ಹರ್ಷನ ಹತ್ಯೆಯ ಆರೋಪಿಗಳಿಗೆ ಜೈಲಿನಲ್ಲಿ ವಿಶೇಷ ಸೌಲಭ್ಯ !

  • ಹಿಜಾಬ್ ನಿಷೇಧ ಪ್ರಕರಣ

  • ಕುಟುಂಬದವರ ಆಕ್ರೋಶ

ಬೆಂಗಳೂರು – ಹಿಜಾಬ್ ನಿಷೇಧ ಪ್ರಕರಣದಲ್ಲಿ ಹತ್ಯೆಗೀಡಾದ ಭಜರಂಗದಳ ಕಾರ್ಯಕರ್ತ ಹರ್ಷನ ಹತ್ಯೆಯ ಆರೋಪಿ ಬೆಂಗಳೂರಿನ ಪರಪ್ಪನ ಅಗ್ರಹಾರ ಕೇಂದ್ರ ಕಾರಾಗೃಹದಲ್ಲಿ ವಿಶೇಷ ಸೌಲಭ್ಯ ಪಡೆಯುತ್ತಿರುವ ಚಿತ್ರ ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುತ್ತಿದೆ. ಆರೋಪಿಗಳು ಸೆರೆಮನೆಯಲ್ಲಿ ಮೊಬೈಲ್ ನಲ್ಲಿ ಮಾತನಾಡುತ್ತಿರುವ ಹಾಗೂ ವಿಡಿಯೋ ಕಾಲ್ ಮಾಡುತ್ತಿರುವ ಛಾಯಾಚಿತ್ರಗಳು ಎಲ್ಲೆಡೆ ಹರಿದಾಡುತ್ತಿವೆ.

(ಸೌಜನ್ಯ : VIJAYAVANI)

ಈ ಛಾಯಾಚಿತ್ರ ಬೆಳಕಿಗೆ ಬಂದ ನಂತರ ಹರ್ಷನ ಕುಟುಂಬದವರು ಆಕ್ರೋಶ ವ್ಯಕ್ತಪಡಿಸಿದ್ದಾರೆ. ಸರಕಾರಿ ವ್ಯವಸ್ಥೆ ನಮಗೆ ದ್ರೋಹ ಬಗೆದಿದೆ. ತಪ್ಪಿತಸ್ಥ ಅಧಿಕಾರಿಗಳನ್ನು ಅಮಾನತ್ತುಗೊಳಿಸಬೇಕು ಎಂದು ಹರ್ಷನ ಕುಟುಂಬಸ್ಥರು ಆಗ್ರಹಿಸಿದ್ದಾರೆ.

ರಾಷ್ಟ್ರೀಯ ತನಿಖಾ ದಳವು ಹರ್ಷನ ಹತ್ಯೆಯ ತನಿಖೆ ನಡೆಸುತ್ತಿದೆ. ಸೆರೆಮನೆಯಲ್ಲಿ ಆರೋಪಿ ಸಂಚಾರವಾಣಿಯಲ್ಲಿ ಮಾತನಾಡುತ್ತಿರುವ ಛಾಯಾಚಿತ್ರ ಬಿಡುಗಡೆಯಾದ ಬೆನ್ನಲ್ಲೇ ಇದೀಗ ಸೆರೆಮನೆಯಲ್ಲಿ ಆರೋಪಿ ಬಳಿ ಸಂಚಾರವಾಣಿ ಹೇಗೆ ಬಂತು ಎಂಬ ಬಗ್ಗೆ ಕಾರಾಗೃಹ ಆಡಳಿತ ಮಂಡಳಿ ತನಿಖೆ ನಡೆಸುತ್ತಿದೆ.