ಗೋವಾದ ಶಾಲೆಯ ಪಠ್ಯಪುಸ್ತಕಗಳಲ್ಲಿ ಫ್ರಾನ್ಸಿಸ ಝೇವಿಯರರವರ ವೈಭವೀಕರಣ

ಪಣಜಿ, ಅಕ್ಟೋಬರ (ವಾರ್ತೆ.) – ಗೋವಾದಲ್ಲಿನ ಶಾಲೆಯ ಪಠ್ಯಪುಸ್ತಕಗಳಲ್ಲಿ ಹಿಂದೂಗಳ ಮೇಲೆ ಇನ್ಕ್ವಿಝಿಶನ (ಧಾರ್ಮಿಕ ಚಿತ್ರಹಿಂಸೆಯ)ನ್ನು ಹೇರಿದ ಫ್ರಾನ್ಸಿಸ ಝೇವಿಯರನ ವೈಭವೀಕರಣ ನಡೆದಿದೆ. ಇತ್ತೀಚೆಗೆ ನಡೆದ ಶಾಲೆಯ ಪರೀಕ್ಷೆಯಲ್ಲಿ ಒಂದು ವಿದ್ಯಾಲಯದ ೬ನೇ ತರಗತಿಯ ಹಿಂದಿ ಪರೀಕ್ಷೆಯ ಪ್ರಶ್ನೆಪತ್ರಿಕೆಯಲ್ಲಿನ ಪ್ರಶ್ನೆಯಿಂದ ಈ ಸಂಗತಿಯು ಪುನಃ ಬೆಳಕಿಗೆ ಬಂದಿದೆ.

ಈ ಪ್ರಶ್ನೆಪತ್ರಿಕೆಯಲ್ಲಿ ಝೇವಿಯರನ ವೈಭವೀಕರಣ ಮಾಡುವ ಮಾಹಿತಿಯಿರುವ ಇಂದು ವಾಕ್ಯವೃಂದವನ್ನು ನೀಡಲಾಗಿದೆ ಹಾಗೂ ಅದರ ಮೇಲೆ ಆಧಾರಿತ ೫ ಪ್ರಶ್ನೆಗಳನ್ನು ಉತ್ತರಿಸಲು ಹೇಳಲಾಗಿದೆ. ಈ ವಾಕ್ಯವೃಂದದಲ್ಲಿ ಮುಂದಿನ ಮಾಹಿತಿಯಿದೆ –

ಹಳೆಯ ಗೋವಾದಲ್ಲಿನ ಬಾಮ ಜಿಝಸ ಚರ್ಚನಲ್ಲಿ ಕ್ರೈಸ್ತ ಧರ್ಮದಲ್ಲಿನ ಮಹಾನ ಸಂತ ಹಾಗೂ ಪ್ರಚಾರಕ ಸೆಂಟ್‌ ಝೇವಿಯರರವರ ಶವವನ್ನು ಬೆಳ್ಳಿಯ ಪೆಟ್ಟಿಗೆಯಲ್ಲಿ ಇಡಲಾಗಿದೆ. ಪ್ರತಿ ೧೦ ವರ್ಷಗಳಿಗೊಮ್ಮೆ ಭಕ್ತಗಣಕ್ಕಾಗಿ ಈ ಶವದ ದರ್ಶನದ ಕಾರ್ಯಕ್ರಮವನ್ನು ಆಯೋಜಿಸಲಾಗುತ್ತದೆ. ಈ ಮಹಾನ ಸಂತನ ನೆನಪು ಎಂದು ಪ್ರತಿವರ್ಷ ಹಳೆಯ ಗೋವಾದಲ್ಲಿ ಡಿಸೆಂಬರ ೩ರಂದು ಫೆಸ್ತಾವನ್ನು (ಜಾತ್ರೆಯನ್ನು) ಆಯೋಜಿಸಲಾಗುತ್ತದೆ ಹಾಗೂ ಇದರಲ್ಲಿ ವಿವಿಧ ಸಾಹಿತ್ಯದೊಂದಿಗೆ ಸೆಂಟ್‌ ಝೇವಿಯರಗೆ ಅರ್ಪಿಸಲು ಮೇಣದ ಕೈ-ಕಾಲುಗಳನ್ನು ಮಾರಾಟಕ್ಕೆ ಇಡಲಾಗುತ್ತದೆ ಹಾಗೂ ಇದು ಈ ಜಾತ್ರೆಯ ಪ್ರಮುಖ ಆಕರ್ಷಣೆಯಾಗಿದೆ. ಜಗತ್ತಿನಾದ್ಯಂತ ಜನರು ಇದರಲ್ಲಿ ಸಹಭಾಗಿಯಾಗುತ್ತಾರೆ.’

ಈ ವಾಕ್ಯವೃಂದದ ಮೇಲೆ ಮುಂದಿನ ಪ್ರಶ್ನೆಗಳನ್ನು ಕೇಳಲಾಗಿದೆ.

೧. ಹಳೆಯ ಗೋವಾದಲ್ಲಿ ನಡೆಯುವ ಫೆಸ್ತಾವಿನ ಪ್ರಮುಖ ಆಕರ್ಷಣೆ ಏನು ?

೨. ಯಾವಾಗ ಸೆಂಟ್‌ ಝೇವಿಯರನ ನಿಧನವಾಯಿತು ?

೩. ಸೆಂಟ ಝೆವಿಯರನ ಶವವನ್ನು ಜನರಿಗೆ ದರ್ಶನಕ್ಕಾಗಿ ಎಷ್ಟು ವರ್ಷಗಳಿಗೊಮ್ಮೆ ತೆರೆದಿಡಲಾಗುತ್ತದೆ ?

೪. ವಾಕ್ಯವೃಂದಕ್ಕೆ ಯೋಗ್ಯ ಶೀರ್ಷಿಕೆಯನ್ನು ನೀಡಬೇಕು.

೪ನೇ ತರಗತಿಯ ಆಂಗ್ಲ ವಿಷಯದಲ್ಲಿನ ಪಠ್ಯಪುಸ್ತಕದಲ್ಲಿಯೂ ಫ್ರಾನ್ಸಿಸ ಝೇವಿಯರನ ಇಂತಹದೇ ವೈಭವೀಕರಣ ಮಾಡಲಾಗಿದೆ. ಈ ಪಠ್ಯಪುಸ್ತಕದಲ್ಲಿ ‘ಗೊಂಯಚೊ ಸಾಯಬ’ (ಗೋವಾದ ಸಾಹೇಬ) ಎಂಬ ಹೆಸರಿನಲ್ಲಿ ಒಂದು ಪಾಠವನ್ನು ಸೇರಿಸಲಾಗಿದೆ ಹಾಗೂ ಇದರಲ್ಲಿ ಝೇವಿಯರನ ಕೈಯಲ್ಲಿ ಕ್ರಾಸ ಹಿಡಿದಿರುವ ಒಂದು ಚಿತ್ರ ಹಾಗೂ ಅವನ ಮಾಹಿತಿ ನೀಡಲಾಗಿದೆ. ‘ಝೇವಿಯರನು ಗೋವಾಗೆ ಬಂದ ನಂತರ ಕಡುಬಡವರಿಗೆ ಸಹಾಯ ಮಾಡಿದನು ಹಾಗೂ ಜೈಲಿಗೆ ಹೋಗಿ ಕೈದಿಗಳ ಮತಪರಿವರ್ತನೆ(ಮತಾಂತರ?) ಮಾಡಿದನು, ಹಾಗೆಯೇ ಅವನು ನಿಸ್ವಾರ್ಥಿ ಜೀವನವನ್ನು ನಡೆಸಿದನು’, ಎಂಬ ಮಾಹಿತಿಯನ್ನು ನೀಡಲಾಗಿದೆ.

ಸಂಪಾದಕೀಯ ನಿಲುವು

ಗೋವಾ ಸರಕಾರವು ಇದನ್ನು ಗಮನಿಸಿ ಪಠ್ಯಪುಸ್ತಕದಿಂದ ಈ ಪಾಠವನ್ನು ತೆಗೆದುಹಾಕಬೇಕು, ಎಂಬುದು ಹಿಂದೂಗಳ ಅಪೇಕ್ಷೆಯಾಗಿದೆ !

ಹಿಂದಿ ಪರೀಕ್ಷೆಯ ಪ್ರಶ್ನೆಪತ್ರಿಕೆಯಲ್ಲಿ ಝೇವಿಯರರವರ ವೈಭವೀಕರಣ ಮಾಡುವ ವಾಕ್ಯವೃಂದವನ್ನು ನೀಡುವ ಹಾಗೂ ನಾಲ್ಕನೇ ತರಗತಿಯ ಆಂಗ್ಲ ವಿಷಯದ ಪಠ್ಯಪುಸ್ತಕದಲ್ಲಿ ಪಾಠವನ್ನು ಸೇರಿಸಿರುವವರ ಮೇಲೆ ಕಾರ್ಯಾಚರಣೆ ನಡೆಯಬೇಕು ! ಹಿಂದೂಗಳು ಇದಕ್ಕಾಗಿ ಕಾನೂನುಬದ್ಧ ಮಾರ್ಗದಿಂದ ಧ್ವನಿಯೆತ್ತಬೇಕು !

ಗೋವಾದಲ್ಲಿನ ಹಿಂದೂಗಳ ಮೇಲೆ ಇನ್ಕ್ವಿಝಿಶನ (ಧಾರ್ಮಿಕ ಚಿತ್ರಹಿಂಸೆ)ಯನ್ನು ಹೇರುವ ಫ್ರಾನ್ಸಿಸ ಝೇವಿಯರನೇ ಆಗಿನ ಪೊರ್ಚುಗಲ್‌ನ ರಾಜನಿಗೆ ಪತ್ರ ಬರೆದಿರುವ ಸಾಕ್ಷಿಯಿದೆ. ಆದುದರಿಂದ ಅವನು ಹಿಂದೂಗಳಿಗೆ ಸಂತನಾಗಿರಲು ಸಾಧ್ಯವಿಲ್ಲ !