ಭ್ರಷ್ಟಾಚಾರ ನಿಗ್ರಹ ದಳದ ಭ್ರಷ್ಟಾಚಾರದ ಕಾರಣ ನನಗೆ ವರ್ಗಾವಣೆಯ ಬೆದರಿಕೆ!

ಉಚ್ಚನ್ಯಾಯಾಲಯದ ವಿಚಾರಣೆ ವೇಳೆ ನ್ಯಾಯಮೂರ್ತಿಗಳ ಆರೋಪ

ಬೆಂಗಳೂರು – ಕರ್ನಾಟಕ ಉಚ್ಚನ್ಯಾಯಲಯದ ನ್ಯಾಯಮೂರ್ತಿ ಎಚ.ಪಿ. ಸಂದೇಶ ಪ್ರಕರಣವೊಂದರ ವಿಚಾರಣೆ ವೇಳೆ ‘ಭ್ರಷ್ಟಾಚಾರ ನಿಗ್ರಹ ದಳದ ಕಾರ್ಯದ ಬಗ್ಗೆ ಟೀಕೆ ಮಾಡಿದಕ್ಕೆ ದಳದ ಹೆಚ್ಚುವರಿ ಪೊಲೀಸ ಮಹಾ ನಿರ್ದೇಶಕರು ಅಸಮಾಧಾನ ವ್ಯಕ್ತಪಡಿಸಿದ್ದಾರೆ ಮತ್ತು ನಿಮ್ಮ ವರ್ಗಾವಣೆ ಆಗಬಹುದು ಎಂದು ನನಗೆ ನನ್ನ ಒಬ್ಬ ಸಹಕಾರಿಯಿಂದ ತಿಳಿದುಬಂತು. ನಾನು ನನ್ನ ವರ್ಗಾವಣೆಯ ಬೆದರಿಕೆಯನ್ನು ದಾಖಲಿಸಿಕೊಳ್ಳತ್ತೇನೆ. ಇದು ನ್ಯಾಯಾಂಗ ಸ್ವಾತಂತ್ರ್ಯಕ್ಕೆ ಧಕ್ಕೆ ತಂದಿದೆ. ಸ್ಥಾನ ಕಳೆದುಕೊಳ್ಳುವ ಭಯ ನನಗಿಲ್ಲ’ ಎಂದು ಆರೋಪಿಸಿದ್ದಾರೆ. ರಾಜ್ಯದಲ್ಲಿ ಈ ಬಗ್ಗೆ ವ್ಯಾಪಕ ಚರ್ಚೆ ನಡೆಯುತ್ತಿದೆ. ಲಂಚ ಪಡೆದ ತಹಸಿಲ್ದಾರನ ಜಾಮೀನು ಅರ್ಜಿ ವಿಚಾರಣೆ ವೇಳೆ ನ್ಯಾಯಮೂರ್ತಿ ಸಂದೇಶ ರವರು ಈ ಹೇಳಿಕೆ ನೀಡಿದ್ದಾರೆ.

ನ್ಯಾಯಮೂರ್ತಿ ಸಂದೇಶ ಮುಂದುವರೆದು

೧. ನ್ಯಾಯಮೂರ್ತಿ ಆದ ನಂತರ ಆಸ್ತಿ ಸಂಪಾದಿಸಿಲ್ಲ ಬದಲಿಗೆ ೪ ಎಕರೆ ಕೃಷಿ ಭೂಮಿಯನ್ನು ಮಾರಾಟ ಮಾಡಿದ್ದೇನೆ. ನಾನು ರೈತನ ಮಗನಾಗಿದ್ದು, ಮತ್ತೆ ಕೃಷಿ ಮಾಡಲು ಸಿದ್ಧನಿದ್ದೇನೆ.

೨. ನನಗೆ ಯಾವುದೇ ಪಕ್ಷ ಅಥವಾ ಸಿದ್ಧಾಂತದೊಂದಿಗೆ ಸಂಬಂಧವಿಲ್ಲ, ನನ್ನ ಬದ್ಧತೆ ಸಂವಿಧಾನಕ್ಕೆ ಮಾತ್ರ.

೩. ಭ್ರಷ್ಟಾಚಾರ ನಿಗ್ರಹ ದಳ ಸಾರ್ವಜನಿಕ ಹಿತಾಸಕ್ತಿ ಕಾಪಾಡುತ್ತಿದೆಯೇ ಅಥವಾ ಕಳಂಕಿತ ವ್ಯಕ್ತಿಯ ಸಂರಕ್ಷಣೆ ಮಾಡುತ್ತಿದೆಯೇ?

೪. ನ್ಯಾಯಮೂರ್ತಿಗಳು ಧರಿಸಿರುವ ಕಪ್ಪು ಕೋಟು ಭ್ರಷ್ಟರನ್ನು ರಕ್ಷಿಸಲು ಅಲ್ಲ. ಭ್ರಷ್ಟಾಚಾರವು ಅರ್ಬುದರೋಗವಾಗಿ ಮಾರ್ಪಟ್ಟಿದೆ ಮತ್ತು ಅದು ನಾಲ್ಕನೇ ಹಂತವನ್ನು ತಲುಪಬಾರದು. ಭ್ರಷ್ಟಾಚಾರ ಇಡೀ ರಾಜ್ಯವನ್ನು ಕಾಡುತ್ತಿದೆ.

೫. ವಿಟಮಿನ್ ಎಂ. (ಹಣ) ಸಿಕ್ಕರೆ ಈ ಇಲಾಖೆ ಯಾರನ್ನಾದರೂ ರಕ್ಷಿಸುತ್ತದೆ. ಏನು ನಡೆಯುತ್ತಿದೆ ಎಂದು ನನಗೆ ತಿಳಿದಿದೆ. ಎಷ್ಟು ಪ್ರಕರಣಗಳ ಸರ್ಚ ವಾರೆಂಟಗಳನ್ನು ಹೊರಡಿಸಲಾಗಿದೆ ಮತ್ತು ಪ್ರಕರಣಗಳನ್ನು ಕಾರ್ಯಗತಗೊಳಿಸಲಾಗಿದೆ ಎಂದು ನನಗೆ ತಿಳಿದಿದೆ.

ಸಂಪಾದಕೀಯ ನಿಲುವು

ವಿಚಾರಣೆ ವೇಳೆ ನ್ಯಾಯಮೂರ್ತಿಗಳು ಮಾಡಿರುವ ಈ ಆರೋಪದ ಬಗ್ಗೆ ರಾಜ್ಯ ಸರಕಾರ ತನಿಖೆ ನಡೆಸಿ ಸತ್ಯವನ್ನು ಜನರ ಮುಂದಿಡಬೇಕು!

ಭ್ರಷ್ಟಾಚಾರದ ವಿರುದ್ದ ಕೆಲಸ ಮಾಡುವ ನ್ಯಾಯಮೂರ್ತಿಗಳನ್ನು ಭ್ರಷ್ಟಾಚಾರ ನಿಗ್ರಹ ದಳವು ತಡೆಯುತ್ತಿದ್ದರೆ, ರಾಜ್ಯದಲ್ಲಿ ಭ್ರಷ್ಟಾಚಾರ ಕಡಿಮೆಯಾಗುವ ಬದಲು ಹೆಚ್ಚಾಗುವುದರಲ್ಲಿ ಸಂಶಯವಿಲ್ಲ!

‘ನ್ಯಾಯಮೂರ್ತಿಗಳಿಗೆ ಪೊಲೀಸರಿಂದಲೇ ಇಂತಹ ಬೆದರಿಕೆ ಬರುತ್ತಿದ್ದರೆ ಅವರು ಸಾಮಾನ್ಯ ಭ್ರಷ್ಟಾಚಾರದ ವಿರುದ್ದ ಹೇಗೆ ಹೊರಾಡುತ್ತಾರೆ?’