ಭಾಜಪವು ಪಾಕಿಸ್ತಾನ ವ್ಯಾಪ್ತ ಕಾಶ್ಮೀರವನ್ನೂ ಸ್ವತಂತ್ರಗೊಳಿಸುವುದು ! – ಕೇಂದ್ರೀಯ ಮಂತ್ರಿ ಜಿತೇಂದ್ರ ಸಿಂಹ

* ಇದು ರಾಷ್ಟ್ರಪ್ರೇಮಿಗಳ ಬಹಳ ಹಿಂದಿನಿಂದಲೇ ಇರುವ ಇಚ್ಛೆಯಾಗಿರುವುದರಿಂದ ಅದನ್ನು ಆದಷ್ಟು ಬೇಗ ಪೂರ್ಣಗೊಳಿಸಬೇಕು, ಎಂದು ರಾಷ್ಟ್ರಪ್ರೇಮಿಗಳಿಗೆ ಅನಿಸುತ್ತದೆ !- ಸಂಪಾದಕರು 

ಜಿತೇಂದ್ರ ಸಿಂಹ( ಎಡದಲ್ಲಿ)

ಜಮ್ಮು – ಯಾವ ರೀತಿಯಲ್ಲಿ ಕಾಶ್ಮೀರಕ್ಕಾಗಿರುವ ಕಲಂ ೩೭೦ನ್ನು ರದ್ದುಗೊಳಿಸಲಾಯಿತು, ಹಾಗೆಯೇ ಪ್ರಧಾನಮಂತ್ರಿಗಳ ನೇತೃತ್ವದಲ್ಲಿ ಭಾಜಪ ಸರಕಾರವು ಪಾಕಿಸ್ತಾನವು ವ್ಯಾಪಿಸಿರುವ ಕಾಶ್ಮೀರಕ್ಕೆ ಸ್ವಾತಂತ್ರ್ಯವನ್ನು ದೊರಕಿಸಿ ಕೊಡುವ ಸಂಕಲ್ಪವನ್ನು ಪೂರ್ಣಗೊಳಿಸುವುದು, ಎಂಬ ಹೇಳಿಕೆಯನ್ನು ಕೇಂದ್ರೀಯ ಮಂತ್ರಿಗಳಾದ ಜಿತೇಂದ್ರ ಸಿಂಹರವರು ನೀಡಿದ್ದಾರೆ. ಜಿತೇಂದ್ರ ಸಿಂಹರವರು ಕಠುವಾದಲ್ಲಿ ಜಮ್ಮೂ ಕಾಶ್ಮೀರದ ಸಂಸ್ಥಾಪಕರಾದ ಮಹಾರಾಜ ಗುಲಾಬ ಸಿಂಹರವರ ೨೦ ಅಡಿ ಎತ್ತರದ ಪ್ರತಿಮೆಯನ್ನು ಅನಾವರಣಗೊಳಿಸಿದರು. ಜಮ್ಮೂ-ಕಾಶ್ಮೀರದ ಪ್ರಸಿದ್ಧ ಮೂರ್ತಿಕಾರರಾದ ಪದ್ಮಶ್ರೀ ರವಿಂದರ ಜಾಮವಾಲರವರು ಕುದುರೆಯ ಮೇಲೆ ಕುಳಿತಿರುವ ಮಹಾರಾಜ ಗುಲಾಬ ಸಿಂಹರವರ ಕಂಚಿನ ಪ್ರತಿಮೆಯನ್ನು ನಿಮಿಸಿದ್ದಾರೆ.

ಜಿತೇಂದ್ರ ಸಿಂಹರವರು ಮಾತನಾಡುತ್ತ ‘೧೯೯೪ರಲ್ಲಿ ವಾಚಿಕ ಮತದಾನದಿಂದ ಸಂಸತ್ತಿನಲ್ಲಿ ಪ್ರಸ್ತಾಪಗಳನ್ನು ಅಂಗೀಕರಿಸಲಾಗುತ್ತಿತ್ತು. ಇದರಲ್ಲಿ ಪಾಕಿಸ್ತಾನದ ಕಾನೂನುಬಾಹಿರ ನಿಯಂತ್ರಣವಿರುವ ಜಮ್ಮೂ ಕಾಶ್ಮೀರದ ಭಾಗವನ್ನು ತೆರವುಗೊಳಿಸಬೇಕಾಗುವುದು, ಎಂದು ಹೇಳಲಾಗಿತ್ತು. ಪಾಕಿಸ್ತಾನವು ವ್ಯಾಪಿಸರುವ ಕಾಶ್ಮೀರವನ್ನು ಸ್ವತಂತ್ರಗೊಳಿಸುವುದು ನಮ್ಮ ಸಂಕಲ್ಪವಾಗಿದೆ. ಕಲಂ ೩೭೦ನ್ನು ರದ್ದುಗೊಳಿಸಲಾಯಿತು ಮತ್ತು ಭಾಜಪವು ಈ ಸಂದರ್ಭದಲ್ಲಿ ಆಶ್ವಾಸನೆಯನ್ನು ನೀಡಿತ್ತು. ಇದು ಕೆಲವರ ಕಲ್ಪನೆಗೂ ಮೀರಿತ್ತು’ ಎಂದು ಹೇಳಿದರು.