ಚಲನಚಿತ್ರ ನಿರ್ದೇಶಕ ಅನುರಾಗ ಕಶ್ಯಪ ಇವರ ಹಿಂದೂದ್ವೇಷಿ ಹೇಳಿಕೆ !
‘ಭಾರತದಲ್ಲಿ ರಾಷ್ಟ್ರೀಯವಾದಿ ಆಗಿರಲು ಹಿಂದೂ ಆಗಿರುವುದು ಕಡ್ಡಾಯವಾಗಿದೆ’, ಎಂದು ಹಿಂದೂಗಳು ಎಂದಿಗೂ ಹೇಳಿಲ್ಲವಾದರೂ ಕಶ್ಯಪ ಇವರಂತಹ ಜನ್ಮ ಹಿಂದೂ ಉದ್ದೇಶಪೂರ್ವಕವಾಗಿ ರಾಷ್ಟ್ರೀಯವಾದಿ ಹಿಂದೂಗಳ ಬಗ್ಗೆ ಅಪಕೀರ್ತಿ ಹೊರಡಲು ಈ ರೀತಿಯ ಹೇಳಿಕೆಗಳನ್ನು ನೀಡುತ್ತಿದ್ದಾರೆ, ಎಂಬುದನ್ನು ಗಮನದಲ್ಲಿಟ್ಟುಕೊಳ್ಳಿ ! ಭಾರತದ ಪ್ರಸಿದ್ಧ ಶಾಸ್ತ್ರಜ್ಞ ಮತ್ತು ರಾಷ್ಟ್ರಪತಿ ಡಾ. ಎ.ಪಿ.ಜೆ. ಅಬ್ದುಲ್ ಕಲಾಂ ಇವರು ಕಟ್ಟರ ರಾಷ್ಟ್ರ ಭಕ್ತರಾಗಿದ್ದರು; ಆದರೆ ಅವರನ್ನು ಮುಸಲ್ಮಾನರು ಅಷ್ಟು ಹತ್ತಿರ ಮಾಡಿಕೊಳ್ಳಲಿಲ್ಲ ಅಥವಾ ಅವರಿಗೆ ಗೌರವ ನೀಡಲಿಲ್ಲ, ಇದರ ಬಗ್ಗೆ ಕಶ್ಯಪ ಏಕೆ ಮಾತನಾಡುವುದಿಲ್ಲ ? ಭಾರತದಲ್ಲಿದ್ದು ‘ಪಾಕಿಸ್ತಾನ ಜಿಂದಾಬಾದ್’ ಎಂದು ಘೋಷಣೆ ನೀಡುವವರ ಬಗ್ಗೆ ಕಶ್ಯಪ ಎಂದಿಗೂ ಮಾತನಾಡುವುದಿಲ್ಲ, ಇದರಿಂದ ಭಾರತೀಯ ಜನರಿಗೆ ರಾಷ್ಟ್ರೀಯವಾದಿ ಮತ್ತು ದೇಶದ್ರೋಹಿ ಯಾರೆಂದು ತಿಳಿಯುತ್ತಿದೆ ! |
ತಿರುವನಂತಪುರಂ (ಕೇರಳ) – ಕೇರಳವು ಒಂದು ಅಭಿವ್ಯಕ್ತಿ ಸ್ವಾತಂತ್ರ್ಯಕ್ಕೆ ಮಹತ್ವ ನೀಡುವ ಒಂದು ರಾಜ್ಯವಾಗಿದೆ. (ಕೇರಳದಲ್ಲಿ ಹಿಂದುಗಳ ಮೇಲೆ ದೌರ್ಜನ್ಯ ನಡೆಯುತ್ತಿದೆ, ಇದರ ಬಗ್ಗೆ ಕಶ್ಯಪ ಏಕೆ ಮಾತನಾಡುವುದಿಲ್ಲ ? – ಸಂಪಾದಕರು) ಪ್ರಸ್ತುತ ರಾಷ್ಟ್ರಯವಾದಿ ವಿಚಾರಗಳಿಗೆ ತಪ್ಪಾಗಿ ಮಂಡಿಸಲಾಗುತ್ತಿದೆ. ರಾಷ್ಟ್ರೀಯವಾದಿಯಾಗಲು ಹಿಂದೂ ಆಗಿರುವುದು ಕಡ್ಡಾಯವೆಂದು ಹೇಳಲಾಗುತ್ತಿದೆ, ಎಂದು ಚಲನಚಿತ್ರ ನಿರ್ದೇಶಕ ಅನುರಾಗ ಕಶ್ಯಪ ಇವರು ಇಲ್ಲಿ ಆಯೋಜಿಸಲಾದ ಅಂತರರಾಷ್ಟ್ರೀಯ ಚಲನಚಿತ್ರ ಮಹೋತ್ಸವದಲ್ಲಿ ಮಾತನಾಡಿದರು.
(ಸೌಜನ್ಯ – Bollywood News Hindi)
‘ಆಧುನಿಕ ಚಲನಚಿತ್ರ ನಿರ್ಮಾಪಕರು ರಾಜಕೀಯ ವಿಷಯಗಳನ್ನು ಪ್ರಾಮಾಣಿಕವಾಗಿ ಮಂಡಿಸಲು ಭಯಪಡುತ್ತಾರೆ’, ಎಂದೂ ಸಹ ಅನುರಾಗ ಕಶ್ಯಪ ಈ ಸಮಯದಲ್ಲಿ ಹೇಳಿದರು. (ಕಶ್ಯಪ ತಾವಾಗಿಯೇ ಇಂತಹ ಚಲನಚಿತ್ರಗಳು ಏಕೆ ನಿರ್ಮಿಸುತ್ತಿಲ್ಲ ? ತುರ್ತುಪರಿಸ್ಥಿತಿಯ ಸಮಯದಲ್ಲಿ ಕಾಂಗ್ರೆಸ ನಡೆಸಿರುವ ದೌರ್ಜನ್ಯ ಅವರು ಏಕೆ ತೋರಿಸುತ್ತಿಲ್ಲ ? – ಸಂಪಾದಕರು)