ಸರ್ವೋಚ್ಚ ನ್ಯಾಯಾಲಯವು ಎರಡು ಕಡೆಯ ಯುಕ್ತಿವಾದದ ನಂತರ ತೀರ್ಪು ಕಾಯ್ದಿರಿಸಿದೆ !

ಕರ್ನಾಟಕದಲ್ಲಿನ ಶೈಕ್ಷಣಿಕ ಸಂಸ್ಥೆಗಳಲ್ಲಿ ಹಿಜಾಬ್ ನಿಷೇಧದ ಪ್ರಕರಣ

(ಹಿಜಾಬ್ ಎಂದರೆ ಮುಸಲ್ಮಾನ ಮಹಿಳೆಯರು ತಲೆ ಮತ್ತು ಕತ್ತನ್ನು ಮುಚ್ಚಲು ಉಪಯೋಗಿಸುವ ವಸ್ತ್ರ)

ನವದೆಹಲಿ – ಕರ್ನಾಟಕದಲ್ಲಿನ ಶಾಲೆ ಮತ್ತು ಮಹಾವಿದ್ಯಾಲಯಗಳಲ್ಲಿ ಹಿಜಾಬ ಧರಿಸಿ ಬರಲು ನಿಷೇಧಿಸಿರುವುದರಿಂದ ಕರ್ನಾಟಕ ಸರಕಾರದ ತೀರ್ಪನ್ನು ಕರ್ನಾಟಕ ಉಚ್ಚ ನ್ಯಾಯಾಲಯ ಎತ್ತಿ ಹಿಡಿದಿದೆ. ಇದರ ವಿರುದ್ಧ ಸರ್ವೋಚ್ಚ ನ್ಯಾಯಾಲಯದಲ್ಲಿ ಮನವಿ ದಾಖಲಿಸಲಾಗಿದೆ. ಇದರ ಬಗ್ಗೆ ನಡೆದಿರುವ ಎರಡು ಪರ ವಿರೋಧದ ಯುಕ್ತಿವಾದದ ನಂತರ ನ್ಯಾಯಾಲಯವು ತೀರ್ಪು ಕಾಯ್ದಿರಿಸಿದೆ. ಆದಷ್ಟು ಬೇಗನೆ ತೀರ್ಪು ನೀಡಲಾಗುವುದು. ಕರ್ನಾಟಕ ಉಚ್ಚ ನ್ಯಾಯಾಲಯದಲ್ಲಿ ಅವರ ತೀರ್ಪಿನಲ್ಲಿ ಹಿಜಾಬ್ ಇದು ಧರ್ಮದ ಅವಿಭಾಜ್ಯ ಭಾಗವಾಗಿಲ್ಲ. ವಿದ್ಯಾರ್ಥಿನಿಯರು ಶಾಲೆಯ ಸಮವಸ್ತ್ರ ಧರಿಸಲು ನಿರಾಕರಿಸಲು ಸಾಧ್ಯವಿಲ್ಲ’, ಎಂದು ಹೇಳಿತ್ತು.

ಭಾರತದಲ್ಲಿ ಅನೇಕ ಕುಟುಂಬಗಳಲ್ಲಿ ಹಿಜಾಬ ಅನಿವಾರ್ಯವಿಲ್ಲ ! – ಸರ್ವೋಚ್ಚ ನ್ಯಾಯಾಲಯ

ಈ ಅರ್ಜಿಯ ಮೇಲೆ ಸೆಪ್ಟೆಂಬರ್ ೨೧ ರಂದು ನಡೆದ ವಿಚಾರಣೆಯ ಸಮಯದಲ್ಲಿ ಸರ್ವೋಚ್ಚ ನ್ಯಾಯಾಲಯದ ನ್ಯಾಯಮೂರ್ತಿ ಹೇಮಂತ ಗುಪ್ತ ಇವರು, ನಾನು ಹಿಜಾಬದ ಸಂದರ್ಭದಲ್ಲಿನ ಒಂದು ಘಟನೆ ಹೇಳಲು ಬಯಸುತ್ತೇನೆ. ನನಗೆ ಪಾಕಿಸ್ತಾನದಲ್ಲಿನ ಲಾಹೋರ ಉಚ್ಚ ನ್ಯಾಯಾಲಯದ ನ್ಯಾಯಮೂರ್ತಿಯ ಪರಿಚಯವಿದೆ. ಯಾವಾಗ ಅವರು ಭಾರತಕ್ಕೆ ಬರುತ್ತಿದ್ದರು, ಅವರ ಇಬ್ಬರು ಹೆಣ್ಣು ಮಕ್ಕಳು ಕೂಡ ಬರುತ್ತಿದ್ದರು. ಅವರೆಂದು ಹಿಜಾಬ ಧರಿಸಿರುವುದು ನಾನು ನೋಡಿಲ್ಲ. ಭಾರತದಲ್ಲಿನ ಅನೇಕ ಮುಸಲ್ಮಾನ ಕುಟುಂಬಗಳನ್ನು ನೋಡಿದ್ದೇನೆ, ಎಲ್ಲಿ ಮನೆಯ ಮುಖ್ಯಸ್ಥರು ಅವರ ಹೆಣ್ಣು ಮಕ್ಕಳಿಗೆ ಎಂದೂ ಹಿಜಾಬ ಧರಿಸಲು ಕಡ್ಡಾಯ ಮಾಡಿಲ್ಲ, ಎಂದು ಅವರು ಹೇಳಿದರು.