ವೀಕ್ಷಿಸಿ ವಿಡಿಯೋ : ಮಡಿಕೇರಿಯಲ್ಲಿ ಸೈನಿಕ ಮತ್ತು ಅವರ ಕುಟುಂಬದ ಮೇಲೆ ನಡೆದ ಮತಾಂಧರ ದಾಳಿಯ ವಿರುದ್ಧ ಮಾಜಿ ಸೈನಿಕರ ಪ್ರತಿಭಟನೆ

ಇಲ್ಲಿ ಕೆಲವು ದಿನಗಳ ಹಿಂದೆ ಆಶೋಕ ಕುಮಾರ ಈ ಸೈನಿಕನ ಮೇಲೆ ಮತ್ತು ಆತನ ಕುಟುಂಬದ ಮೇಲೆ ಚಿಕ್ಕ ಅಪಘಾತದಿಂದ ಕೆಲವು ಮತಾಂಧರು ಮಾರಣಾಂತಿಕ ಹಲ್ಲೆ ಮಾಡಿದ್ದರು. ಹಲ್ಲೆಯ ನಂತರ ಗಂಭೀರವಾಗಿ ಗಾಯಗೊಂಡಿರುವ ಕೆಲವರು ಇನ್ನೂ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ.

ಸಂಕ್ರಾಂತಿಯ ಮೊದಲು ಜಗತ್ತೇ ಬೆಚ್ಚಿ ಬೀಳುವಂತಹ ದುರ್ಘಟನೆ ನಡೆಯಲಿದೆ !

ಸಂಕ್ರಾಂತಿಯ ಮೊದಲು ಅತ್ಯಂತ ದೊಡ್ಡ ಪ್ರಮಾಣದಲ್ಲಿ ಅವಘಡ ನಡೆಯಲಿದೆ. ಜಗತ್ತೇ ಬೆಚ್ಚಿ ಬೀಳಿಸುವಂತಹ ದುರ್ಘಟನೆಯಾಗಲಿದೆ. ಆಗಸ್ಟ್‍ನ ಮೂರನೇ ವಾರದಿಂದ ರೋಗರುಜಿನಗಳು ಹೆಚ್ಚಾಗಲಿವೆ. ಜನವರಿ 2022 ರ ವರೆಗೆ ರೋಗಿಗಳ ಸ್ಥಿತಿ ಹಾಗೆಯೇ ಇರಲಿದೆ.

ಗೋಕರ್ಣ ಪರ್ತಗಾಳಿ ಮಠದ ಶ್ರೀ ವಿದ್ಯಾಧಿರಾಜ್ ತೀರ್ಥ ಶ್ರೀಪಾದಂಗಳರವರ ದೇಹತ್ಯಾಗ

ಗೋಕರ್ಣ ಪರ್ತಗಾಳಿ ಶ್ರೀಗಳು ೧೯೬೭ ರಲ್ಲಿ ಸನ್ಯಾಸ ದೀಕ್ಷೆ ಪಡೆದುಕೊಂಡಿದ್ದರು ಅವರು ಪೂರ್ವಾಶ್ರಮದಲ್ಲಿ ಕುಂದಾಪುರ ಸಮೀಪದ ಗಂಗೊಳ್ಳಿಯವರಾಗಿದ್ದರು. ೨೦೧೬ ರಲ್ಲಿ ಶ್ರೀಗಳ ಸುವರ್ಣ ಚಾತುರ್ಮಾಸ್ಯ ಆಚರಣೆ ನಡೆದಿತ್ತು.

ಆರೋಪಿ ಅಲ್ಬರ್ಟ್ ಫರ್ನಾಂಡಿಸ್‍ನನ್ನು ಪೊಲೀಸರು ಬಂಧಿಸಿದ ನಂತರ ದೇವಸ್ಥಾನಕ್ಕೆ ಹೋಗಿ ಕ್ಷಮಾಯಾಚನೆ !

ಬಜ್ಪೆಯ ನಿವಾಸಿಯಾಗಿರುವ ಅಲ್ಬರ್ಟ್ ಫರ್ನಾಂಡಿಸ್ ಮುಂಬಯಿಯಲ್ಲಿ ಕೆಲಸ ಮಾಡುತ್ತಿದ್ದು ಕೆಲವು ದಿನಗಳ ಹಿಂದೆ ಆತ ದಿನೇಶ ಎಂಬ ಹಿಂದೂವಿಗೆ ಕಟೀಲು ಶ್ರೀ ದುರ್ಗಾಪರಮೇಶ್ವರಿ ದೇವಿಯನ್ನು ನಿಂದಿಸುವ ಧ್ವನಿ ಸಂದೇಶವನ್ನು ಕಳುಹಿಸಿದ್ದನು. ಆ ಸಂದೇಶವನ್ನು ಕೇಳಿ ಹಿಂದೂ ಸಂಘಟನೆಗಳು ಬಜ್ಪೆ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದವು.

ಬಸವರಾಜ ಬೊಮ್ಮಾಯಿ ಕರ್ನಾಟಕದ ನೂತನ ಮುಖ್ಯಮಂತ್ರಿ !

ಬಸವರಾಜ ಬೊಮ್ಮಯಿ ಅವರು ಜುಲೈ ೨೮ ರಂದು ಕರ್ನಾಟಕದ ಮುಖ್ಯಮಂತ್ರಿಯಾಗಿ ಪ್ರಮಾಣವಚನ ಸ್ವೀಕರಿಸಿದರು. ಅವರು ಕರ್ನಾಟಕದ ೨೩ ನೇ ಮುಖ್ಯಮಂತ್ರಿಯಾಗಿದ್ದಾರೆ. ರಾಜಭವನದ ಗ್ಲಾಸ್ ಹೌಸ್‌ನಲ್ಲಿ(ಗಾಜಿನ ಮನೆ) ನಡೆದ ಪ್ರಮಾಣವಚನ ಸ್ವೀಕಾರ ಸಮಾರಂಭದಲ್ಲಿ ರಾಜ್ಯಪಾಲ ಥಾವರಚಂದ ಗೆಹ್ಲೋತ ಇವರು ಬಸವರಾಜ ಬೊಮ್ಮಾಯಿಯವರಿಗೆ ಹುದ್ದೆ ಮತ್ತು ಗೌಪ್ಯತೆಯ ಬಗ್ಗೆ ಪ್ರಮಾಣವಚನ ನೀಡಿದರು.

ಕರ್ನಾಟಕದ ಮುಖ್ಯಮಂತ್ರಿ ಯೆಡಿಯೂರಪ್ಪನವರ ರಾಜೀನಾಮೆ

ಕರ್ನಾಟಕದ ಮುಖ್ಯಮಂತ್ರಿಗಳಾದ ಬಿ.ಎಸ್. ಯೆಡಿಯೂರಪ್ಪನವರು ತಮ್ಮ ಮುಖ್ಯಮಂತ್ರಿ ಪದವಿಗೆ ರಾಜಿನಾಮೆ ನೀಡಿದ್ದಾರೆ. ಜುಲೈ ೨೬ ರಂದು ಅವರ ಸರಕಾರಕ್ಕೆ ೨ ವರ್ಷಗಳು ಪೂರ್ಣವಾದವು. ಅದೇ ದಿನದಂದು ಅವರು ರಾಜಿನಾಮೆ ಸಲ್ಲಿಸಿದ್ದಾರೆ.

ಸನಾತನ ಸಂಸ್ಥೆ ಮತ್ತು ಹಿಂದೂ ಜನಜಾಗೃತಿ ಸಮಿತಿ ವತಿಯಿಂದ ಆಯೋಜಿಸಲಾದ ‘ಆನ್‌ಲೈನ್’ ಗುರುಪೂರ್ಣಿಮಾ ಮಹೋತ್ಸವ’ವು ಬಾವಪೂರ್ಣ ವಾತಾವರಣದಲ್ಲಿ ಆಚರಣೆ !

ಈ ಶುಭ ಸಂದರ್ಭದಲ್ಲಿ ಸನಾತನ ಸಂಸ್ಥೆಯ ಧರ್ಮಪ್ರಚಾರಕರಾದ ಪೂ. ರಮಾನಂದ ಗೌಡ ಇವರು ‘ಆಪತ್ಕಾಲದಲ್ಲಿ ಹಿಂದೂಗಳ ರಕ್ಷಣೆ ಹಾಗೂ ಹಿಂದೂ ರಾಷ್ಟ್ರದ ಸ್ಥಾಪನೆ’ ಈ ವಿಷಯದಲ್ಲಿ ಮಾರ್ಗದರ್ಶನ ಮಾಡಿದರು. ಅವರು ಮಾರ್ಗದರ್ಶನದಲ್ಲಿ ‘ಅಡಚಣೆಯ ಸಮಯದಲ್ಲಿ ನಮಗೆ ಸಹಾಯವಾಗಬೇಕು; ಅದಕ್ಕಾಗಿ ನಾವು ಬ್ಯಾಂಕಿನಲ್ಲಿ ಹಣ ಇಡುತ್ತೇವೆ.

ವೃದ್ಧ ಕ್ರೈಸ್ತ ವ್ಯಕ್ತಿಯೊಬ್ಬರಿಂದ ೨ ಕೋಟಿ ರೂಪಾಯಿ ಖರ್ಚು ಮಾಡಿ ಶ್ರೀ ಸಿದ್ಧಿವಿನಾಯಕ ದೇವಾಲಯದ ನಿರ್ಮಾಣ !

ದೇವಾಲಯದಲ್ಲಿರುವ ವಿಗ್ರಹವು ಮುಂಬಯಿನ ಶ್ರೀ ಸಿದ್ಧಿವಿನಾಯಕ ದೇವಸ್ಥಾನದಲ್ಲಿರುವ ವಿಗ್ರಹದಂತೆಯೇ ಇದೆ. ನಾಜೆರಥರ ಪ್ರಕಾರ ಅವರ ಜೀವನದಲ್ಲಿ ಏನೆಲ್ಲ ಸಿಕ್ಕಿದೆಯೋ ಅದು ಶ್ರೀ ಸಿದ್ಧಿವಿನಾಯಕನ ಕೃಪೆಯಿಂದ ಸಿಕ್ಕಿದೆ ಎಂಬ ಭಾವವಿದೆ.

ಕರ್ನಾಟಕ ಸರಕಾರದಿಂದ ದುರ್ಬಲ ವರ್ಗದವರಿಗೆ ಸಹಾಯವೆಂದು ಹಸುವಿನ ಕರುಗಳನ್ನು ಕಡಿಮೆ ದರದಲ್ಲಿ ವಿತರಣೆ !

ಹುತಾತ್ಮ, ಸೈನಿಕರ ಪತ್ನಿ, ದೇವದಾಸಿ, ಶವಾಗಾರದಲ್ಲಿ ಕೆಲಸ ಮಾಡುತ್ತಿರುವವರು ಮತ್ತು ವಿಧವೆಯರು ಮುಂತಾದ ದುರ್ಬಲದವರಿಗೆ ಹಣಕಾಸಿನ ನೆರವು ಎಂದು ‘ಅಮೃತ ಸಿರಿ’ ಯೋಜನೆಯಡಿ ಉತ್ತಮ ತಳಿಗಳ ಕರುಗಳನ್ನು ಕಡಿಮೆ ದರದಲ್ಲಿ ನೀಡಲಾಗುವುದು, ಎಂಬ ಮಾಹಿತಿಯನ್ನು ಪಶುಸಂಗೋಪನಾ ಕಾರ್ಯದರ್ಶಿ ಪ್ರಭು ಚವ್ಹಾಣ ಇವರು ನೀಡಿದರು.

ಸಂಸ್ಕೃತ ಭಾಷೆಯ ಏಕೈಕ ದಿನಪತ್ರಿಕೆ ‘ಸುಧರ್ಮಾ’ದ ಸಂಪಾದಕ ಕೆ.ವಿ. ಸಂಪತ್ ಕುಮಾರ್ ನಿಧನ

ಭಾರತದ ಏಕೈಕ ಸಂಸ್ಕೃತ ದಿನಪತ್ರಿಕೆ ‘ಸುಧರ್ಮಾ’ದ ಸಂಪಾದಕ ಕೆ.ವಿ. ಸಂಪತ್ ಕುಮಾರ್ ಜೂನ್ ೩೦ ರಂದು ಹೃದಯಾಘಾತದಿಂದ ನಿಧನರಾದರು. ೨೦೨೦ ರಲ್ಲಿ ಅವರು ಮತ್ತು ಅವರ ಪತ್ನಿ ಎಸ್. ಜಯಲಕ್ಷ್ಮಿ ಅವರಿಗೆ ಪದ್ಮಶ್ರೀ ಪ್ರಶಸ್ತಿ ನೀಡಿ ಗೌರವಿಸಲಾಗಿತ್ತು. ಅವರ ನಿಧನಕ್ಕೆ ಪ್ರಧಾನಿ ನರೇಂದ್ರ ಮೋದಿ ಮತ್ತು ಕೇಂದ್ರ ಗೃಹ ಸಚಿವ ಅಮಿತ್ ಶಾಹ ಸಂತಾಪ ಸೂಚಿಸಿದ್ದಾರೆ.