ಕರ್ನಾಟಕದಲ್ಲಿ ಪೊಲೀಸ ಉಪನಿರೀಕ್ಷಕರ ನೇಮಕಾತಿಯಲ್ಲಿನ ಹಗರಣ
ಬೆಂಗಳೂರು – ಕರ್ನಾಟಕ ರಾಜ್ಯದ ಇತಿಹಾಸದಲ್ಲಿ ಮೊದಲ ಬಾರಿಗೆ ಹೆಚ್ಚುವರಿ ಪೊಲೀಸ ಮಹಾನಿರ್ದೇಶಕ ಹುದ್ದೆಯಲ್ಲಿರುವ ವ್ಯಕ್ತಿಯ ಬಂಧನವಾಗಿರುವ ಘಟನೆ ನಡೆದಿದೆ. ಪೊಲೀಸ ಉಪನಿರೀಕ್ಷಕ ನೇಮಕಾತಿಗೆ ಸಂಬಂಧಿಸಿದ ಹಗರಣದಲ್ಲಿ ಹೆಚ್ಚುವರಿ ಪೊಲೀಸ್ ಮಹಾನಿರ್ದೇಶಕ ಅಮೃತಪೌಲ ಇವರನ್ನು ಬಂಧಿಸಲಾಗಿದೆ. ಅಪರಾಧ ತನಿಖಾ ದಳ ೪ ಬಾರಿ ವಿಚಾರಣೆ ನಡೆಸಿದ ಬಳಿಕ ಪೌಲ ಇವರನ್ನು ಬಂಧಿಸಿದ್ದಾರೆ. ಇಲ್ಲಿಯವರೆಗೆ ಈ ನೇಮಕಾತಿಯಲ್ಲಿ ಆಯ್ಕೆಗೊಂಡಿರುವ ೫೪೫ ಅಭ್ಯರ್ಥಿಗಳಲ್ಲಿ ೪೦ ಜನರನ್ನು ಬಂಧಿಸಲಾಗಿದೆ. ಪೌಲ ಇವರ ಮೇಲೆ, ಅವರು ಪ್ರತಿಯೊಬ್ಬ ಅಭ್ಯರ್ಥಿಯಿಂದ ೩೦ ರಿಂದ ೮೦ ಲಕ್ಷ ರೂಪಾಯಿಗಳ ಲಂಚವನ್ನು ತೆಗೆದುಕೊಂಡಿದ್ದಾರೆ ಎನ್ನುವ ಆರೋಪವಿದೆ. ಕರ್ನಾಟಕ ಸರಕಾರವು ಪೌಲ ಇವರನ್ನು ಅಮಾನತ್ತುಗೊಳಿಸಿದೆ. ಪೌಲ ಇವರು ನೇಮಕಾತಿಯ ಸಮಯದಲ್ಲಿ ನೇಮಕಾತಿ ವಿಭಾಗದ ಮುಖ್ಯಸ್ಥರಾಗಿದ್ದರು.
(ಸೌಜನ್ಯ : Asianet Suvarna News)
ಸಂಪಾದಕೀಯ ನಿಲುವುಹಿರಿಯ ಅಧಿಕಾರಿಗಳೇ ಭಷ್ಟಾಚಾರಿಗಳಾದರೆ, ಕಿರಿಯ ಅಧಿಕಾರಿ ಮತ್ತು ಪೊಲೀಸ ಪೇದೆಗಳು ಭ್ರಷ್ಟಾಚಾರ ಮಾಡುತ್ತಿದ್ದರೆ, ಇದರಲ್ಲಿ ಆಶ್ಚರ್ಯವೇನಿದೆ ? ಈ ಪ್ರಕರಣದಲ್ಲಿ ಪೌಲ್ ಇವರ ಹಿಂದೆ ಯಾವ ರಾಜಕಾರಣಿಗಳು ಇದ್ದಾರೆ, ಎನ್ನುವುದನ್ನು ಕಂಡು ಹಿಡಿಯುವ ಆವಶ್ಯಕತೆಯಿದೆ ! |