ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಅನಧಿಕೃತವಾಗಿ ವಾಸಿಸುತ್ತಿರುವ ವಿದೇಶಿ ನಾಗರಿಕರ ಸಮೀಕ್ಷೆ ಮಾಡಿ ! – ಗೃಹ ಸಚಿವ

‘ವೀಸಾದ ಅವಧಿ ಮುಗಿದರೂ ಅನಧಿಕೃತವಾಗಿ ಮತ್ತು ಅಧಿಕೃತ ದಾಖಲೆಗಳು ಇಲ್ಲದಿರುವಾಗಲೂ ಕರ್ನಾಟಕದಲ್ಲಿ ವಾಸಿಸುವ ವಿದೇಶಿ ನಾಗರಿಕರನ್ನು ಹುಡುಕುವುದು ಸಮೀಕ್ಷೆಯ ಉದ್ದೇಶವಾಗಿದೆಯೆಂದು ಜ್ಞಾನೇಂದ್ರ ಇವರು ಹೇಳಿದರು.

ಹಿಂದೂ ದೇವತೆಗಳ ಬಗ್ಗೆ ಆಕ್ಷೇಪಾರ್ಹ ಹೇಳಿಕೆ ಕೊಟ್ಟ ಕಾಂಗ್ರೆಸ್ಸಿನ ನಾಯಕಿ ಶೈಲಜಾ ಮನೆ ಮೇಲೆ ಕಲ್ಲುತೂರಾಟ

ಹಿಂದೂ ದೇವತೆಗಳ ಬಗ್ಗೆ ಆಕ್ಷೇಪಾರ್ಹ ಹೇಳಿಕೆ ನೀಡಿದ ಕಾಂಗ್ರೆಸ್ಸಿನ ಮಾಹಿತಿ ತಂತ್ರಜ್ಞಾನ ವಿಭಾಗದ ಸಚಿವೆ ವಿ. ಶೈಲಜಾ ಇವರ ಮನೆಯ ಮೇಲೆ ಅಪರಿಚಿತರಿಂದ ಕಲ್ಲುತೂರಾಟ ನಡೆಸಲಾಗಿದೆ. ಇದರಲ್ಲಿ ಮನೆ ಕಿಟಕಿಯ ಗಾಜುಗಳು ಹೊಡೆದು ಹೋಗಿದ್ದು, ಗೋಡೆಗಳ ಮೇಲೆ ಮಸಿ ಎರಚಲಾಗಿದೆ.

ಸಾರ್ವಜನಿಕ ಸ್ಥಳಗಳಲ್ಲಿ ನಿಂದನೆಯಾಗದಿದ್ದರೆ ದೌರ್ಜನ್ಯ ಕಾಯ್ದೆ ಅನ್ವಯವಾಗುವದಿಲ್ಲ ! – ಕರ್ನಾಟಕ ಉಚ್ಚ ನ್ಯಾಯಾಲಯ

ಕರ್ನಾಟಕ ಉಚ್ಚ ನ್ಯಾಯಾಲಯ ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡಗಳ ಕುರಿತು ಮಹತ್ವದ ತೀರ್ಪು ನೀಡಿದೆ. ‘ಸಾರ್ವಜನಿಕ ಸ್ಥಳಗಳಲ್ಲಿ ನಿಂದನೆ ನಡೆದರೆ ಮಾತ್ರ ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡಗಳ ಮೇಲಿನ ದೌರ್ಜನ್ಯ (ಅಟ್ರೋಸಿಟಿ) ತಡೆ ಕಾಯ್ದೆಯಡಿ ಅಪರಾಧ ದಾಖಲಿಸಬಹುದು’ ಎಂದು ನ್ಯಾಯಾಲಯ ಹೇಳಿದೆ.

ಪ್ರಧಾನಿ ಮೋದಿ ಮತ್ತೆ ಅಧಿಕಾರಕ್ಕೆ ಬಂದ ನಂತರ ಉತ್ತರಪ್ರದೇಶ, ಮಹಾರಾಷ್ಟ್ರ ಮತ್ತು ಕರ್ನಾಟಕ ಈ ರಾಜ್ಯಗಳ ವಿಭಜನೆ ಆಗುವುದು !

ಪ್ರಧಾನಿ ಮೋದಿ ೨೦೨೪ ರ ಲೋಕಸಭೆಯ ಸಾರ್ವತ್ರಿಕ ಚುನಾವಣೆಯಲ್ಲಿ ಮತ್ತೆ ಅಧಿಕಾರಕ್ಕೆ ಬಂದ ನಂತರ ಉತ್ತರಪ್ರದೇಶ ರಾಜ್ಯದ ೫, ಮಹಾರಾಷ್ಟ್ರದ ೨ ಮತ್ತು ಕರ್ನಾಟಕ ರಾಜ್ಯದ ೨ ಭಾಗ ಮಾಡಿ ಹೊಸ ರಾಜ್ಯ ರಚನೆ ಮಾಡುವ ಯೋಜನೆ ಇದೆ

ಬೆಂಗಳೂರಿನಲ್ಲಿ ಪಾಕಿಸ್ತಾನಕ್ಕೆ ಸೇನೆಯ ಬಗ್ಗೆ ಗೌಪ್ಯ ಮಾಹಿತಿಯನ್ನು ನೀಡುತ್ತಿದ್ದ ಶರಫುದ್ದಿನನ ಬಂಧನ

ರಾಜ್ಯದ ಪೊಲೀಸ ಮತ್ತು ಸೇನಾದಳದ ಗೂಢಾಚಾರ ವಿಭಾಗವು ಮಾಡಿದ ಜಂಟಿ ಕಾರ್ಯಾಚರಣೆಯಲ್ಲಿ ಪಾಕಿಸ್ತಾನಕ್ಕೆ ಸೇನೆಯ ಬಗ್ಗೆ ಗೌಪ್ಯ ಮಾಹಿತಿ ಪೂರೈಸುತ್ತಿದ್ದ ಒಂದು ಗುಂಪಿನ ಸದಸ್ಯನೊಬ್ಬನನ್ನು ಬಂಧಿಸಿದ್ದಾರೆ. ಆರೋಪಿಯನ್ನು ಕೇರಳದ ವಯನಾಡು ಜಿಲ್ಲೆಯ ಶರಫುದ್ದಿನ ಎಂದು ಗುರುತಿಸಲಾಗಿದೆ.

ಗೌಂಡವಾಡ (ಬೆಳಗಾವಿ) ಎಂಬಲ್ಲಿ ಯುವಕನ ಹತ್ಯೆಯ ನಂತರ ಹಿಂಸಾಚಾರ !

ಬೆಳಗಾವಿ ಜಿಲ್ಲೆಯ ಕಾಕತಿ ಹತ್ತಿರದ ಗೌಂಡವಾಡ ಊರಿನಲ್ಲಿ ಎರಡು ದಿನಗಳ ಹಿಂದೆ ಹಿಂದೂ ಕಾರ್ಯಕರ್ತ ಸತೀಶ್ ಪಾಟೀಲ್ ಇವರ ದೇವಸ್ಥಾನದ ಭೂಮಿಯ ವಾದದಲ್ಲಿ ಹತ್ಯೆ ನಡೆಸಲಾಗಿದೆ. ಸತೀಶ್ ಪಾಟೀಲ್ ಇವರ ಹತ್ಯೆಯ ನಂತರ ಸಂತಪ್ತ ಜನಸಮೂಹದಿಂದ ಕೆಲವು ವಾಹನಗಳು ಹಾಗೂ ಕೆಲವು ಮನೆಗಳಿಗೆ ಬೆಂಕಿ ಹಚ್ಚಲಾಯಿತು.

ಮಹಾವಿದ್ಯಾಲಯದ ಪ್ರಾಚಾರ್ಯರ ಮೇಲೆ ಕೈಯೆತ್ತಿದ ಜನತಾದಳದ ಶಾಸಕ !

ಜಾತ್ಯತೀತ ಜನತಾದಳದ ಶಾಸಕ ಶ್ರೀನಿವಾಸ್ ಅವರು ಇಲ್ಲಿಯ ಒಂದು ಮಹಾವಿದ್ಯಾಲಯದ ಪ್ರಾಚಾರ್ಯರ ಮೇಲೆ ಕೈತ್ತಿರುವ ವೀಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುತ್ತಿದೆ. ಆದ್ದರಿಂದ ಜನರು ಶ್ರೀನಿವಾಸರವರನ್ನು ನಿಷೇಧಿಸುತ್ತಿದ್ದಾರೆ.

ಅಂತರರಾಷ್ಟ್ರೀಯ ಯೋಗ ದಿನದ ನಿಮಿತ್ತ ೧೫ ಸಾವಿರ ಜನರೊಂದಿಗೆ ಯೋಗಾಸನ ಮಾಡಿದ ಪ್ರಧಾನಿ ಮೋದಿ

ಭಾರತ ಸಹಿತ ಜಗತ್ತಿನಾದ್ಯಂತ ಜೂನ್ ೨೧ ರಂದು ಎಂಟನೇ ಅಂತರರಾಷ್ಟ್ರೀಯ ಯೋಗ ದಿನವನ್ನು ಆಚರಿಸಲಾಯಿತು. ಯೋಗ ದಿನ ಆಚರಿಸುವುದಕ್ಕಾಗಿ ಪ್ರಧಾನಿ ಮೋದಿಯವರು ಮೈಸೂರು ಪ್ಯಾಲೇಸ್ ಮೈದಾನಕ್ಕೆ ಹೋಗಿದ್ದರು.

‘ಅಗ್ನಿವೀರರ ಸಹಾಯದಿಂದ ರಾಷ್ಟ್ರೀಯ ಸ್ವಯಂ ಸೇವಕ ಸಂಘ ಸೈನ್ಯದ ಮೇಲೆ ನಿಯಂತ್ರಣ ಪಡೆಯಲಿದೆ ! (ಅಂತೆ)

ಸೇನೆಯ ‘ಅಗ್ನಿಪಥ’ ಯೋಜನೆಯಿಂದ ಎರಡುವರೆ ಲಕ್ಷ ಯುವಕರನ್ನು ಸೇವೆಗೆ ತೆಗೆದುಕೊಳ್ಳಬಹುದು ಅವರು ರಾಷ್ಟ್ರೀಯ ಸ್ವಯಂ ಸೇವಕ ಸಂಘದ ಸ್ವಯಂಸೇವಕರಾಗಿರುವರು. ಇದು ಸಂಘದ ಗುಪ್ತತಂತ್ರವಾಗಿದೆ.

ಅಗ್ನಿಪಥ ಯೋಜನೆಯ ವಿರುದ್ಧ ನಡೆಯುತ್ತಿರುವ ಗಲಭೆಗಳ ಪ್ರಕರಣ

ಎರಡು ದಿನಗಳ ಕರ್ನಾಟಕ ಪ್ರವಾಸದಲ್ಲಿರುವ ಪ್ರಧಾನಿ ನರೇಂದ್ರ ಮೋದಿ ಅವರು ಒಂದು ಕಾರ್ಯಕ್ರಮದಲ್ಲಿ ‘ಅಗ್ನಿಪಥ’ ಈ ಸೈನ್ಯ ನೇಮಕಾತಿ ಯೋಜನೆಯ ವಿರುದ್ಧ ನಡೆಯುತ್ತಿರುವ ಆಂದೋಲನವನ್ನು ಉಲ್ಲೇಖಿಸದೆ ಹೇಳಿಕೆ ನೀಡಿದ್ದಾರೆ.