ಕರ್ನಾಟಕದಲ್ಲಿ ಮತಾಂಧತೆಯನ್ನು ಹರಡುವ ಮದರಸಾಗಳಲ್ಲಿನ ಶಿಕ್ಷಣದ ಮೇಲೆ ನಿರ್ಬಂಧ ಹೇರಿ !

ಶಿಕ್ಷಣಮಂತ್ರಿ ಬಿ.ಸಿ. ನಾಗೇಶ

ಹಿಂದೂ ಜನಜಾಗೃತಿ ಸಮಿತಿಯ ವತಿಯಿಂದ ಶಿಕ್ಷಣಮಂತ್ರಿ ಬಿ.ಸಿ. ನಾಗೇಶರವರಿಗೆ ಮನವಿ

ಬೆಂಗಳೂರು (ಕರ್ನಾಟಕ) – ಕರ್ನಾಟಕ ರಾಜ್ಯದಲ್ಲಿನ ಮದರಸಾಗಳಿಂದ ನೀಡಲಾಗುತ್ತಿರುವ ಶಿಕ್ಷಣದ ಮೇಲೆ ನಿರ್ಬಂಧ ಹೇರಬೇಕು, ಹಾಗೆಯೇ ಭಯೋತ್ಪಾದನಾ ಕಾರ್ಯಾಚರಣೆಗಳಲ್ಲಿ ಸಹಭಾಗಿಯಾಗಿರುವ ‘ಪಾಪ್ಯುಲರ್‌ ಫ್ರಂಟ್‌ ಆಫ್‌ ಇಂಡಿಯಾ’ದ (ಪಿ. ಎಫ್‌. ಐ)ಮೇಲೆ ನಿರ್ಬಂಧ ಹೇರಬೇಕು, ಎಂದು ವಿಧಾನಸಭೆಯ ಅಧಿವೇಶನದಲ್ಲಿ ಮನವಿ ಮಾಡಬೇಕು, ಎಂದು ಶಿಕ್ಷಣಮಂತ್ರಿ ಬಿ.ಸಿ. ನಾಗೇಶ, ಕನ್ನಡ ಹಾಗೂ ಸಂಸ್ಕೃತಿ ಮಂತ್ರಿ ಸುನೀಲ ಕುಮಾರ, ಭಾಜಪದ ರಾಜ್ಯಪ್ರಮುಖರಾದ ಎನ್‌. ರವಿಕುಮಾರರವರೊಂದಿಗೆ ವಿವಿಧ ಮಂತ್ರಿಗಳಿಗೆ ಹಿಂದೂ ಜನಜಾಗೃತಿ ಸಮಿತಿಯ ವತಿಯಿಂದ ಮನವಿ ನೀಡಲಾಯಿತು. ಈ ಸಮಯದಲ್ಲಿ ಸಮಿತಿಯ ರಾಜ್ಯ ವಕ್ತಾರರಾದ ಶ್ರೀ. ಮೋಹನ ಗೌಡ, ಹಿಂದುತ್ವನಿಷ್ಠ ನೇತಾರರಾದ ಶ್ರೀ. ಪ್ರಶಾಂತ ಸಂಬರಗಿ, ಶ್ರೀ. ಪುನೀತ ಕೆರೆಹಳ್ಳಿ, ಶ್ರೀ. ಮುನೇ ಗೌಡ, ನ್ಯಾಯವಾದಿ ತ್ಯಾಗರಾಜ, ಶ್ರೀ. ಪದ್ಮನಾಭ ಹೊಳ್ಳ ಮುಂತಾವರು ಉಪಸ್ಥಿತರಿದ್ದರು.

ಈ ಮನವಿಯಲ್ಲಿರುವ ಅಂಶಗಳು ಹೀಗಿವೆ,

೧. ರಾಜ್ಯದಲ್ಲಿ ಸಾವಿರಾರು ಮದರಸಾಗಳನ್ನು ಅನುದಾನದಿಂದ ನಡೆಸಲಾಗುತ್ತಿದೆ. ಇತ್ತೀಚೆಗೆ ಮದರಸಾಗಳಲ್ಲಿ ದೇಶವಿರೋಧಿ ಹಾಗೂ ರಾಷ್ಟ್ರವಿರೋಧಿ ವಿಷಯಗಳನ್ನು ಕಲಿಸುವುದರೊಂದಿಗೆ ಬಹುಸಂಖ್ಯಾತ ಹಿಂದೂಗಳ ವಿರುದ್ಧ ದ್ವೇಷವನ್ನು ಹರಡಲಾಗುತ್ತಿರುವುದು ಗಮನಕ್ಕೆ ಬಂದಿದೆ. ರಾಜ್ಯದಲ್ಲಿನ ಕೆಲವು ಮದರಸಾಗಳ ಶಿಕ್ಷಕರು ಹಾಗೂ ವಿದ್ಯಾರ್ಥಿಗಳನ್ನು ಭಯೋತ್ಪಾದಕ ಪ್ರಕರಣಗಳಲ್ಲಿ ಬಂಧಿಸಲಾಗಿದೆ.

೨. ಇಂದು ಕರ್ನಾಟಕದಲ್ಲಿ ಕೆಲವು ದಂಗೆಗಳ ಪ್ರಕರಣಗಳಲ್ಲಿ, ಹಾಗೆಯೇ ಹತ್ಯೆ, ದ್ವೇಷ ಹರಡುವ ಪ್ರಕರಣಗಳಲ್ಲಿ ಮದರಸಾಗಳಲ್ಲಿ ವಿದ್ಯಾರ್ಥಿಗಳು, ಶಿಕ್ಷಕರು ಹಾಗೂ ಮೌಲ್ವಿಗಳ (ಇಸ್ಲಾಮಿನ ಧಾರ್ಮಿಕ ನೇತಾರರು) ಸಹಭಾಗ ಇರುವುದು ಕಂಡುಬರುತ್ತಿದೆ. ಇತ್ತೀಚೆಗೆ ರಾಜಸ್ತಾನದ ಉದಯಪುರದಲ್ಲಿ ಅಮಾಯಕ ಕನ್ಹೈಯ್ಯಾಲಾಲರ ಹತ್ಯೆಯ ಪ್ರಕರಣದ ನಂತರ ಕೇರಳದ ರಾಜ್ಯಪಾಲರಾದ ಆರೀಫ ಮಹಂಮರ ಖಾನರವರು ‘ದೇಶದಲ್ಲಿ ಮದರಸಾಗಳಲ್ಲಿ ಮತಾಂಧತೆಯ ಪ್ರಚಾರ ಮಾಡಲಾಗುತ್ತಿದೆ; ಆದುದರಿಂದ ಮದರಸಾ ಶಿಕ್ಷಣವನ್ನು ನಿಲ್ಲಿಸಬೇಕು’ ಎಂದು ಒತ್ತು ನೀಡಿ ಹೇಳಿದ್ದರು. ಇಷ್ಟೇ ಅಲ್ಲ, ಶಿಯಾ ಕೇಂದ್ರೀಯ ವಕ್ಫ ಬೋರ್ಡನ ಮಾಜಿ ಅಧ್ಯಕ್ಷರಾದ ವಾಸಿಮ ರಿಝ್ವಿ (ಈಗಿನ ಜಿತೇಂದ್ರ ತ್ಯಾಗಿ)ಯವರು ಮದರಸಾಗಳಲ್ಲಿ ದೇಶವಿರೋಧಿ ಅಂಶಗಳನ್ನು ಕಲಿಸಲಾಗುತ್ತದೆ; ಆದುದರಿಂದ ಮದರಸಾ ಶಿಕ್ಷಣವನ್ನು ನಿಲ್ಲಿಸುವ ಬಗ್ಗೆ ಒತ್ತು ನೀಡಿದ್ದರು.

೩. ಕಳೆದ ತಿಂಗಳಿನಲ್ಲಿ ಆಸಾಮಿನಲ್ಲಿ ಭಯೋತ್ಪಾದಕ ಕಾರ್ಯಾಚರಣೆಯ ಪ್ರಕರಣದಲ್ಲಿ ಮದರಸಾಗಳ ಮೌಲ್ವಿಗಳನ್ನು ಬಂಧಿಸಲಾದ ನಂತರ ರಾಜ್ಯದಲ್ಲಿನ ಹೆಚ್ಚಿನ ಮದರಸಾಗಳನ್ನು ಮುಚ್ಚಿ ಅವುಗಳನ್ನು ಸಾಮಾನ್ಯ ಸಾರ್ವಜನಿಕ ಶಾಲೆಗಳಾಗಿ ಪರಿಗಣಿಸಲಾಗಿದೆ. ಇಷ್ಟೇ ಅಲ್ಲ, ಉತ್ತರಾಖಂಡದ ಸರಕಾರವು ಅಲ್ಲಿನ ೧೭ ಮದರಸಾಗಳ ಪರವಾನಿಗೆಯನ್ನು ರದ್ದುಗೊಳಿಸಿದೆ. ಉತ್ತರಪ್ರದೇಶ ಸರಕಾರವೂ ದೇಶವಿರೋಧಿ ಕಾರ್ಯಾಚರಣೆಗಳ ಪ್ರಚಾರದ ಪ್ರಕರಣದಲ್ಲಿ ಅಲ್ಲಿನ ೭ ಸಾವಿರಕ್ಕಿಂತಲೂ ಹೆಚ್ಚಿನ ಮದರಸಾಗಳಲ್ಲಿ ಸಮೀಕ್ಷೆಗೆ ಆದೇಶಿಸಿದೆ. ಕೆಲವು ಮದರಸಾಗಳಲ್ಲಿ ಹೆಣ್ಣುಮಕ್ಕಳಿಗೆ ಲೈಂಗಿಕ ಕಿರುಕುಳ ನೀಡುವ ಘಟನೆಗಳು ನಡೆಯುತ್ತಿರುವುದನ್ನು ಬಹಿರಂಗವಾಗಿದೆ. ಇಷ್ಟೇ ಅಲ್ಲ, ರಾಷ್ಟ್ರೀಯ ಮಕ್ಕಳ ಹಕ್ಕು ಆಯೋಗದ ಅಧ್ಯಕ್ಷರಾದ ಪ್ರಿಯಂಕ ಕಾನಗೋರವರು ಮದರಸಾಗಳಿಂದ ಮಕ್ಕಳ ಹಕ್ಕುಗಳ ಉಲ್ಲಂಘನೆಯಾಗುತ್ತಿದ್ದು ಮದರಸಾಗಳಿಂದ ಸಂವಿಧಾನದ ಶಿಕ್ಷಣದ ಹಕ್ಕು ಅಧಿನಿಯಮ ೨೧ರ ಘೋರ ಉಲ್ಲಂಘನೆಯಾಗುತ್ತಿದೆ, ಎಂದು ಹೇಳಿದ್ದಾರೆ.

೪. ಮೇಲಿನ ವಿಷಯವು ರಾಜ್ಯದ ಸುರಕ್ಷೆಯ ದೃಷ್ಟಿಯಿಂದ ಅತ್ಯಂತ ಮಹತ್ವದ್ದಾಗಿದ್ದು ರಾಜ್ಯದ ಧಾರ್ಮಿಕ ಸೌಹಾರ್ದತೆಯ ವಾತಾವರಣದ ಸಂರಕ್ಷಣೆಗಾಗಿ ಸರಕಾರವು ಈ ವಿಷಯವನ್ನು ಅತ್ಯಂತ ಗಂಭೀರವಾಗಿ ಪರಿಗಣಿಸಿ ಕರ್ನಾಟಕ ರಾಜ್ಯದಲ್ಲಿನ ಮದರಸಾ ಶಿಕ್ಷಣದ ಮಾನ್ಯತೆಯನ್ನು ರದ್ದುಗೊಳಿಸಬೇಕು.