ಉತ್ತಮ ಸಂಸ್ಕಾರಗಳನ್ನು ಬೆಳೆಸಿಕೊಂಡು ದೇಶದ ಉತ್ತಮ ಪ್ರಜೆಗಳಾಗಿರಿ ! – ಪೂಜ್ಯ ರಮಾನಂದ ಗೌಡ, ಧರ್ಮಪ್ರಚಾರಕರು, ಸನಾತನ ಸಂಸ್ಥೆ

ಗುರುಪೂರ್ಣಿಮೆಯ ನಿಮಿತ್ತ ಬೆಂಗಳೂರಿನ ಆಚಾರ್ಯ ಶ್ರೀ ಮಹಾಪ್ರಜ್ಞಾ ಶಾಲೆಯಲ್ಲಿ ಸನಾತನ ಸಂಸ್ಥೆಯ ವತಿಯಿಂದ ಪ್ರವಚನ !

ಪೂ. ರಮಾನಂದ ಗೌಡ

ಬೆಂಗಳೂರು : ಜೀವನದಲ್ಲಿ ಸಂಸ್ಕಾರವು ತುಂಬ ಮಹತ್ವದ್ದಾಗಿದೆ. ಭಕ್ತ ಪ್ರಹ್ಲಾದನು ‘ಹಿರಣ್ಯಕಶ್ಯಪು’ ಎಂಬ ರಾಕ್ಷಸನ ಪುತ್ರನಾಗಿದ್ದರೂ ಧರ್ಮವು ಅವನ ಆದರ್ಶವನ್ನೇ ತೆಗೆದುಕೊಳ್ಳಲು ಹೇಳಿತು. ಆದ್ದರಿಂದ ಎಲ್ಲಿ ಜನಿಸಿದೆ ಎಂಬುದಕ್ಕಿಂತಲೂ ಯಾವ ಸಂಸ್ಕಾರವಾಗಿದೆ ಎಂಬುದು ಮುಖ್ಯವಾಗಿದ್ದು, ಆದ್ದರಿಂದ ನಾವೆಲ್ಲರೂ ಉತ್ತಮ ಸಂಸ್ಕಾರಗಳನ್ನು ಬೆಳೆಸಿಕೊಂಡು ದೇಶದ ಉತ್ತಮ ಪ್ರಜೆಗಳಾಗಬೇಕು ಎಂದು ಸನಾತನ ಸಂಸ್ಥೆಯ ಧರ್ಮಪ್ರಚಾರಕರಾದ ಪೂ. ರಮಾನಂದ ಗೌಡ ಇವರು ಮಾರ್ಗದರ್ಶನ ಮಾಡಿದರು. ಅವರು ಜುಲೈ ೧೨ ರಂದು ಗುರುಪೂರ್ಣಿಮೆಯ ನಿಮಿತ್ತವಾಗಿ ಇಲ್ಲಿನ ನಂದಿನಿ ಲೇಔಟ್ ನಲ್ಲಿನ ಆಚಾರ್ಯ ಶ್ರೀ ಮಹಾಪ್ರಜ್ಞಾ ಶಾಲೆಯಲ್ಲಿ ಮಾರ್ಗದರ್ಶನ ಮಾಡುತ್ತಿದ್ದರು. ವಿದ್ಯಾರ್ಥಿಗಳಿಗೆ ಗುರುಪೂರ್ಣಿಮೆ ಹಾಗೂ ಸುಂಸ್ಕಾರಗಳ ಮಹತ್ವ ತಿಳಿಸುವ ದೃಷ್ಟಿಯಿಂದ ಈ ಮಾರ್ಗದರ್ಶನದ ಆಯೋಜನೆ ಮಾಡಲಾಗಿತ್ತು.

ಈ ವೇಳೆ ಶಾಲೆಯ ಸಂಸ್ಥಾಪಕರು ಮತ್ತು ಪ್ರಾಂಶುಪಾಲರಾದ ಶ್ರೀಮತಿ ಪಾರ್ವತಿ ವಿಶ್ವನಾಥ, ಮುಖ್ಯೋಪಾಧ್ಯಾಯರಾದ ಸೌ. ಶೋಭಾ ಪ್ರವೀಣ ಮತ್ತು ಶಾಲೆಯ ಸುಮಾರು ೧೫೦ ಕ್ಕೂ ಹೆಚ್ಚು ವಿದ್ಯಾರ್ಥಿಗಳು ಉಪಸ್ಥಿತರಿದ್ದರು. ಶಿಕ್ಷಕರಾದ ಶ್ರೀ. ರಾಧಾ ಕೃಷ್ಣ ಭಟ್ ಇವರು ವ್ಯಾಸಪೂಜೆಯನ್ನು ಮಾಡಿದರು. ಈ ವೇಳೆ ಶಾಲೆಯ ಆಡಳಿತ ಮಂಡಳಿಯ ವತಿಯಿಂದ ಪೂ. ರಮಾನಂದ ಗೌಡ ಇವರಿಗೆ ಶಾಲು ಹೊದಿಸಿ, ಫಲಪುಷ್ಪ ನೀಡಿ ಸನ್ಮಾನಿಸಿದರು.

ವೈಶಿಷ್ಟ್ಯಪೂರ್ಣ ಅಂಶಗಳು :

೧. ಶಾಲೆಯ ಸಂಸ್ಥಾಪಕರಾದ ಶ್ರೀಮತಿ ಪಾರ್ವತಿ ಇವರು, “ಸನಾತನದ ಗ್ರಂಥಗಳು ಉತ್ತಮ ಸಂಸ್ಕಾರವನ್ನು ನೀಡುವ ಗ್ರಂಥಗಳಾಗಿವೆ, ನಾನು ವೈಯಕ್ತಿಕವಾಗಿ ಪ್ರತಿಯೊಬ್ಬ ವಿದ್ಯಾರ್ಥಿಯ ಮನೆಯಲ್ಲಿ ಈ ಗ್ರಂಥಗಳ ಮಾಹಿತಿ ತಲುಪಿಸುತ್ತೇನೆ. ಮುಂದಿನ ಶೈಕ್ಷಣಿಕ ವರ್ಷದಿಂದ ಅವರು ಶಾಲೆಯಲ್ಲಿ ಸನಾತನದ ‘ಸಂಸ್ಕಾರ ವಹಿ’ಗಳನ್ನು ಮಕ್ಕಳಿಗಾಗಿ ಕೊಡುತ್ತೇವೆ ಹಾಗೂ ಶಿಕ್ಷಕರಿಗಾಗಿ ಪ್ರತೀವಾರ ಧರ್ಮ ಶಿಕ್ಷಣದ ಆಯೋಜನೆ ಮಾಡುತ್ತೇನೆ.” ಎಂದು ಹೇಳಿದರು.

೨. ಈ ಸಮಯದಲ್ಲಿ ಎಲ್ಲಾ ವಿದ್ಯಾರ್ಥಿಗಳು ‘ಸಂಸ್ಥೆಯ ವತಿಯಿಂದ ನಡೆಸಲಾಗುವ ‘ಆನ್‌ಲೈನ್’ ಬಾಲಸಂಸ್ಕಾರ ವರ್ಗಕ್ಕೆ ಉಪಸ್ಥೀತ ಇರುತ್ತೇವೆ ಎಂದು ತಿಳಿಸಿದರು.