ಕಳೆದ 5 ವರ್ಷಗಳಲ್ಲಿ ಪಾಕಿಸ್ತಾನದ ಸೆರೆಮನೆಯಲ್ಲಿ 9 ಭಾರತೀಯರ ಸಾವು
ನವದೆಹಲಿ – ಪಾಕಿಸ್ತಾನ ಸರಕಾರವು ಘೋಷಿಸಿರುವ ಅಂಕಿಅಂಶಗಳ ಪ್ರಕಾರ ಪಾಕಿಸ್ತಾನದ ವಶದಲ್ಲಿ 577 ಭಾರತೀಯ ಮೀನುಗಾರರು ಇದ್ದಾರೆ. ಜನೆವರಿ 1, 2022 ದಿನದಂದು ಕೊಡುಕೊಳ್ಳುವ ಪಟ್ಟಿಯ ಪ್ರಕಾರ ಪಾಕಿಸ್ತಾನವು 577 ಮೀನುಗಾರರನ್ನು ವಶಪಡಿಸಿಕೊಂಡಿರುವುದು ಒಪ್ಪಿಕೊಂಡಿದೆ. ಜೊತೆಗೆ ಕಳೆದ 5 ವರ್ಷಗಳಲ್ಲಿ 9 ಭಾರತೀಯ ಮೀನುಗಾರರು ಪಾಕಿಸ್ತಾನದ ಕಾರಾಗೃಹದಲ್ಲಿ ಸಾವನ್ನಪ್ಪಿದ್ದಾರೆ. ಎಂಬ ಮಾಹಿತಿ ವಿದೇಶಾಂಗ ವ್ಯವಹಾರ ರಾಜ್ಯಸಚಿವರು ವಿ. ಮೂರಳಿಧರನ್ ಇವರು ರಾಜ್ಯಸಭೆಯಲ್ಲಿ ಭಾಜಪದ ಸಂಸದ ಮಹೇಶ ಪೊದ್ದಾರ ಇವರು ಕೇಳಿದ ಪ್ರಶ್ನೆಗೆ ಉತ್ತರಿಸುವಾಗ ಹೇಳಿದರು. ಭಾರತ ಮತ್ತು ಪಾಕಿಸ್ತಾನ ಇವರಲ್ಲಿ 2008 ರಲ್ಲಿ ಆಗಿರುವ ಒಪ್ಪಂದದ ಪ್ರಕಾರ ಎರಡು ದೇಶ ಪ್ರತಿವರ್ಷ ಜನವರಿ 1 ಮತ್ತು ಜುಲೈ 1 ರಂದು ತಮ್ಮ ತಮ್ಮ ದೇಶದಲ್ಲಿನ ಸೆರೆಮನೆಯಲ್ಲಿರುವ ನಾಗರಿಕರು ಮತ್ತು ಮೀನುಗಾರರ ಪಟ್ಟಿಯನ್ನು ಕೊಡು ಕೊಳ್ಳುವುದನ್ನು ಮಾಡುತ್ತದೆ.
577 Indian fishermen in Pakistan’s custody, 9 died in last five years: MEA https://t.co/HXNrZ95ajc
— Hindustan Times (@HindustanTimes) March 22, 2022
ವಿದೇಶಾಂಗ ವ್ಯವಹಾರಗಳ ರಾಜ್ಯ ಸಚಿವ ವಿ. ಮುರಳಿಧರನ್ ಇವರು ಮಾತು ಮುಂದುವರೆಸುತ್ತಾ, ಭಾರತ ಸರಕಾರದ ನಿರಂತರ ಪ್ರಯತ್ನದ ಪರಿಣಾಮವೆಂದು 2014 ರಿಂದ 2 ಸಾವಿರ 140 ಭಾರತೀಯ ಮೀನುಗಾರರು ಮತ್ತು 57 ಭಾರತೀಯ ಮೀನುಗಾರರ ದೋಣಿಗಳು ಪಾಕಿಸ್ತಾನದಿಂದ ಮರಳಿ ತೆಗೆದುಕೊಂಡಿದ್ದಾರೆ.