ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಕುಕ್ಕೆ ಸುಬ್ರಹ್ಮಣ್ಯ ಮತ್ತು ಉಡುಪಿಯ ಕೊಲ್ಲೂರು ದೇವಸ್ಥಾನದ ವಿರುದ್ಧ ಧರ್ಮದಾಯ ಇಲಾಖೆಗೆ ದೂರು
ಮಂಗಳೂರು (ಕರ್ನಾಟಕ) – ದೇವಸ್ಥಾನದಲ್ಲಿ ದರ್ಶನದ ಮೊದಲು ಪುರುಷರು ಶರ್ಟು ಮತ್ತು ಬನಿಯನ್ ತೆಗೆಯುವ ಪದ್ಧತಿ ಕರ್ನಾಟಕ ರಾಜ್ಯದಲ್ಲಿದೆ. ದಕ್ಷಿಣ ಕನ್ನಡ ಜಿಲ್ಲೆಯಲ್ಲಿನ ಕುಕ್ಕೆ ಸುಬ್ರಹ್ಮಣ್ಯ ಮತ್ತು ಉಡುಪಿಯ ಕೊಲ್ಲೂರು ದೇವಸ್ಥಾನದ ಈ ಪದ್ದತಿ ಇದೆ. ಇದರ ವಿರುದ್ಧ ಮಂಗಳೂರಿನ ‘ರಾಷ್ಟ್ರೀಯ ಪರಿಸರ ಸಂರಕ್ಷಣಾ ಒಕ್ಕೂಟ’ ಈ ಸಂಘಟನೆಯಿಂದ ಈ ಬಗ್ಗೆ ಧರ್ಮದಾಯ ಇಲಾಖೆಗೆ ಲಿಖಿತ ದೂರ ನೀಡಲಾಗಿದೆ.
ಈ ದೂರಿನನಲ್ಲಿ, ‘ಅಂಗಿ ಮತ್ತು ಬನಿಯನ್ ತೆಗೆದು ದೇವರ ದರ್ಶನ ಪಡೆಯುವ ಪದ್ಧತಿ ಯೋಗ್ಯವಾಗಿಲ್ಲ. (ಪದ್ದತಿ ಯೋಗ್ಯವಾಗಿದೆಯೇ ಅಐವಾ ಅಯೋಗ್ಯ ಇದನ್ನು ನಿರ್ಧರಿಸುವ ಅಧಿಕಾರ ಹಿಂದೂಗಳ ಧರ್ಮಾಧಿಕಾರಿಬಳಿ ಇದೆ ! – ಸಂಪಾದಕರು) ಹಿಂದೂಗಳಲ್ಲಿ ಈ ರೀತಿಯ ಪದ್ದತಿ ಇಲ್ಲ. ಈ ಆಚರಣೆಯಿಂದ ಭಕ್ತರಲ್ಲಿ ಗೊಂದಲ ನಿರ್ಮಾಣವಾಗಿದೆ. ಚರ್ಮರೋಗ ಇರುವವರು ಅಂಗಿ ತೆಗೆದು ಹೋಗುತ್ತಿರುವುದರಿಂದ ಇತರರಿಗೂ ಅದರ ಸೊಂಕೂ ತಗಲಬಹುದು, (ಈ ಪದ್ದತಿಯಿಂದಾಗಿ ಎಷ್ಟು ಜನರಿಗೆ ಸೋಂಕು ತಾಗಿದೆ, ಈ ಬಗ್ಗೆ ಸಂಘಟನೆಯ ಬಳಿ ಮಾಹಿತಿ ಇದೆಯೇ ? ‘ಹಿಂದೂಗಳ ಪದ್ದತಿಯನ್ನು ನಾಶ ಮಾಡಲು ಉದ್ದೇಶಪೂರ್ವಕವಾಗಿ ಈ ರೀತಿಯ ಕಾರಣಗಳನ್ನು ನೀಡಲಾಗುತ್ತಿದೆ’, ಇದು ಹಿಂದೂಗಳು ಅರಿತಿದ್ದಾರೆ ! – ಸಂಪಾದಕರು) ಈ ರೀತಿಯ ಪದ್ಧತಿ ಭಾರತೀಯ ಸಂವಿಧಾನದಲ್ಲಿನ ಮೂಲಭೂತ ಅಧಿಕಾರದ ಉಲ್ಲಂಘನೆ ಆಗಿದೆ. ದೇವಸ್ಥಾನದಲ್ಲಿ ಜಾರಿ ಮಾಡಲಾಗಿರುವ ಬಟ್ಟೆ ತೆಗೆಯುವ ಸೂಚನೆ ಹಿಂಪಡೆಯಬೇಕು. ಧರ್ಮದಾಯ ಇಲಾಖೆ ಗಮನ ನೀಡದೆ ಇದ್ದರೆ ಮುಂದೆ ಕಾನೂನ ರೀತಿ ಹೋರಾಟ ಮಾಡಲಾಗುವುದು ಎಂದು ಹೇಳಿದೆ.
ಮುಂದಿನ ಧಾರ್ಮಿಕ ಪರಿಷತ್ತಿನಲ್ಲಿ ಚರ್ಚಿಸಲಾಗುವುದು ! – ರಾಜ್ಯದ ಧಾರ್ಮಿಕ ಪರಿಷತ್
ಈ ದೂರಿನ ವಿಷಯದ ಬಗ್ಗೆ ರಾಜ್ಯ ಧಾರ್ಮಿಕ ಪರಿಷತ್ತಿನ ಸದಸ್ಯರಾದ ಕಶೇ ಕೋಡಿ ಸೂರ್ಯನಾರಾಯಣ ಭಟ ಇವರು, ‘ರಾಷ್ಟ್ರೀಯ ಪರಿಸರ ಸಂರಕ್ಷಣಾ ಒಕ್ಕೂಟ’ನಿಂದ ದೂರು ಬಂದಿದೆ. ಇದರ ಬಗ್ಗೆ ಮುಂದಿನ ರಾಜ್ಯ ಧಾರ್ಮಿಕ ಪರಿಷತ್ತಿನಲ್ಲಿ ಚರ್ಚಿಸಲಾಗುವುದು. ಈ ಪದ್ಧತಿ ಕೆಲವು ವರ್ಷಗಳಿಂದ ನಡೆಯುತ್ತಿದೆ. ಎಲ್ಲಾ ಪದ್ಧತಿಗಳು ಬೇರೆ ಬೇರೆ ಕಾರಣ ನೀಡಿ ರದ್ದುಪಡಿಸಿದರೆ ಮುಂದೆ ಧರ್ಮಾಚರಣೆಯ ಎಲ್ಲಾ ಪದ್ಧತಿಗಳು ನಿಂತು ಹೋಗುವುದು. ಕೆಲವು ಪದ್ಧತಿಗಳ ಬಗ್ಗೆ ಶಾಸ್ತ್ರಗಳಲ್ಲಿ ಉಲ್ಲೇಖವಿದೆ. ‘ದೇವಸ್ಥಾನದಲ್ಲಿ ತುಂಡು ಬಟ್ಟೆ ಧರಿಸಿ ಬರಬಾರದೆಂದು ಶಾಸ್ತ್ರದಲ್ಲಿದೆ; ಆದ್ದರಿಂದ ತುಂಡು ಬಟ್ಟೆ ಹಾಕಿಕೊಂಡು ಬರುವವರರಿಗೆ ದೇವಸ್ಥಾನದಲ್ಲಿ ಪ್ರವೇಶ ನೀಡಲಾಗುತ್ತಿಲ್ಲ ಎಂದು ಹೇಳಿದರು.
ಸಂಪಾದಕೀಯ ನಿಲುವು
|