ಅನಾಸಕ್ತ, ತಲ್ಲೀನರಾಗಿ ಮೂರ್ತಿ ಕೆತ್ತನೆಯ ಸೇವೆ ಮಾಡುವ ಮತ್ತು ಪರಾತ್ಪರ ಗುರು ಡಾ. ಆಠವಲೆ ಇವರ ಕುರಿತು ಭಾವವಿರುವ ಕಾರವಾರದ ಶಿಲ್ಪಕಾರ ಪೂ. ನಂದಾ ಆಚಾರಿ (ಗುರೂಜಿ) (೮೨ ವರ್ಷ)
ವಯಸ್ಸು ಹೆಚ್ಚಾಗಿದ್ದರೂ ಅವರು ಪ್ರತಿಯೊಂದು ಕೃತಿಯನ್ನು ಬಹಳ ತತ್ಪರತೆಯಿಂದ ಮಾಡುತ್ತಾರೆ. ಅವರ ಮನೆಯು ಮೂರ್ತಿ ಕೆತ್ತುವ ಸ್ಥಳದಿಂದ ಸುಮಾರು ೧೦೦ ರಿಂದ ೧೫೦ ಅಡಿ ದೂರದಲ್ಲಿದೆ. ಅವರಿಗೆ ವಯೋಮಾನ ಸಹಜ ತೊಂದರೆಗಳಾಗುತ್ತದೆ ಮತ್ತು ಅವರಿಗೆ ಮಂಡಿ ನೋವಿದೆ. ಆದರೂ ನಾವು ಸೇವೆ ಮಾಡುವಾಗ ಅವರಿಗೆ ನಮಗೆ ಏನಾದರೂ ತೋರಿಸಬೇಕೆಂದು ನೆನಪಾದರೆ ಅವರು ಮನೆಗೆ ಹೋಗಿ ಆ ವಸ್ತು ತಂದು ನಮಗೆ ತೋರಿಸುತ್ತಿದ್ದರು.