ಯಾದಗಿರಿಯಲ್ಲಿ ಹಾಸಿಗೆ ಇಲ್ಲದ ಕಾರಣ ಕೊರೋನಾ ಪೀಡಿತನನ್ನು ದಾಖಲಿಸಲು ನಕಾರ!

ಇಲ್ಲಿಯ ಭೀಮೇಶ ಎಂಬ ಹೆಸರಿನ ಕೊರೋನಾ ಪೀಡಿತ ರೋಗಿಗೆ ಹಾಸಿಗೆ ಇಲ್ಲ ಎಂದು ಹೇಳಿ ಇಲ್ಲಿನ ಜಿಲ್ಲಾ ಆಸ್ಪತ್ರೆಯಲ್ಲಿ ದಾಖಲಿಸಲು ನಿರಾಕರಿಸಲಾಯಿತು. ‘ಭೀಮೇಶನಿಗೆ ಏನೂ ಆಗಿಲ್ಲ’ ಎಂದು ವೈದ್ಯರು ವಾಪಾಸು ಕಳಿಸಲು ನೋಡಿದರು.

ಕರ್ನಾಟಕದ ದೇವಾಲಯದ ಸಿಬ್ಬಂದಿಯಿಂದಲೇ ಅರ್ಪಣೆ ಪೆಟ್ಟಿಗೆಯಿಂದ ಹಣ ಕಳ್ಳತನ

ಇಲ್ಲಿನ ಸುರಪುರ ತಾಲೂಕಿನ ತಿಂಥಣಿ ಗ್ರಾಮದಲ್ಲಿರುವ ಜಗದ್ಗುರು ಶ್ರೀ ಮೌನೇಶ್ವರ ದೇವಾಲಯದ ದೇವರ ಹುಂಡಿಯಿಂದ ದೇವಸ್ಥಾನದ ಸಿಬ್ಬಂದಿಗಳೇ ಹಣವನ್ನು ದೋಚುತ್ತಿದ್ದಾರೆ.

ಅತಿಕ್ರಮಣಕ್ಕೊಳಗಾದ ಕೊಟ್ಯಂತರ ಮೌಲ್ಯದ ದೇವಸ್ಥಾನಗಳ ಜಮೀನುಗಳ ರಕ್ಷಣೆ ಮಾಡಿ !

ಕರ್ನಾಟಕ ಧಾರ್ಮಿಕ ದತ್ತಿ ಇಲಾಖೆಯ 36 ಸಾವಿರ ದೇವಸ್ಥಾನಗಳ ಬಳಿ ಸರಿ ಸುಮಾರು 10 ಲಕ್ಷ ಕೋಟಿಗೂ ಅಧಿಕ ಮೌಲ್ಯದ ಜಮೀನುಗಳು ಇದೆ. ಆದರೆ ಅಧಿಕಾರಿಗಳ ನಿರ್ಲಕ್ಷ, ಬೇಜವಾಬ್ದಾರಿ, ಹಣದಾಸೆಯಿಂದ ಮತ್ತು ಪ್ರಭಾವಿಗಳ ಕುತಂತ್ರದಿಂದ ಕೊಟ್ಯಂತರ ಮೌಲ್ಯದ ದೇವಸ್ಥಾನದ ಜಮೀನು ಖಾಸಗಿಯವರ ಪಾಲಾಗುತ್ತಿದೆ.

ಕರ್ನಾಟಕದ ಪ್ರಮುಖ ದೇವಾಲಯಗಳು ಸೇರಿದಂತೆ ಇತರ ದೇವಸ್ಥಾನಗಳ ೧೭೬ ಸ್ಥಳಗಳ ಜಮೀನುಗಳ ಮೇಲೆ ಲ್ಯಾಂಡ್ ಮಾಫಿಯಾಗಳ ನಿಯಂತ್ರಣ !

ಕರ್ನಾಟಕ ರಾಜ್ಯದ ಪ್ರಮುಖ ದೇವಾಲಯಗಳಿಗೆ ಸೇರಿದ ಕೋಟಿ ರೂಪಾಯಿ ಮೌಲ್ಯದ ಭೂಮಿ ಮಾಫಿಯಾಗಳ ಕೈ ಸೇರಿದೆ ಎಂಬ ಮಾಹಿತಿಯು ಬಹಿರಂಗವಾಗಿದೆ. ಈ ನಿಟ್ಟಿನಲ್ಲಿ ವಿಚಾರಣೆ ನಡೆಸಿ ದೇವಾಲಯದ ಆಸ್ತಿಯನ್ನು ರಕ್ಷಿಸಲು ರಾಜ್ಯ ಸರಕಾರವು ಮುಂದಾಗಿದೆ.

ಕೊರೋನಾ ನಿಯಮಗಳನ್ನು ಪಾಲಿಸಲು ಹೇಳುತ್ತಿದ್ದ ಪೊಲೀಸರೊಂದಿಗೆ ವಾದಿಸಿದ್ದಕ್ಕಾಗಿ ನಗರಸಭೆ ಉಪಾಧ್ಯಕ್ಷನ ಪುತ್ರನ ಬಂಧನ

ಕೊರೋನದ ಎರಡನೇ ಅಲೆಯನ್ನು ನಿಯಂತ್ರಿಸಲು ರಾಜ್ಯದಾದ್ಯಂತ ಕಠಿಣ ನಿಯಮಗಳನ್ನು ವಿಧಿಸಲಾಗಿದೆ. ನಿಯಮಗಳನ್ನು ಉಲ್ಲಘಿಸಿ ಬೇಜವಾಬ್ದಾರತನದಿಂದ ವರ್ತಿಸುವ ನಗರಸಭೆ ಮಾಜಿ ಉಪಾಧ್ಯಕ್ಷರ ಪುತ್ರ ವಿನಾಯಕ ಬಾಕಳೆ ಅವರನ್ನು ಬಂಧಿಸಲಾಯಿತು.

ಮೃತ ರೋಗಿಯ ಕೊರೋನಾ ಪರೀಕ್ಷಣೆಯ ವರದಿಯನ್ನು ಮೂರು ಬಾರಿ ಬದಲಾಯಿದ್ದರಿಂದ ಕಂಗೆಟ್ಟ ಕುಟುಂಬದವರು !

ಕೊರೋನಾ ಪರೀಕ್ಷಣೆಯ ವರದಿಯು ನಕಾರಾತ್ಮಕವಾಗಿದ್ದು ಮೃತಪಟ್ಟ ವ್ಯಕ್ತಿಯ ಅಂತ್ಯಸಂಸ್ಕಾರದ ಸಮಯದಲ್ಲಿ ವ್ಯಕ್ತಿಯ ವರದಿಯಲ್ಲಿ ಸಕಾರಾತ್ಮಕ ಇದೆ ಎಂದು ತಿಳಿದನಂತರ ಆರೋಗ್ಯ ಇಲಾಖೆಯ ಸಿಬ್ಬಂದಿಗಳು ಭಯಗೊಂಡರು.

ಆಂಬ್ಯುಲನ್ಸ್ ಮತ್ತು ಅಂತ್ಯಕ್ರಿಯೆಯ ಖರ್ಚಿಗಾಗಿ ಬೆಂಗಳೂರಿನಲ್ಲಿ ಮೂರುವರೆ ಸಾವಿರ ರೂಪಾಯಿಯ ಬದಲಿಗೆ ೬೦ ಸಾವಿರ ರೂಪಾಯಿಯ ಬೆಡಿಕೆ !

ಕೊರೋನಾ ಮಹಾಮಾರಿಯಿಂದಾಗಿ ದೇಶದಲ್ಲಿಯ ಜನರ ಸ್ಥಿತಿಯು ಚಿಂತಾಜನಕವಾಗಿರುವಾಗ ಜನರಿಗೆ ತಮ್ಮ ಕುಟುಂಬದವರನ್ನು ಬದುಕಿಸಲು ಪರಾಕಾಷ್ಠೆಯ ಪ್ರಯತ್ನ ಮಾಡಬೇಕಾಗುತ್ತಿದೆ. ಮಹಾಮಾರಿಯಿಂದಾಗಿ ಸಾವಿನ ಸಂಖ್ಯೆ ಹೆಚ್ಚಾಗುತ್ತಲೇ ಇದೆ

ಕಲಬುರ್ಗಿಯಲ್ಲಿ ಆಕ್ಸಿಜನ್ ಸಿಲಿಂಡರ್‌ನೊಂದಿಗೆ ಆಸ್ಪತ್ರೆಗೆ ದಾಖಲಾಗಲು ಆಟೊದಲ್ಲಿ ಅಲೆದ ಮಹಿಳೆ!

ಜಿಲ್ಲೆಯಲ್ಲಿ ಹಾಸಿಗೆ ಸಿಗದ ಕಾರಣ ರೋಗಿಗಳು ವಿವಿಧ ಆಸ್ಪತ್ರೆಗಳಿಗೆ ಅಲೆಯಬೇಕಾಗುತ್ತಿದೆ. ಇಲ್ಲಿನ ಬಸವ ನಗರದ 55 ವರ್ಷದ ಮಹಿಳೆ ಕೆಮ್ಮು ಮತ್ತು ಉಸಿರಾಟದ ಸಮಸ್ಯೆಯಿಂದ ಅಸ್ವಸ್ಥಗೊಂಡ ಕಾರಣ ಅವರನ್ನು ಕುಟುಂಬದವರು ಖಾಸಗಿ ಆಸ್ಪತ್ರೆಯೊಂದಕ್ಕೆ ಕರೆದೊಯ್ದರು.

ಬೆಂಗಳೂರಿನಲ್ಲಿ ಅಕ್ರಮ ವೇಶ್ಯಾವಾಟಿಕೆ ಅಡ್ಡೆಯ ಮೇಲೆ ದಾಳಿ: ಮೂವರು ಮತಾಂಧರ ಬಂಧನ

ವೇಶ್ಯಾವಾಟಿಕೆ ನಡೆಸುತ್ತಿದ್ದ ಅಡ್ಡೆ ಮೇಲೆ ಸಿಸಿಬಿ ಪೊಲೀಸರು ದಾಳಿ ನಡೆಸಿ ಪಶ್ಚಿಮ ಬಂಗಾಳ ಮೂಲದ ಮೂವರು ಮತಾಂಧರನ್ನು ಬಂಧಿಸಿದ್ದಾರೆ. ಬಂಧಿತರನ್ನು ನೌಶದ್ ಅಲಿ, ರಿಯಾಜುಲ್ ಶೇಕ್, ಸಮೀರ್ ಇವರು ಎಂದು ಗುರುತಿಸಲಾಗಿದೆ.

ರೆಮ್ಡೆಸಿವಿರ್ ಚುಚ್ಚುಮದ್ದಿನ ಹೆಸರಿನಲ್ಲಿ ಲವಣಯುಕ್ತ ನೀರು ಹಾಗೂ ಅಂಟಿಬಯೋಟಿಕ್ಸ್ ಅನ್ನು ಸೇರಿಸಿ ಮಾರಾಟ ಮಾಡುತ್ತಿದ್ದ ನರ್ಸ್ ನ ಬಂಧನ

ರೆಮ್ಡೆಸಿವಿರ್ ಚುಚ್ಚು ಮದ್ದಿನ ಹೆಸರಿನಲ್ಲಿ ಅದರ ಬಾಟಲಿಯಿಂದ ಲವಣಯುಕ್ತ ನೀರು ಮತ್ತು ಅಂಟಿಬಯೋಟಿಕ್ಸ್ ಅನ್ನು ಸೇರಿಸಿ ಮಾರಾಟ ಮಾಡುತ್ತಿದ್ದ ಗಿರೀಶ ಎಂಬ ನರ್ಸ್ ಅನ್ನು ಬಂಧಿಸಲಾಗಿದೆ.