ಸನಾತನ ಸಂಸ್ಥೆಯ ಗುರುಪೂರ್ಣಿಮಾ ಮಹೋತ್ಸವಕ್ಕೆ ಉಪಸ್ಥಿತರಿರುವಂತೆ ಮುಖ್ಯಮಂತ್ರಿ ಶ್ರೀ. ಬಸವರಾಜ ಬೊಮ್ಮಾಯಿ ಇವರಿಗೆ ಆಮಂತ್ರಣ !

ಬೆಂಗಳೂರು – ಸನಾತನ ಸಂಸ್ಥೆಯ ವತಿಯಿಂದ ಆಯೋಜಿಸಲಾಗಿರುವ ಗುರುಪೂರ್ಣಿಮಾ ಮಹೋತ್ಸವದ ನಿಮಿತ್ತ ಮುಖ್ಯಮಂತ್ರಿ ಶ್ರೀ ಬಸವರಾಜ ಬೊಮ್ಮಾಯಿ ಇವರನ್ನು ಭೇಟಿಯಾಗಿ ಆಮಂತ್ರಣ ನೀಡಲಾಯಿತು. ಸನಾತನ ಸಂಸ್ಥೆಯ ಸೌ. ವನಜಾ ಇವರು ಮುಖ್ಯಮಂತ್ರಿ ಶ್ರೀ. ಬಸವರಾಜ ಬೊಮ್ಮಾಯಿ ಇವರನ್ನು ಭೇಟಿಯಾಗಿ ಅವರನ್ನು ಆಮಂತ್ರಿಸಿದರು. ಈ ಸಮಯದಲ್ಲಿ ಸೌ. ವನಜಾ ಇವರು ಮುಖ್ಯಮಂತ್ರಿಗಳಿಗೆ ಆಮಂತ್ರಣ ಪತ್ರಿಕೆ ಹಾಗೂ ಕನ್ನಡ ಸಾಪ್ತಾಹಿಕ ‘ಸನಾತನ ಪ್ರಭಾತ’ದ ಗುರುಪೂರ್ಣಿಮೆ ವಿಶೇಷಾಂಕವನ್ನು ನೀಡಿ ಗುರುಪೂರ್ಣಿಮೆಯ ಮಹತ್ವವನ್ನು ಹೇಳಿದರು. ಅವರು ಅದನ್ನು ಅತ್ಯಂತ ಜಿಜ್ಞಾಸೆಯಿಂದ ಮತ್ತು ಮನಃಪೂರ್ವಕವಾಗಿ ಆಲಿಸಿದರು. ಈ ಸಮಯದಲ್ಲಿ ಹಿಂದೂ ಜನಜಾಗೃತಿ ಸಮಿತಿಯ ಕರ್ನಾಟಕ ರಾಜ್ಯ ವಕ್ತಾರ ಶ್ರೀ. ಮೋಹನ ಗೌಡ ಮತ್ತು ಸಮಿತಿಯ ಸೌ. ಭವ್ಯ ಗೌಡ ಇವರು ಉಪಸ್ಥಿತಿರಿದ್ದರು