ಹುಬ್ಬಳ್ಳಿಯ ಈದ್ಗಾ ಮೈದಾನದಲ್ಲಿ ಶ್ರೀ ಗಣೇಶೋತ್ಸವ ಆರಂಭ

ಕರ್ನಾಟಕ ಉಚ್ಚ ನ್ಯಾಯಾಲಯದಿಂದ ಅನುಮತಿ

ಹುಬ್ಬಳ್ಳಿ – ಆಗಸ್ಟ್ ೩೧ ರಂದು ಶ್ರೀ ಗಣೇಶೋತ್ಸವದ ಸಂದರ್ಭದಲ್ಲಿ, ಕರ್ನಾಟಕ ಉಚ್ಚ ನ್ಯಾಯಾಲಯದ ಆದೇಶದ ನಂತರ ಇಲ್ಲಿನ ಈದ್ಗಾ ಮೈದಾನದಲ್ಲಿ ಶ್ರೀ ಗಣೇಶಮೂರ್ತಿಯನ್ನು ಪ್ರತಿಷ್ಠಾಪಿಸಲಾಯಿತು. ಇಲ್ಲಿ ಗಣೇಶೋತ್ಸವದ ಆಚರಣೆಗೆ ಮುಸಲ್ಮಾನರು ವಿರೋಧಿದ್ದು, ಪ್ರಕರಣ ನ್ಯಾಯಾಲಯದ ಮೆಟ್ಟಿಲೇರಿತ್ತು. ಶ್ರೀ ಗಣೇಶಮೂರ್ತಿಯ ಪ್ರತಿಷ್ಠಾಪನೆಯ ನಂತರ, ಶ್ರೀರಾಮ ಸೇನೆಯ ಸಂಸ್ಥಾಪಕ ಅಧ್ಯಕ್ಷರಾದ ಶ್ರೀ. ಪ್ರಮೋದ ಮುತಾಲಿಕ ಇವರು ಪೂಜೆ ನೆರವೇರಿಸಿದರು. ಈ ಮಂಟಪದಲ್ಲಿ ಶ್ರೀ ಗಣೇಶಮೂರ್ತಿಯ ಪಕ್ಕದಲ್ಲಿ ಸ್ವಾತಂತ್ರ್ಯವೀರ ಸಾವರಕರ್ ಅವರ ಚಿತ್ರವನ್ನೂ ಇಡಲಾಗಿದೆ. ಸದ್ಯ ಇಲ್ಲಿ ಪೊಲೀಸ್ ಭದ್ರತೆ ಏರ್ಪಡಿಸಲಾಗಿದೆ.

ಕರ್ನಾಟಕ ಉಚ್ಚ ನ್ಯಾಯಾಲಯವು ಆಗಸ್ಟ್ ೩೦ ರ ರಾತ್ರಿ ೧೦ ಗಂಟೆಗೆ ವಿಚಾರಣೆ ನಡೆಸಿ ಹಿಂದೂಗಳ ಪರವಾಗಿ ತೀರ್ಪು ನೀಡಿತು. ಇಲ್ಲಿನ ಪುರಸಭೆಯು ಹಿಂದೂಗಳಿಗೆ ಗಣೇಶೋತ್ಸವ ಆಚರಿಸಲು ಅವಕಾಶ ಕಲ್ಪಿಸಿತ್ತು. ಈ ಆದೇಶವನ್ನು ನ್ಯಾಯಾಲಯ ಎತ್ತಿ ಹಿಡಿಯಿತು.

(ಸೌಜನ್ಯ : Asianet Suvarna News)