ಬಾಗಲಕೋಟೆಯಲ್ಲಿ ಚುಡಾಯಿಸಿದ್ದರಿಂದ ಹಿಂದೂ ಹಾಗೂ ಮುಸಲ್ಮಾನರ ನಡುವೆ ಹಿಂಸಾಚಾರ : ೪ ಜನರು ಗಾಯಗೊಂಡಿದ್ದಾರೆ

ಬಾಗಲಕೋಟೆ (ಕರ್ನಾಟಕ) – ಇಲ್ಲಿನ ಕೆರೂರು ಟಾವುನ ಭಾಗದಲ್ಲಿ ಜುಲೈ ೬ರಂದು ಸಂಜೆ ಹಿಂದೂ ಹಾಗೂ ಮುಸಲ್ಮಾನರ ನಡುವೆ ಹುಡುಗಿಯನ್ನು ಚುಡಾಯಿಸಿದ ವಿಷಯದಲ್ಲಿ ಹಿಂಸಾಚಾರ ನಡೆಯಿತು. ಇದರಲ್ಲಿ ೪ ಜನರು ಗಾಯಗೊಂಡಿದ್ದಾರೆ. ಈ ಹಿಂಸಾಚಾರದ ಸಮಯದಲ್ಲಿ ಬೆಂಕಿಯ ಅನಾಹುತ ಹಾಗೂ ಹರಿತವಾದ ಶಸ್ತ್ರಗಳನ್ನು ಬಳಸಲಾಯಿತು. ಗಾಯಗೊಂಡವರಲ್ಲಿ ಲಕ್ಷ್ಮಣ ಕಟ್ಟೀಮನಿ ಹಾಗೂ ಅರುಣ ಕಟ್ಟೀಮನಿ ಎಂಬ ಇಬ್ಬರು ತರುಣರು ಸೇರಿದ್ದಾರೆ. ಅವರ ಮೇಲೆ ಹರಿತವಾದ ಶಸ್ತ್ರಗಳಿಂದ ಆಕ್ರಮಣ ಮಾಡಲಾಗಿದೆ. ಅವರ ಮೇಲೆ ಆಸ್ಪತ್ರೆಯಲ್ಲಿ ಉಪಚಾರ ನಡೆದಿದೆ. ಸದ್ಯ ಇ‌ಲ್ಲಿ ಜುಲೈ ೮ ರ ವರೆಗೆ ಗುಂಪು ಸೇರುವುದನ್ನು ನಿರ್ಬಂಧಿಸಲಾಗಿದೆ.

(ಸೌಜನ್ಯ : Tv9 Kannada)

ಸಂಪಾದಕೀಯ ನಿಲುವು

ಇದಕ್ಕೆ ಜವಾಬ್ದಾರರಾಗಿರುವವರ ಮೇಲೆ ಕಠೋರ ಕಾರ್ಯಾಚರಣೆಯನ್ನು ಮಾಡಿ ಪುನಃ ಹಿಂಸಾಚಾರವಾಗದಂತೆ ಪೊಲೀಸರು ಪಾಠಕಲಿಸಬೇಕಿದೆ !