ಹುಬ್ಬಳ್ಳಿ – ಇಲ್ಲಿಯ ಈದ್ಗಾ ಮೈದಾನದಲ್ಲಿ ಪ್ರತಿಷ್ಠಾಪಿಸಲಾಗಿದ್ದ ಗಣೇಶಮೂರ್ತಿಯ ಹಿಂದೆ ಹಾಕಲಾಗಿದ್ದ ಬಾಲಗಂಗಾಧರ ತಿಲಕ್ ಮತ್ತು ವೀರ ಸಾವರ್ಕರ್ ಅವರ ಭಾವಚಿತ್ರವಿರುವ ಫಲಕಗಳನ್ನು ಅಧಿಕಾರಿಗಳು ತೆರವುಗೊಳಿಸಿದ್ದಾರೆ. ಈದ್ಗಾ ಮೈದಾನದಲ್ಲಿ ‘ಗಜಾನನ ಉತ್ಸವ ಸಮಿತಿ’ಯು ಸ್ವಾತಂತ್ರ್ಯವೀರ ಸಾವರಕರ ಇವರ ಛಾಯಾಚಿತ್ರವು ಶ್ರೀ ಗಣೇಶ ಮೂರ್ತಿಯ ಹತ್ತಿರ ಹಾಕಿದ್ದರು ಹಾಗೂ ಇದರೊಂದಿಗೆ ವಿವಿಧ ಫಲಕವನ್ನೂ ಹಾಕಿದ್ದರು, ಈ ಕಾರ್ಯಕ್ರಮದ ಮುಖ್ಯ ಪ್ರವೇಶದ್ವಾರದಲ್ಲಿ ವೀರ ಸಾವರಕರ ಇವರ ಚಿತ್ರವಿರುವ ಫಲಕವನ್ನು ಹಾಕಿದ್ದರು. ಅಧಿಕಾರಿಗಳು, ಕಾರ್ಯಕ್ರಮಕ್ಕಾಗಿ ನಿರ್ಧರಿಸಲಾಗಿದ್ದ ನಿಯಮಗಳ ಉಲ್ಲಂಘನೆ ಮಾಡಿದ್ದಾರೆಂದು ಫಲಕ ತೆಗೆಯಲಾಗಿದೆ ಎಂದು ಹೇಳಿದರು.
ಹುಬ್ಬಳ್ಳಿ: ಗಣೇಶ ಮೂರ್ತಿ ಹಿಂದೆ ಹಾಕಿದ್ದ ಬಾಲಗಂಗಾಧರ್ ತಿಲಕ್, ಸಾವರ್ಕರ್ ಪೋಸ್ಟರ್ ತೆರವುಗೊಳಿಸಿದ ಪಾಲಿಕೆ ಸಿಬ್ಬಂದಿ https://t.co/77HNz6ZT78 via @KannadaPrabha @XpressBengaluru @Arunkumar_TNIE
— kannadaprabha (@KannadaPrabha) September 2, 2022
ಈದ್ಗಾ ಮೈದಾನದಲ್ಲಿ ಶ್ರೀ ಗಣೇಶ ಹಬ್ಬದ ಮಹಾಆರತಿಗೆ ಉಪಸ್ಥಿತರಿದ್ದು ನಂತರ ಪತ್ರಕರ್ತರೊಂದಿಗೆ ಮಾತನಾಡಿದ ಕೇಂದ್ರ ಸಚಿವ ಪ್ರಹ್ಲಾದ ಜೋಶಿಯವರು, ವೀರ ಸಾವರಕರ ಇವರು ಮಹಾನ ದೇಶ ಭಕ್ತರಾಗಿದ್ದರು ಎಂದು ಆಯೋಜಕರ ಅಭಿಪ್ರಾಯವಾಗಿದೆ. ಆದ್ದರಿಂದ ಈ ಛಾಯಾಚಿತ್ರವನ್ನು ಹಾಕಲಾಗಿತ್ತು ಇದರಲ್ಲಿ ತಪ್ಪೇನಿದೆ ? ಎಂದು ಕೇಳಿದರು.
ಈ ಕುರಿತು ಕರ್ನಾಟಕ ಉಚ್ಚ ನ್ಯಾಯಾಲಯವು ಹುಬ್ಬಳ್ಳಿಯ ಈದ್ಗಾ ಮೈದಾನದಲ್ಲಿ ಶ್ರೀ ಗಣೇಶ ಚತುರ್ಥಿಯನ್ನು ಆಚರಿಸಲು ಅನುಮತಿಯನ್ನು ನೀಡಿತ್ತು. ನ್ಯಾಯಾಲಯವು ಅಂಜುಮಾನ-ಎ-ಇಸ್ಲಾಂ ಇವರು ಸಲ್ಲಿಸಿದ್ದ ಅರ್ಜಿಯನ್ನು ತಿರಸ್ಕರಿಸುತ್ತಾ, ಈ ಭೂಮಿ ಹುಬ್ಬಳ್ಳಿ-ಧಾರವಾಡ ನಗರ ಸಭೆಯ ಆಸ್ತಿಯಾಗಿದೆ ಇದು ಯಾರಿಗೆ ಬೇಕು ಅವರಿಗೆ ಕೊಡಬಹುದು. ಈ ಮೈದಾನದಲ್ಲಿ ಇದೇ ಮೊದಲ ಬಾರಿ ಹಿಂದೂ ಹಬ್ಬದ ಆಯೋಜನೆ ಮಾಡಿದೆ ಎಂದು ಹೇಳಿದೆ.