ಬರುವ ಡಿಸೆಂಬರ್ ನಿಂದ ಕರ್ನಾಟಕದಲ್ಲಿ ನೈತಿಕ ಮೌಲ್ಯಗಳ ಅಡಿಯಲ್ಲಿ ಶಾಲೆಯಲ್ಲಿ ಶ್ರೀಮದ್ ಭಗವದ್ಗೀತೆ ಕಲಿಸಲಾಗುವುದು !

ಕುರಾನ್ ಇದು ಧಾರ್ಮಿಕ ಗ್ರಂಥ; ಆದರೆ ಗೀತಾ ಧಾರ್ಮಿಕ ಗ್ರಂಥ ಅಲ್ಲ ! – ಕರ್ನಾಟಕದ ಶಿಕ್ಷಣ ಸಚಿವ

ಶಿಕ್ಷಣ ಸಚಿವ ಬಿ.ಸಿ. ನಾಗೇಶ ( ಎಡಬದಿಗೆ )

ಬೆಂಗಳೂರು – ಕರ್ನಾಟಕದ ಶಾಲೆಗಳಲ್ಲಿ ಬರುವ ಡಿಸೆಂಬರ್ ತಿಂಗಳಿನಿಂದ ನೈತಿಕ ಶಿಕ್ಷಣದ ಅಡಿಯಲ್ಲಿ ಶ್ರೀಮದ್ ಭಗವತಗೀತೆ ಕಲಿಸಲಾಗುವುದು. ಇದರ ಬಗ್ಗೆ ಮುಸಲ್ಮಾನರಿಂದ ವಿರೋಧ ವ್ಯಕ್ತಪಡಿಸಲಾಗುತ್ತಿದೆ. ‘ಗೀತಾ ಕಲಿಸಲಾಗುತ್ತಿದ್ದರೆ ಕುರಾನ್ ಏಕೆ ಬೇಡ ?’ ಇದರ ಬಗ್ಗೆ ಶಿಕ್ಷಣ ಸಚಿವ ಬಿ.ಸಿ. ನಾಗೇಧ ಇವರು, “ಕುರಾನ್ ಇದು ಧಾರ್ಮಿಕ ಗ್ರಂಥವಾಗಿದೆ, ಆದರೆ ಗೀತಾ ಧಾರ್ಮಿಕ ಗ್ರಂಥವಲ್ಲ. ಗೀತೆಯಲ್ಲಿ ದೇವರ ಪೂಜೆ ಮಾಡುವುದರ ಬಗ್ಗೆ ಅಥವಾ ಧಾರ್ಮಿಕ ಪರಂಪರೆಯ ಬಗ್ಗೆ ಏನೂ ಹೇಳಲಾಗಿಲ್ಲ. ಅದು ನೈತಿಕತೆಯ ವಿಷಯದ ಜ್ಞಾನ ನೀಡುತ್ತದೆ, ಅದು ವಿದ್ಯಾರ್ಥಿಗಳನ್ನು ಪ್ರೇರೇಪಿಸುತ್ತದೆ.” ಎಂದು ಹೇಳಿದರು.

೧. ಶಿಕ್ಷಣ ಸಚಿವ ನಾಗೇಶ ಅವರು ತಮ್ಮ ಮಾತನ್ನು ಮುಂದುವರೆಸುತ್ತಾ, ಸ್ವಾತಂತ್ರ್ಯ ಸೈನಿಕರಿಗೆ ಗೀತೆಯಿಂದ ಹೋರಾಡಲು ಪ್ರೇರಣೆ ದೊರೆತಿತ್ತು. ನಾವು ಗೀತೆಯನ್ನು ಸ್ವತಂತ್ರ ವಿಷಯವೆಂದು ಕಲಿಸುವುದಿಲ್ಲ, ಬದಲಾಗಿ ನೈತಿಕ ಶಿಕ್ಷಣದಲ್ಲಿ ಸೇರಿಸಲಾಗುವುದು. ಇದಕ್ಕಾಗಿ ಸರಕಾರ ಈ ಮೊದಲೇ ಒಂದು ಸಮಿತಿ ಸ್ಥಾಪಿಸಿತ್ತು ಮತ್ತು ಅದರ ಶಿಫಾರಸಿನ ಮೇರೆಗೆ ಡಿಸೆಂಬರನಿಂದ ಗೀತಾ ಕಲಿಸಲಾಗುವುದು.

೨. ಶಿಕ್ಷಣ ಸಚಿವ ನಾಗೇಶ್ ಇವರು, “ಪಠ್ಯಪುಸ್ತಕದಲ್ಲಿ ಚಿಕ್ಕಮಗಳೂರಿನ ‘ಬಾಬಾ ಬುಡನ್ ಗಿರಿ’ ಎಂಬ ಉಲ್ಲೇಖದಂತಹ ತಪ್ಪು ಸುಧಾರಿಸುವ ಪ್ರಯತ್ನ ಮಾಡಲಾಗುತ್ತಿದೆ. ಈಗ ಅದರ ಹೆಸರು ‘ಇನಾಮ ದತ್ತಾತ್ರೇಯ ಪೀಠ’ ಎಂದು ಮಾಡಲಾಗಿದೆ. (ಮುಸಲ್ಮಾನರಿಂದ ಅತಿಕ್ರಮಣ ಮಾಡಲಾಗಿರುವ ಹಿಂದೂಗಳ ದತ್ತಾತ್ರೇಯ ಪೀಠ ಹಿಂದೂಗಳ ವಶಕ್ಕೆ ನೀಡಲು ಯೋಚಿಸಬೇಕೆಂದು ಹಿಂದೂಗಳಿಗೆ ಅನಿಸುತ್ತದೆ ! – ಸಂಪಾದಕರು)

ಗೀತಾ ಸ್ವತಂತ್ರ ವಿಷಯವೆಂದು ಕಲಿಸಲಾಗುವುದಿಲ್ಲ ಎಂಬುವುದರ ಬಗ್ಗೆ ಭಾಜಪದಿಂದ ಪ್ರಶ್ನೆ !

ಕರ್ನಾಟಕದ ಭಾಜಪಾ ಸರಕಾರದಿಂದ ಈ ಮೊದಲು ಶಾಲೆಗಳಲ್ಲಿ ಗೀತಾ ಇದು ಸ್ವತಂತ್ರ ವಿಷಯವೆಂದು ಕಲಿಸುವ ಘೋಷಣೆ ಮಾಡಿತ್ತು; ಆದರೆ ಈಗ ಅದು ನೈತಿಕ ವಿಷಯದ ಅಡಿಯಲ್ಲಿ ಕಲಿಸಲಾಗುವುದರ ಬಗ್ಗೆ ಭಾಜಪದಿಂದ ಪ್ರಶ್ನೆ ಕೇಳಲಾಗುತ್ತಿದೆ. ಭಾಜಪದ ನಾಯಕ ಪ್ರಾಣೇಶ್ ಎಂ.ಕೆ. ಮತ್ತು ಎನ್. ರವಿಕುಮಾರ್ ಇವರು, ಗೀತೆ ಕಲಿಸುವುದಕ್ಕೆ ಯಾರ ವಿರೋಧ ಇಲ್ಲದೆ ಇದ್ದರೂ ಸರಕಾರ ತನ್ನ ಆಶ್ವಾಸನೆಯಿಂದ ಏಕೆ ದೂರ ಸರಿಯುತ್ತಿದೆ, ಸರಕಾರಕ್ಕೆ ಏನಾದರೂ ಅಡಚಣೆ ಇದೆಯೇ ? ಸರಕಾರ ಹಿಂದೆ ಸರಿಯುತ್ತಿದೆಯೇ ? ಎಂದು ಪ್ರಶ್ನೆ ಕೇಳಿದರು.