ವೃದ್ಧ ಕ್ರೈಸ್ತ ವ್ಯಕ್ತಿಯೊಬ್ಬರಿಂದ ೨ ಕೋಟಿ ರೂಪಾಯಿ ಖರ್ಚು ಮಾಡಿ ಶ್ರೀ ಸಿದ್ಧಿವಿನಾಯಕ ದೇವಾಲಯದ ನಿರ್ಮಾಣ !

ದೇವಾಲಯದಲ್ಲಿರುವ ವಿಗ್ರಹವು ಮುಂಬಯಿನ ಶ್ರೀ ಸಿದ್ಧಿವಿನಾಯಕ ದೇವಸ್ಥಾನದಲ್ಲಿರುವ ವಿಗ್ರಹದಂತೆಯೇ ಇದೆ. ನಾಜೆರಥರ ಪ್ರಕಾರ ಅವರ ಜೀವನದಲ್ಲಿ ಏನೆಲ್ಲ ಸಿಕ್ಕಿದೆಯೋ ಅದು ಶ್ರೀ ಸಿದ್ಧಿವಿನಾಯಕನ ಕೃಪೆಯಿಂದ ಸಿಕ್ಕಿದೆ ಎಂಬ ಭಾವವಿದೆ.

ಕರ್ನಾಟಕ ಸರಕಾರದಿಂದ ದುರ್ಬಲ ವರ್ಗದವರಿಗೆ ಸಹಾಯವೆಂದು ಹಸುವಿನ ಕರುಗಳನ್ನು ಕಡಿಮೆ ದರದಲ್ಲಿ ವಿತರಣೆ !

ಹುತಾತ್ಮ, ಸೈನಿಕರ ಪತ್ನಿ, ದೇವದಾಸಿ, ಶವಾಗಾರದಲ್ಲಿ ಕೆಲಸ ಮಾಡುತ್ತಿರುವವರು ಮತ್ತು ವಿಧವೆಯರು ಮುಂತಾದ ದುರ್ಬಲದವರಿಗೆ ಹಣಕಾಸಿನ ನೆರವು ಎಂದು ‘ಅಮೃತ ಸಿರಿ’ ಯೋಜನೆಯಡಿ ಉತ್ತಮ ತಳಿಗಳ ಕರುಗಳನ್ನು ಕಡಿಮೆ ದರದಲ್ಲಿ ನೀಡಲಾಗುವುದು, ಎಂಬ ಮಾಹಿತಿಯನ್ನು ಪಶುಸಂಗೋಪನಾ ಕಾರ್ಯದರ್ಶಿ ಪ್ರಭು ಚವ್ಹಾಣ ಇವರು ನೀಡಿದರು.

ಸಂಸ್ಕೃತ ಭಾಷೆಯ ಏಕೈಕ ದಿನಪತ್ರಿಕೆ ‘ಸುಧರ್ಮಾ’ದ ಸಂಪಾದಕ ಕೆ.ವಿ. ಸಂಪತ್ ಕುಮಾರ್ ನಿಧನ

ಭಾರತದ ಏಕೈಕ ಸಂಸ್ಕೃತ ದಿನಪತ್ರಿಕೆ ‘ಸುಧರ್ಮಾ’ದ ಸಂಪಾದಕ ಕೆ.ವಿ. ಸಂಪತ್ ಕುಮಾರ್ ಜೂನ್ ೩೦ ರಂದು ಹೃದಯಾಘಾತದಿಂದ ನಿಧನರಾದರು. ೨೦೨೦ ರಲ್ಲಿ ಅವರು ಮತ್ತು ಅವರ ಪತ್ನಿ ಎಸ್. ಜಯಲಕ್ಷ್ಮಿ ಅವರಿಗೆ ಪದ್ಮಶ್ರೀ ಪ್ರಶಸ್ತಿ ನೀಡಿ ಗೌರವಿಸಲಾಗಿತ್ತು. ಅವರ ನಿಧನಕ್ಕೆ ಪ್ರಧಾನಿ ನರೇಂದ್ರ ಮೋದಿ ಮತ್ತು ಕೇಂದ್ರ ಗೃಹ ಸಚಿವ ಅಮಿತ್ ಶಾಹ ಸಂತಾಪ ಸೂಚಿಸಿದ್ದಾರೆ.

ಹಿಂದೂ ಜನಜಾಗೃತಿ ಸಮಿತಿ ವತಿಯಿಂದ ಶೌರ್ಯಜಾಗೃತಿ ವ್ಯಾಖ್ಯಾನ ಸಂಪನ್ನ !

ಹಿಂದೂ ಜನಜಾಗೃತಿ ಸಮಿತಿಯ ವತಿಯಿಂದ ಇತ್ತೀಚೆಗೆ ಆನ್‌ಲೈನ್‌ನಲ್ಲಿ ಶೌರ್ಯ ಜಾಗೃತಿ ವ್ಯಾಖ್ಯಾನದ ಆಯೋಜನೆ ಮಾಡಲಾಗಿತ್ತು. ಮುಂಬರುವ ಅಪತ್ಕಾಲದಲ್ಲಿ ನಮ್ಮನ್ನು ನಾವು ಹೇಗೆ ರಕ್ಷಣೆ ಮಾಡಿಕೊಳ್ಳಬೇಕು ಇದರ ಕುರಿತು ವ್ಯಾಖ್ಯಾನದ ಅಯೋಜನೆಯನ್ನು ಮಾಡಲಾಯಿತು.

ಹಿಂದೂ ಜನಜಾಗೃತಿ ಸಮಿತಿ ವತಿಯಿಂದ ‘ಆನ್‌ಲೈನ್ ಸ್ವಭಾವದೋಷ ನಿರ್ಮೂಲನಾ ಪ್ರಕ್ರಿಯೆ’ ಶಿಬಿರ

ಹಿಂದೂ ಜನಜಾಗೃತಿ ಸಮಿತಿ ವತಿಯಿಂದ ಇತ್ತೀಚೆಗೆ ಧಾರವಾಡ ಜಿಲ್ಲೆಯಲ್ಲಿ ‘ಆನ್‌ಲೈನ್ ಮೂಲಕ ಧರ್ಮಪ್ರೇಮಿಗಳಿಗೆ ಮತ್ತು ಹಿಂದುತ್ವನಿಷ್ಠರಿಗೆ ಸ್ವಭಾವದೋಷ ನಿರ್ಮೂಲನಾ ಪ್ರಕ್ರಿಯೆ ಶಿಬಿರವನ್ನು ಆಯೋಜನೆ ಮಾಡಲಾಗಿತ್ತು. ಹಿಂದೂ ಜನಜಾಗೃತಿ ಸಮಿತಿಯ ಕು. ಶಿಲ್ಪಾ ಗೌಡರ ಶಿಬಿರದ ಸೂತ್ರ ಸಂಚಲನೆಯನ್ನು ಮಾಡಿದರು.

ಮಡಿಕೇರಿಯಲ್ಲಿ ಯುವತಿಯ ಹೆಸರಿನಲ್ಲಿ ಫೇಸ್‍ಬುಕ್‍ನಿಂದ ಓರ್ವ ಮಹಿಳೆಗೆ ಅಶ್ಲೀಲ ಸಂದೇಶಗಳನ್ನು ಕಳುಹಿಸಿದ ಮತಾಂಧನಿಗೆ ಥಳಿತ !

ಮಡಿಕೇರಿ ಸಮೀಪದ ಹಾಕತ್ತೂರಿನ ಅಶ್ರಫ್ ಎಂಬ ಯುವಕ ಕಳೆದ ೧೫ ದಿನಗಳಿಂದ ಯುವತಿಯ ಹೆಸರಿನಿಂದ ಒಬ್ಬ ಮಹಿಳೆಯೊಂದಿಗೆ ಅಶ್ಲೀಲ ಸಂಭಾಷಣೆ(ಚಾಟಿಂಗ್) ಮಾಡುತ್ತಿದ್ದ. ತನ್ನ ಹೆಸರು ‘ಅರುಣಾ’ ಎಂದು ಹೇಳಿಕೊಂಡಿದ್ದ ಮತಾಂಧನನ್ನು ಉಪಾಯದಿಂದ ಮಡಿಕೇರಿಗೆ ಕರೆಸಲಾಯಿತು. ಬಸ್ ನಿಲ್ದಾಣದಲ್ಲಿ ಸಿಕ್ಕಿಬಿದ್ದ ಯುವಕನನ್ನು ಥಳಿಸಿ ನಂತರ ಪೊಲೀಸರಿಗೆ ಒಪ್ಪಿಸಲಾಗಿದೆ.

ಬೆಂಗಳೂರಿನ ಗಲಭೆಕೋರರಿಗೆ ಕರ್ನಾಟಕ ಉಚ್ಚನ್ಯಾಯಾಲಯದಿಂದ ಜಾಮೀನು

ಕಳೆದ ವರ್ಷ ಆಗಸ್ಟ್‍ನಲ್ಲಿ ನಗರದ ಡಿ.ಜೆ. ಹಳ್ಳಿ ಮತ್ತು ಕೆ.ಜಿ. ಹಳ್ಳಿ ಪ್ರದೇಶದಲ್ಲಿ ಮತಾಂಧರು ನಡೆಸಿದ ಗಲಭೆಗೆ ಸಂಬಂಧಿಸಿದಂತೆ ಬಂಧಿತರಾದ ಗಲಭೆಕೋರರಿಗೆ ಕರ್ನಾಟಕ ಉಚ್ಚನ್ಯಾಯಾಲಯವು ಜಾಮೀನು ನೀಡಿದೆ. ಚಾರ್ಜ್‍ಶೀಟ್‍ಅನ್ನು ಸಲ್ಲಿಸಲು ವಿಳಂಬ ಮಾಡಿದ್ದಕ್ಕಾಗಿ ಗಲಭೆಕೋರರಿಗೆ ನ್ಯಾಯಾಲಯವು ಜಾಮೀನು ನೀಡಿತು.

ಹಣ ಮತ್ತು ರಾಜಕೀಯ ಬೆಂಬಲದಿಂದ ಅತ್ಯಾಚಾರದ ಆರೋಪ ಹೊತ್ತಿದ್ದ ಮಾಜಿ ಬಿಷಪ್ ಫ್ರಾಂಕೊ ಮುಲಕ್ಕಲ್ ಕಾನೂನುಕ್ರಮದಿಂದ ತಪ್ಪಿಸಿಕೊಳ್ಳುತ್ತಿದ್ದ !

ಅತ್ಯಾಚಾರದ ಆರೋಪವಿರುವ ಮಾಜಿ ಬಿಶಪ್ ಫ್ರಾಂಕೊ ಮುಲಕ್ಕಲ್ ಅವರು ಹಣ ಮತ್ತು ರಾಜಕೀಯ ಬೆಂಬಲವಿದ್ದ ಕಾರಣ ಕಾನೂನುಕ್ರಮದಿಂದ ತಪ್ಪಿಸಿಕೊಳ್ಳುತ್ತಿದ್ದರು. ಆತನಿಂದ ಆಗಿದ್ದ ಅತ್ಯಾಚಾರದ ಆರೋಪಗಳು ಹೊರಬಿದ್ದ ನಂತರವೂ ಅವರನ್ನು ಬಂಧಿಸಲಾಗಿಲ್ಲ ಎಂದು ಕರ್ನಾಟಕ ಉಚ್ಚನ್ಯಾಯಾಲಯದ ನಿವೃತ್ತ ನ್ಯಾಯಾಧೀಶ ಮೈಕೆಲ್ ಫ್ರಾನ್ಸಿಸ್ ಸಾಲಢಾಣಾ ಅವರು ಹೇಳಿದ್ದಾರೆ.

ತಬಲಿಗಿ ಜಮಾತ ಪ್ರಕರಣದಲ್ಲಿ ೩ ವಾರ್ತಾ ವಾಹಿನಿಗಳಿಗೆ ದಂಡ ಮತ್ತು ವೀಕ್ಷಕರಲ್ಲಿ ಕ್ಷಮೆಯಾಚಿಸಲು ‘ನ್ಯೂಸ್ ಬ್ರಾಡ್ ಕಾಸ್ಟಿಂಗ್ ಸ್ಟ್ಯಾಂಡಡ್ರ್ಸ್ ಆಥಾರಿಟಿ’ಯ ಆದೇಶ

ಈ ಸಂದರ್ಭದಲ್ಲಿ ಎನ್.ಬಿ.ಎಸ್.ಎ.ಯು ಒಂದು ವಾರ್ತಾ ವಾಹಿನಿಗೆ ೧ ಲಕ್ಷ ರೂಪಾಯಿ ಮತ್ತು ಇನ್ನೊಂದು ಪ್ರಾದೇಶಿಕ ವಾರ್ತಾ ವಾಹಿನಿಗೆ ೫೦ ಸಾವಿರ ರೂಪಾಯಿ ದಂಡದ ಜೊತೆಗೆ, ಜೂನ್ ೨೩ ರಂದು ರಾತ್ರಿ ೯ ಗಂಟೆಗೆ ಪ್ರಸಾರವಾಗಲಿರುವ ಸುದ್ದಿಪತ್ರದ ಮೊದಲು ಪ್ರೇಕ್ಷಕರಲ್ಲಿ ಕ್ಷಮೆಯಾಚಿಸುವಂತೆ ವಾರ್ತಾವಾಹಿನಿಗೆ ಸೂಚನೆ ನೀಡಿದೆ.