿ ಮುಸಲ್ಮಾನ ವ್ಯಾಪಾರಿಗಳ ಮೇಲೆ ನಿರ್ಬಂಧ ಹೇರಲಾಗುತ್ತಿದೆ. ಹಿಜಾಬ ಪ್ರಕರಣದಲ್ಲಿ ನ್ಯಾಯಾಲಯದ ನಿರ್ಣಯದ ವಿರುದ್ಧ ಅಸಮಾಧಾನವನ್ನು ವ್ಯಕ್ತಪಡಿಸಿ ಮುಸಲ್ಮಾನ ವ್ಯಾಪಾರಿಗಳು ಬಂದ್‌ಗೆ ಕರೆ ನೀಡಿದ್ದರಿಂದ ಹಿಂದೂಗಳ ಧಾರ್ಮಿಕ ಕಾರ್ಯಕ್ರಮದಲ್ಲಿ ನಿರ್ಬಂಧವನ್ನು ಹೇರಲಾಗಿದೆ; ಆದರೆ ನಾವು ರಸ್ತೆಯ ಮೇಲೆ ಚಿಲ್ಲರೆ ವ್ಯಾಪಾರ ಮಾಡುವವರಾಗಿದ್ದು ‘ಬಂದ್‌’ಗೆ ಒಪ್ಪಿಗೆ ನೀಡಿರಲಿಲ್ಲ, ಆದರೂ ನಮ್ಮ ವ್ಯಾಪಾರದ ಮೇಲೆ ನಿರ್ಬಂಧವನ್ನು ಹೇರಲಾಗಿದೆ. ಹಿಂದೂಗಳ ಭಾವನೆಗಳಿಗೆ ನೋವಾಗದಂತೆ ನಾವು ವರ್ತಿಸುತ್ತ ಬಂದಿದ್ದೇವೆ. ಮುಂದೆಯೂ ಹೀಗೆಯೇ ವರ್ತಿಸುತ್ತೇವೆ. ಪರಸ್ಪರ ಅರ್ಥಮಾಡಿಕೊಂಡು, ದ್ವೇಷವನ್ನು ಬಿಟ್ಟು ಸೌಹಾರ್ದತೆಯಿಂದ ಜೀವನವನ್ನು ನಡೆಸೋಣ, ಎಂದು ಹೇಳಿದರು.