ಯುವತಿಯೊಂದಿಗೆ ನುಚಿತವಾಗಿ ವರ್ತಿಸಿದ ಪ್ರಕರಣದಲ್ಲಿ ಕಾಂಗ್ರೆಸ್‌ನ ನಾಯಕ ಮನೋಜ ಕರ್ಜಗಿಯ ಬಂಧನ

ಹುಬ್ಬಳ್ಳಿ – ಇಲ್ಲಿಯ ಓರ್ವ ೨೦ ವರ್ಷದ ಯುವತಿಯನ್ನು ಮುತ್ತಿಡಲು ಮತ್ತು ಆಕೆಗೆ ತಬ್ಬಿಕೊಳ್ಳುವ ಪ್ರಯತ್ನ ಮಾಡಿದ ಕಾಂಗ್ರೆಸ್ಸಿನ ೫೪ ವರ್ಷದ ನಾಯಕ ಮನೋಜ ಕರ್ಜಗಿ ಇವರನ್ನು ಪೊಲೀಸರು ಬಂಧಿಸಿದ್ದಾರೆ. ಈ ಯುವತಿ ಬ್ಯುಟಿ ಪಾರ್ಲರ್ ನಲ್ಲಿ ಕೆಲಸ ಮಾಡುತ್ತಿದ್ದಳು. ಕರ್ಜಗಿ ಸ್ಪಾಗೆ ಹೋದಾಗ ಈ ಘಟನೆ ನಡೆದಿದೆ. ಈ ಯುವತಿ ಆಕೆಯ ಸ್ನೇಹಿತನಿಗೆ ಈ ವಿಷಯದ ಮಾಹಿತಿ ನೀಡಿದ ನಂತರ ಅವನು ತನ್ನ ಇಬ್ಬರು ಸ್ನೇಹಿತರನ್ನು ಕರೆದುಕೊಂಡು ಅಲ್ಲಿಗೆ ಬಂದು ಕರ್ಜಗಿ ಇವರನ್ನು ಥಳಿಸಿದನು. ನಂತರ ಪೊಲೀಸರಿಗೆ ದೂರು ನೀಡಿದ ನಂತರ ಕರ್ಜಗಿ ಇವರನ್ನು ಬಂಧಿಸಲಾಯಿತು. ಕರ್ಜಗಿ ಅವರನ್ನು ನಂತರ ಜಾಮೀನಿನ ಮೇಲೆ ಬಿಡುಗಡೆ ಮಾಡಲಾಯಿತು.

ಸಂಪಾದಕೀಯ ನಿಲುವು

ಗಾಂಧಿವಾದಿ ಕಾಂಗ್ರೆಸ್ ನಾಯಕರ ವಿಕೃತ ಮಾನಸಿಕತೆ !