ಸನಾತನ ಸಂಸ್ಥೆಯು ಕಾರವಾರದ ಶಿಲ್ಪಕಾರರಾದ ಶ್ರೀ. ನಂದಾ ಆಚಾರಿ (ಗುರೂಜಿ) (ವಯಸ್ಸು ೮೨ ವರ್ಷ) ಇವರಿಂದ ಶ್ರೀ ಸಿದ್ಧಿ ವಿನಾಯಕನ ಮೂರ್ತಿ ಕೆತ್ತಿಸಿದೆ. ಸನಾತನ ಸಂಸ್ಥೆಯ ಸಾಧಕ ಶ್ರೀ. ರಾiನಂದ ಪರಬ ಮತ್ತು ಶ್ರೀ. ರಾಜು ಸುತಾರ ಇವರು ಶಿಲ್ಪ ಕಲೆ ಕಲಿಯಲು ಅವರಲ್ಲಿಗೆ ಹೋಗಿದ್ದರು. ಆ ಸಮಯದಲ್ಲಿ ಅವರಿಗೆ ಗುರೂಜಿಯಿಂದ ಕಲಿಯಲು ಸಿಕ್ಕಿರುವ ಅಂಶಗಳು ಮತ್ತು ಗಮನಕ್ಕೆ ಬಂದಿರುವ ಅವರ ಗುಣವೈಶಿಷ್ಟ್ಯಗಳನ್ನು ಮುಂದೆ ನೀಡಲಾಗಿದೆ.
ಹಿಂದಿನ ಕಾಲದಲ್ಲಿ ಶಿಷ್ಯರು ಗುರುಗಳಿಂದ ಶಿಕ್ಷಣ ಪಡೆಯಲು ಅವರ ಆಶ್ರಮಕ್ಕೆ (ಗುರುಕುಲಕ್ಕೆ) ಹೋಗುತ್ತಿದ್ದರು. ಆಗ ಅವರು ತಮ್ಮ ಗುರುಗಳಿಗೆ ‘ಗುರೂಜಿ ಎಂದು ಕರೆಯುತ್ತಿದ್ದರು. ಅದೇ ರೀತಿ ಸಾಧಕರಾದ ಶ್ರೀ. ರಾಮಾನಂದ ಪರಬ ಮತ್ತು ಶ್ರೀ. ರಾಜು ಸುತಾರ ಇವರು ಶಿಲ್ಪ ಕಲೆ ಕಲಿಯಲು ಶಿಲ್ಪಕಾರರಾದ ಶ್ರೀ. ನಂದಾ ಆಚಾರಿ ಇವರಲ್ಲಿಗೆ ಹೋಗಿದ್ದರು. ಆದ್ದರಿಂದ ಅವರ ಬಗ್ಗೆ ಮುಂದಿನ ಲೇಖನದಲ್ಲಿ ಶಿಲ್ಪಕಾರರಾದ ಶ್ರೀ. ನಂದಾ ಆಚಾರಿ ಇವರನ್ನು ಸಾಧಕರು ‘ಗುರೂಜಿ ಎಂದು ಸಂಬೋಧಿಸಿದ್ದಾರೆ.
೧. ಆನಂದಿ ಮತ್ತು ಉತ್ಸಾಹಿ
‘ಗುರೂಜಿಯವರು ಬಹಳ ಉತ್ಸಾಹಿ ಮತ್ತು ಆನಂದದಲ್ಲಿ ರುತ್ತಾರೆ. ವಯಸ್ಸು ಹೆಚ್ಚಾಗಿದ್ದರೂ ಅವರ ಸೇವೆ ಮಾಡುವ ವೇಗ ಹೆಚ್ಚಿದೆ. – ಶ್ರೀ. ರಾಮಾನಂದ ಪರಬ ಮತ್ತು ಶ್ರೀ. ರಾಜು ಸುತಾರ
೨. ಅವರ ಜೀವನಶೈಲಿ ಬಹಳ ಸರಳ ಸಾಮಾನ್ಯವಾಗಿದೆ. – ಶ್ರೀ. ರಾಮಾನಂದ ಪರಬ
೩. ತತ್ಪರತೆ
ವಯಸ್ಸು ಹೆಚ್ಚಾಗಿದ್ದರೂ ಅವರು ಪ್ರತಿಯೊಂದು ಕೃತಿಯನ್ನು ಬಹಳ ತತ್ಪರತೆಯಿಂದ ಮಾಡುತ್ತಾರೆ. ಅವರ ಮನೆಯು ಮೂರ್ತಿ ಕೆತ್ತುವ ಸ್ಥಳದಿಂದ ಸುಮಾರು ೧೦೦ ರಿಂದ ೧೫೦ ಅಡಿ ದೂರದಲ್ಲಿದೆ. ಅವರಿಗೆ ವಯೋಮಾನ ಸಹಜ ತೊಂದರೆಗಳಾಗುತ್ತದೆ ಮತ್ತು ಅವರಿಗೆ ಮಂಡಿ ನೋವಿದೆ. ಆದರೂ ನಾವು ಸೇವೆ ಮಾಡುವಾಗ ಅವರಿಗೆ ನಮಗೆ ಏನಾದರೂ ತೋರಿಸಬೇಕೆಂದು ನೆನಪಾದರೆ ಅವರು ಮನೆಗೆ ಹೋಗಿ ಆ ವಸ್ತು ತಂದು ನಮಗೆ ತೋರಿಸುತ್ತಿದ್ದರು. ಅವರ ಈ ಕೃತಿ ನೋಡಿ ನಮಗೆ ಪರಾತ್ಪರ ಗುರು ಡಾಕ್ಟರರ ನೆನಪಾಯಿತು. ಅವರು ಸಹ ನಮಗೆ ಏನಾದರೂ ತೋರಿಸುವುದಿದ್ದರೆ ಮರೆಯಬಾರದೆಂದು ತಕ್ಷಣ ಕೊಣೆಗೆ ಹೋಗಿ ತಂದು ತೋರಿಸುತ್ತಿದ್ದರು.
೪. ಸ್ವಾವಲಂಬಿ
೪ ಅ. ಇಳಿವಯಸ್ಸಿನಲ್ಲಿಯೂ ಕಷ್ಟಪಟ್ಟು ಉದರಪೋಷಣೆ ನಡೆಸು ತ್ತಾರೆ : ಅವರಿಗೆ ಯಾವುದೇ ವ್ಯಸನವಿಲ್ಲ. ಅವರ ಔಷಧಿಗಾಗಿ ಬೇಕಾಗುವ ಖರ್ಚನ್ನು ಅವರು ಎಂದಿಗೂ ಅವರ ಮಕ್ಕಳ ಬಳಿ ಕೇಳಲಿಲ್ಲ ಅಥವಾ ಇತರ ಯಾರಲ್ಲಿಯೂ ಕೇಳುವುದಿಲ್ಲ. “ನಾನು ಯಾವಾಗಲೂ ನಾನೇ ಗಳಿಸುತ್ತೇನೆ ಮತ್ತು ಆ ಹಣ ಉಪಯೋಗಿಸುತ್ತೇನೆ. ಭಗವಂತ ನನಗೆ ಅನುಕೂಲ ಮಾಡಿ ಕೊಡುತ್ತಾನೆ. ಯಾವಾಗ ಹಣ ಇರುವುದಿಲ್ಲ, ಆಗ ಮರುದಿನ ಯಾರ ಮೂಲಕವಾದರೂ ಭಗವಂತನು ಹಣದ ಅನುಕೂಲ ಮಾಡಿಕೊಡುತ್ತಾನೆ. ಎಲ್ಲಿಯವರೆಗೆ ಕೈ ಕಾಲು ಗಟ್ಟಿಯಾಗಿವೆ ಅಲ್ಲಿಯ ವರೆಗೆ ಸ್ವತಃ ಕಷ್ಟ ಪಟ್ಟು ದುಡಿದು ಆ ಹಣ ಉಪಯೋಗಿಸು ವುದು”, ಎಂದು ಹೇಳುತ್ತಾರೆ.
೪ ಆ. ತಮ್ಮ ಎಲ್ಲ ಕೆಲಸಗಳನ್ನು ತಾವೇ ಮಾಡುವುದು : ೮೦ ವರುಷ ವಯಸ್ಸಾಗಿದ್ದರು (ಈಗ ೮೨ ವರ್ಷ) ಅವರು ತಮ್ಮ ಕೆಲಸ ಗಳನ್ನು ತಾವೇ ಮಾಡುತ್ತಾರೆ. ಮೂರ್ತಿಗಾಗಿ ಶಿಲೆ ನೋಡಲು ಅಥವಾ ಯಾವುದೇ ಸಾಹಿತ್ಯ ತರುವುದಿದ್ದರೆ ಅವರು ಸ್ವತಃ ದ್ವಿಚಕ್ರ ವಾಹನದಿಂದ ೨೦೦ ರಿಂದ ೩೦೦ ಕಿಲೋಮೀಟರ್ ವರೆಗಿನ ಪ್ರವಾಸ ಮಾಡುತ್ತಾರೆ. ಅವರ ಮನಸ್ಸಿನಲ್ಲಿ ‘ನಮ್ಮಿಂದ ಇತರರಿಗೆ ತೊಂದರೆಯಾಗಬಾರದು’, ಇದೊಂದೇ ವಿಚಾರವಿರುತ್ತದೆ. – ಶ್ರೀ. ರಾಮಾನಂದ ಪರಬ ಮತ್ತು ಶ್ರೀ. ರಾಜು ಸುತಾರ
೫. ದಶಕಲೆಗಳ ಮೇಲೆ ಪ್ರಭುತ್ವ ಪಡೆದಿರುವುದು
‘ಅವರಿಗೆ ದಶಕಲೆಗಳು ಬರುತ್ತದೆ. ಇಲ್ಲಿಯವರೆಗೆ ನಾವು ಪಂಚಕಲೆಗಳು ಬರುವ ವ್ಯಕ್ತಿಗಳನ್ನು ಕೇಳಿದ್ದೇವೆ, ಆದರೆ ‘ಭಗವಂತನು ಇಂದು ನನಗೆ ದಶಕಲೆಗಳನ್ನು ನೀಡಿದ್ದಾನೆ’, ಎಂದು ಗುರುಜಿ ಹೇಳಿದರು. ಅವರಿಗೆ ಕಲ್ಲು, ಮಣ್ಣು, ಸಿಮೆಂಟ್, ಫೈಬರ್, ಮರ, ಬೆಳ್ಳಿ, ಹಿತ್ತಾಳೆ, ತಾಮ್ರ, ಅಲ್ಯೂಮಿನಿಯಂ ಮುಂತಾದ ವಸ್ತುಗಳಿಂದ ಮೂರ್ತಿ ತಯಾರಿಸಲು ಬರುತ್ತದೆ. ಹಳೆ ‘ಟೈಪ್ ರೈಟರ’ ದುರಸ್ತಿ ಮಾಡುವುದು, ಪೆಟ್ರೋಲ್ ಮತ್ತು ಡೀಸೆಲ್ ಇಂಜಿನ, ಚತುಶ್ಚಕ್ರ ವಾಹನ, ದ್ವಿಚಕ್ರದ ವಾಹನ ದುರಸ್ತಿ ಮಾಡು ವುದು, ಹೊಲಿಗೆ ಯಂತ್ರ ತಯಾರಿಸುವುದು ಮತ್ತು ಅದರ ದುರಸ್ತಿ ಮಾಡುವುದು; ಅಲ್ಯೂಮಿನಿಯಂ ಉಪಯೋಗಿಸಿ ಅದರಿಂದ ಈಳಿಗೆ ಮನೆ ತಯಾರಿಸುವ ಕಲೆ ಅವರಿಗೆ ಬರುತ್ತದೆ. ಇಷ್ಟೇ ಅಲ್ಲದೆ ಅವರು ಮೂರ್ತಿ ತಯಾರಿಸಲು ಬೇಕಾಗುವ ಯಂತ್ರಗಳನ್ನು ಅವರೇ ತಯಾರಿಸುತ್ತಾರೆ.’ – ಶ್ರೀ. ರಾಮಾನಂದ ಪರಬ
೬. ಪ್ರೇಮಭಾವ
ಅ. ನಾವು ಮೂರ್ತಿ ತಯಾರಿಸುವಾಗ ಅವರು ನಡುನಡುವೆ ನಮಗೆ ಚಹಾ ಬಿಸ್ಕೆಟ್ ನೀಡುತ್ತಿದ್ದರು.
ಆ. ನಾವು ನಮ್ಮ ಊಟದ ಡಬ್ಬಿ ತೆಗೆದುಕೊಂಡು ಹೋಗುತ್ತಿದ್ದೆವು. ಆಗ ಅವರು ನಮಗೆ ಅವರ ಮನೆಗೆ ಕರೆದುಕೊಂಡು ಹೋಗುತ್ತಿದ್ದರು, ಕುಳಿತುಕೊಳ್ಳಲು ಚಾಪೆ ಹಾಕುತ್ತಿದ್ದರು ಮತ್ತು ಕುಡಿಯಲು ನೀರು ತಂದು ಕೊಡುತ್ತಿದ್ದರು. ಅವರು ಬಹಳ ಪ್ರೀತಿಯಿಂದ ನೋಡಿಕೊಳ್ಳುವುದರಿಂದ ‘ಸತತವಾಗಿ ಅವರ ಜೊತೆಯಲ್ಲಿರಬೇಕು’, ಎಂದು ನಮಗೆ ಅನಿಸುತ್ತಿತ್ತು. ‘ನಾವು ಸಂತರ ಜೊತೆಯಲ್ಲಿದ್ದೇವೆ’ ಎಂದು ನಮಗೆ ಅನಿಸುತ್ತಿತ್ತು.
ಇ. ಅವರು ಪ್ರತಿದಿನ ಬೆಳಗ್ಗೆ ವಾಯುವಿಹಾರಕ್ಕೆ ಹೋಗುತ್ತಾರೆ. ಒಂದು ಬಾರಿ ಅವರು ಬರುವಾಗ ಅವರಿಗೆ ತಾಜಾ ಸೊಪ್ಪು ತರಕಾರಿ ಮಾರುವವರು ಭೇಟಿಯಾದರು. ಆಗ ಅವರು ನಮಗಾಗಿ ತರಕಾರಿ ತೆಗೆದುಕೊಂಡು ಬಂದರು.
೭. ಇತರರಿಗೆ ಸಹಾಯ ಮಾಡುವುದು
ಅವರ ಮನೆಯಿಂದ ನಾವಿರುವ ಸ್ಥಳವು ಸುಮಾರು ೧೪ ಕಿಲೋಮೀಟರ್ ದೂರದಲ್ಲಿತ್ತು. ನಮಗೆ ಓಡಾಡಲು ವಾಹನದ ಅಡಚಣೆಯಾಗುತ್ತಿತ್ತು. ಆಗ ಸ್ವತಃ ಗುರೂಜಿಯವರು, ‘ನೀವು ನನ್ನ ದ್ವಿಚಕ್ರ ವಾಹನ ಉಪಯೋಗಿಸಬಹುದು”, ಎಂದರು ಮತ್ತು ನಮಗೆ ಅವರ ದ್ವಿಚಕ್ರ ವಾಹನ ಉಪಯೋಗಿಸಲು ನೀಡಿದರು.’ – ಶ್ರೀ. ರಾಮಾನಂದ ಪರಬ ಮತ್ತು ಶ್ರೀ. ರಾಜು ಸುತಾರ
೮. ತಲ್ಲೀನರಾಗಿ ಸೇವೆ ಮಾಡುವುದು
‘ಗುರೂಜಿಯವರಿಗೆ ದೇಹಬುದ್ಧಿಯು ಅತ್ಯಲ್ಪವಾಗಿದೆ. ಅದು ನಮ್ಮ ಅನುಭವಕ್ಕೆ ಬಂದಿತು. ಅವರು ಒಂದು ಬಾರಿ ಸೇವೆಗಾಗಿ ಹೊರಗೆ ಹೋಗಿ ಬಂದರು. ಆಗ ನಾವು ಅವರಿಗೆ, “ನಾವೆಲ್ಲರೂ ಊಟ ಮಾಡೋಣ”, ಎಂದು ಹೇಳಿದೆವು. ಆಗ ಅವರು “ಹೌದು ಊಟ ಮಾಡಿ ಮೂರ್ತಿ ತಯಾರಿಸಲು ಆರಂಭಿಸೋಣ”, ಎಂದರು. ನಾವು ಊಟಕ್ಕೆ ಕುಳಿತೆವು ಮತ್ತು ಅವರು ಸೇವೆಗಾಗಿ ಧರಿಸಿರುವ ಉಡುಪು ಧರಿಸಿ ಹಾಗೆ ಮೂರ್ತಿ ತಯಾರಿಸುವ ಸೇವೆಯ ಸ್ಥಳಕ್ಕೆ ಹೋಗಿ ಕುಳಿತರು. ಸಾಯಂಕಾಲ ೫ ಗಂಟೆಗೆ ಅವರಿಗೆ ಹಸಿವಿನ ಅರಿವಾಯಿತು ಮತ್ತು ಅವರು ನನಗೆ, ‘ನಾನು ಊಟ ಮಾಡಲೇ ಇಲ್ಲ, ನಾನು ಊಟ ಮಾಡಿ ಬರುತ್ತೇನೆ”, ಎಂದು ಅವರು ಒಂದು ಸುತ್ತುತಿರುಗಿ ನಾವು ತಯಾರಿಸುತ್ತಿದ್ದ ಮೂರ್ತಿ ನೋಡಿದರು ಮತ್ತು ಪುನಃ ಮೂರ್ತಿ ಸೇವೆ ಆರಂಭಿಸಿದರು. ೫ ನಿಮಿಷಗಳ ನಂತರ ನಾನು ಅವರಿಗೆ, “ಗುರೂಜಿ, ನೀವು ಊಟ ಮಾಡಲು ಹೋಗಲಿಕ್ಕಿದ್ದರಲ್ಲ ?”, ಎಂದ ಕೇಳಿದಾಗ, “ಹೌದು, ನಾನು ಪುನಃ ಮರೆತು ಬಿಟ್ಟೆ”, ಎಂದರು. ಇದರಿಂದ ‘ಅವರು ಸೇವೆಯಲ್ಲಿ ಎಷ್ಟು ಏಕರೂಪ ರಾಗಿರುತ್ತಾರೆ ?’, ಇದು ಕಲಿಯಲು ಸಿಕ್ಕಿತು. ಅವರಿಗೆ ದೇಹದ ಅರಿವಿರುವುದಿಲ್ಲ, ಅವರು ಮೈಮರೆತು ತಲ್ಲೀನರಾಗಿ ಮತ್ತು ಹಸಿವೆ ಬಾಯಾರಿಕೆ ಮರೆತು ಸೇವೆಯ ಜೊತೆಗೆ ಏಕರೂಪವಾಗಿರುತ್ತಾರೆ.
೯. ಅಹಂ ಅಲ್ಪ ಇರುವುದು
ಇಲ್ಲಿಯವರೆಗೆ ಅವರು ಸಾವಿರಾರು ಮೂರ್ತಿಗಳನ್ನು ತಯಾರಿ ಸಿದ್ದರೂ ಅವರಲ್ಲಿ ಅಹಂಕಾರವಿಲ್ಲ. – ಶ್ರೀ. ರಾಮಾನಂದ ಪರಬ
೧೦. ಗುರುಗಳ ಆಜ್ಞಾಪಾಲನೆ ಮಾಡುವುದು
೧೦ ಅ. ಶ್ರೀ ಗುರುಗಳ ಹೇಳಿದ ಹುಡುಗಿಯ ಜೊತೆಗೆ ವಿವಾಹ ಮಾಡಿ ಕೊಳ್ಳುವುದು : ಗುರೂಜಿ ಹೇಳಿದರು, “ನನ್ನ ವಿವಾಹವನ್ನು ಶ್ರೀ ಗುರುಗಳೇ (ಶ್ರೀ ಬಾಬಾ ಮಹಾರಾಜರು) ಮಾಡಿಸಿದ್ದಾರೆ. ನನಗೆ ಅನೇಕ ಶ್ರೀಮಂತ ಕುಟುಂಬದವರು, ವಾಹನ-ಬಂಗಲೆ ಇರುವ ಹುಡುಗಿಯರು ವಿವಾಹಕ್ಕಾಗಿ ಕೇಳಿಕೊಂಡಿದ್ದರು, ಆದರೆ ನನ್ನ ಗುರುಗಳು, “ನಿನ್ನ ವಿವಾಹ ನಾನು ಮಾಡಿಸುವೆ”, ಎಂದಿದ್ದರು. ಆದ್ದರಿಂದ ನಾನು ಆ ಎಲ್ಲಾ ಹುಡುಗಿಯರನ್ನು ನಿರಾಕರಿಸಿದೆ. ಗುರುಗಳು ಯಾವ ಹುಡುಗಿಯ ಜೊತೆ ನನ್ನ ವಿವಾಹ ಮಾಡಿಸಿದರೋ ಆ ಹುಡುಗಿಯ ಪರಿಸ್ಥಿತಿ ಎಷ್ಟು ಬಡತನದ್ದಾಗಿತ್ತೆಂದರೆ ಆಕೆಗೆ ಉಡಲು ಒಳ್ಳೆಯ ಸೀರೆ ಸಹ ಇರಲಿಲ್ಲ. ನಾನೇ ಅವಳಿಗೆ ಸೀರೆ ಕೊಟ್ಟು ಆಕೆಗೆ ಅರ್ಧ ಗ್ರಾಮ್‌ನ ಮಂಗಳಸೂತ್ರ ಮಾಡಿಸಿ ಆಕೆಯ ಜೊತೆಗೆ ವಿವಾಹ ಮಾಡಿಕೊಂಡು ಮನೆ ತುಂಬಿಸಿಕೊಂಡೆ. ಆಕೆ ಸ್ವಭಾವದಿಂದ ತುಂಬಾ ಒಳ್ಳೆಯವಳು ಮತ್ತು ಶಾಂತವಾಗಿದ್ದಾಳೆ. ಆಕೆ ಎಂದು ನನ್ನ ಹತ್ತಿರ ಏನನ್ನು ಕೇಳಲಿಲ್ಲ. ಆಕೆಯಿಂದಾಗಿಯೇ ಇಂದು ನಾನು ಇಷ್ಟು ಮೂರ್ತಿಗಳನ್ನು ಮಾಡಲು ಸಾಧ್ಯವಾಯಿತು ಮತ್ತು ಇಲ್ಲಿಯವರೆಗೆ ತಲುಪಿದ್ದೇನೆ, ಎಂದರು. ಅವರು ನನಗೆ ಈ ಪ್ರಸಂಗ ಹೇಳುವಾಗ ಅವರ ಭಾವಜಾಗೃತಿಯಾಗಿ ಅವರ ಕಣ್ಣಿನಿಂದ ಸತತವಾಗಿ ಕಣ್ಣೀರು ಹರಿಯುತ್ತಿತ್ತು.
ನಂತರ ಅವರು ಹೇಳಿದರು, “ಹಿಂದೆ ಎಲ್ಲಾ ಸ್ತ್ರೀಯರು ೯ ಗಜದ ಸೀರೆ ಉಡುತ್ತಿದ್ದರು, ಮೈ ತುಂಬಾ ಬಟ್ಟೆ ತೊಡುತ್ತಿದ್ದರು. ಆದರೆ ಈಗ ಅದರ ವಿರುದ್ಧವಾಗಿದೆ. ಇಂದಿನ ಸ್ತ್ರೀಯರು ರಾಕ್ಷಸರಂತೆ ಉಡುಪು ಧರಿಸುತ್ತಾರೆ, ಎಂದರು.
೧೦ ಆ. ಶ್ರೀ ಗುರುಗಳು (ಶ್ರೀ ಬಾಬಾ ಮಹಾರಾಜರು) ಹೇಳಿದ್ದರಿಂದ ಗುರೂಜಿಯವರು ಸಿದ್ಧಿಗಳನ್ನು ಉಪಯೋಗಿಸಲಿಲ್ಲ : ಗುರೂಜಿಯವರಿಗೆ ಸಿದ್ಧಿ ಪ್ರಾಪ್ತವಾಗಿದೆ. ಅವರು ಯಾರಿಗಾದರೂ ಏನಾದರೂ ಹೇಳಿದರೆ ಅದು ನಿಜವಾಗುತ್ತದೆ. ಒಮ್ಮೆ ಒಬ್ಬ ವ್ಯಕ್ತಿಯ ವಿವಾಹ ಕೂಡಿ ಬರುತ್ತಿರಲಿಲ್ಲ. ಗುರೂಜಿಯವರು ಅವನಿಗೆ ಒಂದು ದೇವತೆಯ ಉಪಾಸನೆ ಮಾಡಲು ಹೇಳಿ, ‘ನಿನ್ನ ವಿವಾಹವಾಗುವುದು ಎಂದು ಹೇಳಿದರು. ಅದೇ ರೀತಿ ಆ ವ್ಯಕ್ತಿಯ ವಿವಾಹವಾಯಿತು. ಇದು ಗುರೂಜಿಯವರ ಶ್ರೀ ಗುರುಗಳಿಗೆ (ಶ್ರೀ ಬಾಬಾ ಮಹಾರಾಜಿ ಅವರಿಗೆ) ತಿಳಿಯಿತು. ಆಗ ಅವರು ಹೇಳಿದರು, “ಕೇವಲ ಮೂರ್ತಿ ತಯಾರಿಸಲು ನಿನ್ನ ಜನ್ಮ ಆಗಿದೆ. ನೀನು ಸಿದ್ಧಿಯನ್ನು ಉಪಯೋಗಿಸಬೇಡ, ಎಂದರು. ಅಂದಿನಿಂದ ಗುರೂಜಿ ಈ ವಿಷಯವಾಗಿ ಹೇಳುವುದನ್ನು ನಿಲ್ಲಿಸಿದರು.
೧೧. ಗುರೂಜಿಯವರ ಅಜ್ಜನವರಿಗೂ ಈ ಸಿದ್ಧಿ ಪ್ರಾಪ್ತವಾಗಿತ್ತು ಮತ್ತು ಅವರು ತಮ್ಮ ಮೃತ್ಯುವಿನ ಸಮಯ ನಿಖರವಾಗಿ ತಿಳಿದಿದ್ದರು
ಗುರೂಜಿಯವರ ಅಜ್ಜ ೧೦೫ ವರ್ಷ ಬದುಕಿದ್ದರು. ಅವರಿಗೆ ‘ತಮಗೆ ಮೃತ್ಯು ಯಾವಾಗ ಬರುವುದು ? ಇದು ಮೊದಲೇ ತಿಳಿದಿತ್ತು. ಅವರು ಮನೆಯವರಿಗೆ. “ಇಂತಹ ದಿನ ನಾನು ಹೋಗುವೆ, ಎಂದು ಮೊದಲೇ ತಿಳಿಸಿದರು. ಆ ದಿನ ಬಂದ ನಂತರ ಅವರು, “ಇಂದು ತುಳಸಿಪೂಜೆ ಇದೆ. ಪೂಜೆ ಮಾಡಿ ನೈವೇದ್ಯ ಮತ್ತು ಊಟವನ್ನು ಮಾಡಿಕೊಳ್ಳಿ, ಎಂದರು. ಅನಂತರ ಪೂಜೆ ಮಾಡಿ ಊಟವಾದ ನಂತರ ಅವರು ಮಧ್ಯಾಹ್ನ ಹೇಳಿದರು, “ಈಗ ನನಗೆ ಸ್ನಾನ ಮಾಡಿಸಿ, ನಾನು ಹೋಗಬೇಕಾಗುತ್ತದೆ, ನನ್ನ ದಾರಿ ಕಾಯುತ್ತಿದ್ದಾರೆ. ಅವರಿಗೆ ಸ್ನಾನ ಮಾಡಿಸಿ ಹಾಸಿಗೆಯ ಮೇಲೆ ಮಲಗಿಸಿದ ನಂತರ ಅವರು ಎಲ್ಲರಿಗೂ ತಿಳಿಸಿ ಹೇಳಿರುವ ಸಮಯಕ್ಕೆ ಪ್ರಾಣಬಿಟ್ಟರು. ಗುರೂಜಿ ಹೇಳಿದರು “ಅವರಿಗೆ ಕೂಡ ಸಿದ್ಧಿ ಪ್ರಾಪ್ತವಾಗಿತ್ತು.
೧೨. ಒಂದು ರಾತ್ರಿಯಲ್ಲಿ ಮೂರ್ತಿ ತಯಾರಿಸುವ ಕೌಶಲ್ಯ
೧೨ ಅ. ಕಾಣಕೊಣ (ಗೋವಾ) ಇಲ್ಲಿಯ ಶ್ರೀಕೃಷ್ಣ ದೇವಸ್ಥಾನ ದಲ್ಲಿ ಪ್ರತಿಷ್ಠಾಪಿಸಲು ರಾಜಸ್ಥಾನದಿಂದ ಶ್ರೀಕೃಷ್ಣನ ಅಮೃತಶಿಲೆಯ ಮೂರ್ತಿ ತಯಾರಿಸಿ ತರಿಸಲಾಗಿತ್ತು, ಅದು ‘ಜಲಾಧಿವಾಸದ ವಿಧಿಯ ಸಮಯದಲ್ಲಿ ಭಗ್ನವಾಯಿತು ಮತ್ತು ಗ್ರಾಮದೇವತೆಯು ‘ಕಾರವಾರದ ಶ್ರೀ. ನಂದಾ ಆಚಾರಿ ಒಂದೇ ದಿನದಲ್ಲಿ ಮೂರ್ತಿ ತಯಾರಿಸಿ ಕೊಡುತ್ತಾರೆ ಎಂದು ಅಪ್ಪಣೆ ನೀಡುವುದು : ಕಾಣಕೋಣ (ಗೋವಾ) ಇಲ್ಲಿ ಶ್ರೀಕೃಷ್ಣನ ಮಂದಿರವಿದೆ. ಆ ಮಂದಿರದಲ್ಲಿ ಶ್ರೀಕೃಷ್ಣನ ಮೂರ್ತಿ ಸ್ಥಾಪಿಸಲು ರಾಜಸ್ಥಾನದಿಂದ ಅಮೃತಶಿಲೆಯ ಶ್ರೀಕೃಷ್ಣನ ಒಂದು ಮೂರ್ತಿ ತಯಾರಿಸಿ ತರಿಸಲಾಗಿತ್ತು. ಅದರ ಪ್ರತಿಷ್ಠಾಪನೆಯ ವಿಧಿ ಮೂರುದಿನಗಳಿಗಿತ್ತು. ಮೊದಲ ದಿನ ‘ಜಲಾಧಿವಾಸ ಈ ವಿಧಿ ಇರುತ್ತದೆ. ಆ ವಿಧಿಯ ಸಮಯದಲ್ಲಿ ಮೂರ್ತಿ ನೀರಲ್ಲಿ ಇಡುವಾಗ ಅದು ಭಗ್ನವಾಯಿತು. ಆಗ ಗ್ರಾಮಸ್ಥರು ‘ನಾಡಿದ್ದು ಪ್ರತಿಷ್ಠಾಪನೆ ಇದೆ ಮತ್ತು ಇಂದಿನ ವಿಧಿಯ ಸಮಯದಲ್ಲಿ ಮೂರ್ತಿ ಭಗ್ನವಾಗಿದೆ, ಈಗ ಏನು ಮಾಡುವುದು ? ಎಂಬ ಪ್ರಶ್ನೆ ಕಾಡಿತು. ಗ್ರಾಮಸ್ಥರು ಕಾಣಕೊಣದ ಗ್ರಾಮದೇವತೆ ಶ್ರೀ ಮಲ್ಲಿಕಾರ್ಜುನನಿಗೆ ಅಪ್ಪಣೆ ಕೇಳಿದರು, ದೇವರು ಅಪ್ಪಣೆ ನೀಡಿ, ಕಾರವಾರದಲ್ಲಿ ಶ್ರೀ. ನಂದಾ ಆಚಾರಿ ಎಂಬ ಶಿಲ್ಪಕಾರರಿದ್ದಾರೆ. ಅವರೇ ನಿಮಗೆ ಒಂದು ದಿನದಲ್ಲಿ ಮೂರ್ತಿ ತಯಾರಿಸಿ ಕೊಡಬಹುದು, ಎಂದರು.
೧೨ ಆ. ಅಲ್ಲಿಯ ಬ್ರಾಹ್ಮಣರು ಮೂರ್ತಿ ಸಮಯಕ್ಕೆ ಮಾಡಿಕೊಟ್ಟರೆ ಗುರೂಜಿಯವರಿಗೆ ಹಾರ ಹಾಕಿ ಸತ್ಕರಿಸುವೆವು ಎಂದು ಹೇಳಿದರು ಮತ್ತು ಗುರೂಜಿಯವರು ಒಂದು ರಾತ್ರಿಯಲ್ಲಿ ಮತ್ತು ಸಮಯಕ್ಕೆ ಮೊದಲು ಅದೇ ರೀತಿಯ ಮೂರ್ತಿ ತಯಾರಿಸಿ ನೀಡಿದ ನಂತರ ಬ್ರಾಹ್ಮಣರು ಅವರಿಗೆ ಹಾರ ಹಾಕಿ ಸತ್ಕರಿಸಿದರು : ಗ್ರಾಮದೇವತೆಯಿಂದ ನೀಡಿರುವ ಅಪ್ಪಣೆ ಕೇಳಿ ಗ್ರಾಮಸ್ಥರು ಮಧ್ಯಾಹ್ನ ೪ ಗಂಟೆಗೆ ಗುರೂಜಿಯವರ ಬಳಿ ಹೋದರು. ಅವರು ಗುರೂಜಿಯವರಿಗೆ ನಡೆದ ಎಲ್ಲಾ ಪ್ರಸಂಗ ತಿಳಿಸಿದರು. “ನಾಳೆ ಬೆಳಿಗ್ಗೆ ೮ ಗಂಟೆಯ ವರೆಗೆ ನಮಗೆ ಸ್ಥಾಪನೆಗಾಗಿ ಮೂರ್ತಿ ಬೇಕಿದೆ, ಅದು ಸಿಗಬಹುದೇ ?, ಎಂದು ಗ್ರಾಮಸ್ಥರು ಕೇಳಿದಾಗ, ಗುರೂಜಿಯವರು “ಸಿಗಬಹುದು, ಎಂದು ಹೇಳಿದರು. ಎರಡು ಕಾಲು ಅಡಿ ಎತ್ತರದ ಶ್ರೀಕೃಷ್ಣನ ಮೂರ್ತಿ ತಯಾರಿಸಬೇಕಿತ್ತು. ಗುರೂಜಿಯವರು ವಜ್ರಶಿಲೆಯಲ್ಲಿ ಈ ಮೂರ್ತಿ ಸಂಜೆ ೫ ಗಂಟೆಗೆ ತಯಾರಿಸಲು ಆರಂಭಿಸಿದರು ಮತ್ತು ಬೆಳಗ್ಗೆ ೭ ಗಂಟೆಯ ವರೆಗೆ ಪೂರ್ಣವಾಯಿತು. ಕಾಣಕೋಣದ ಬ್ರಾಹ್ಮಣರು ಅವರಿಗೆ, “ಅವರು ಈ ಮೂರ್ತಿ ಏನಾದರೂ ಸಮಯದಲ್ಲಿ ನೀಡಿದರೆ, ನಾವು ಅವರಿಗೆ ಹೋಗಿ ಹಾರ ಹಾಕುವೆವು, ಎಂದರು, ಪ್ರತ್ಯಕ್ಷದಲ್ಲಿ ಬ್ರಾಹ್ಮಣರು ನೀಡಿರುವ ಸಮಯದ ಒಂದು ಗಂಟೆ ಮೊದಲೆ ಈ ಮೂರ್ತಿಯನ್ನು ಗುರೂಜಿ ಪೂರ್ಣಗೊಳಿಸಿ ನೀಡಿದರು. ಆಗ ಕಾಣಕೊಣದ ಬ್ರಾಹ್ಮಣರು ಕಾರವಾರಕ್ಕೆ ಗುರೂಜಿಯವರ ಮನೆಗೆ ಹೋಗಿ ಅವರಿಗೆ ಹಾರ ಹಾಕಿ ಸತ್ಕರಿಸಿದರು.
೧೩. ಅನಾಸಕ್ತ
೧೩ ಅ. ತಯಾರಿಸಿರುವ ಮೂರ್ತಿಯಿಂದ ಗುರೂಜಿಯವರಿಗೆ ಕೋಟ್ಯಂತರ ರೂಪಾಯಿ ದೊರೆತಿರಬಹುದು. ಆದರೂ ಹಣದ ಬಗ್ಗೆ ನೆನಪಾಗಬಾರದು, ಎಂಬುದಕ್ಕಾಗಿ ಬ್ಯಾಂಕಿನಲ್ಲಿ ಗುರೂಜಿಯವರ ಖಾತೆ ಇಲ್ಲ ಮತ್ತು ಮೂರ್ತಿ ತಯಾರಿಸಿದ ನಂತರ ಸಿಗುವ ಹಣ ಕೂಡಿಡದೆ ಸಮಾಜೋಪಯೋಗಿ ಕಾರ್ಯಕ್ಕಾಗಿ ಬಳಸುತ್ತಾರೆ : ಅವರು ತಯಾರಿಸಿರುವ ಮೂರ್ತಿಯಿಂದ ಅವರಿಗೆ ಸಿಕ್ಕಿರುವ ಹಣ ದಿಂದ ಇಷ್ಟು ವರ್ಷಗಳಲ್ಲಿ ಅವರು ತಮಗಾಗಿ ಎಂದಿಗೂ ಇಟ್ಟು ಕೊಂಡಿಲ್ಲ. ಅವರು ಇತರರ ಸಹಾಯ ಮಾಡುವುದಕ್ಕಾಗಿ ಅದನ್ನು ಬಳಸಿದ್ದಾರೆ. ಅವರು ೩೦ ಜನರಿಗೆ ವಿವಾಹ ಮಾಡಿಸಿದ್ದಾರೆ ಹಾಗೂ ಅನೇಕ ಬಡವರಿಗೆ ಆರ್ಥಿಕ ಸಹಾಯ ಮಾಡಿದ್ದಾರೆ. ಇಲ್ಲಿಯ ವರೆಗೆ ಅವರು ತಯಾರಿಸಿರುವ ಮೂರ್ತಿಗಳಿಂದ ಅವರಿಗೆ ಕೋಟಿಗಟ್ಟಲೆ ರೂಪಾಯಿ ಸಿಕ್ಕಿದೆ, ಆದರೂ ಬ್ಯಾಂಕಿನಲ್ಲಿ ಅವರ ಖಾತೆ ಇಲ್ಲ. ‘ಬ್ಯಾಂಕಿನಲ್ಲಿ ಖಾತೆ ಇದ್ದರೆ ನಮಗೆ ಹಣದ ನೆನಪಾಗುತ್ತದೆ, ನನಗೆ ಹಣದ ಬಗ್ಗೆ ಯಾವುದೇ ನೆನಪು ಬೇಡ, ಆದ್ದರಿಂದ ನನ್ನದು ಬ್ಯಾಂಕಿನಲ್ಲಿ ಖಾತೆ ಇಲ್ಲ, ಎಂದು ಅವರು ಹೇಳುತ್ತಾರೆ.
– ಶ್ರೀ. ರಾಮಾನಂದ ಪರಬ ಮತ್ತು ಶ್ರೀ. ರಾಜು ಸುತಾರ
೧೩ ಆ. ಅಕ್ಕಸಾಲಿಗನಿರುವ ಒಬ್ಬ ವ್ಯಕ್ತಿಯು ಒಂದು ದೇವಸ್ಥಾನದ ಬೆಳ್ಳಿಯ ಬಾಗಿಲು ಮತ್ತು ಚೌಕಟ್ಟು ಗುರೂಜಿ ಅವರಿಂದ ಮಾಡಿಸಿ ಕೊಂಡರು, ಗುರೂಜಿಯವರಿಗೆ ಬೆಳ್ಳಿಯ ಬೆಲೆ ಕಡಿಮೆ ಹೇಳಿ ಮೋಸ ಮಾಡಿದನು, ಅವರಿಗೆ ತಮಾಷೆ ಮಾಡುತ್ತಿದ್ದನು, ಆದರೆ ಗುರೂಜಿಯವರು ನಿಮಗೆ ಹಣ ಕೊಡಲು ಮನಸ್ಸಿಲ್ಲದಿದ್ದರೆ ಕೊಡ ಬೇಡಿ, ಆದರೆ ತಮಾಷೆ ಮಾಡಬೇಡಿ, ನಾನು ಆ ಹಣ ದೇವರಿಗೆ ಅರ್ಪಿಸಿದ್ದೇನೆ ಎಂದು ತಿಳಿಯುತ್ತೇನೆ ಎಂದು ಹೇಳಿದರು : ಗುರೂಜಿಯವರು ಒಂದು ದೇವಸ್ಥಾನಕ್ಕೆ ಬೆಳ್ಳಿಯ ಬಾಗಿಲು ಮತ್ತು ಚೌಕಟ್ಟು ತಯಾರಿಸಿದರು. ಅದಕ್ಕೆ ಎರಡುವರೆ ಕಿಲೋ ಬೆಳ್ಳಿ ಬೇಕಾಯಿತು. ಚೌಕಟ್ಟಿನ ಕೆಲಸ ನೀಡುವ ವ್ಯಕ್ತಿ ಅಕ್ಕಸಾಲಿಗನೇ ಆಗಿದ್ದನು. ಗುರೂಜಿಯವರು ಕೆಲಸ ಆರಂಭಿಸಿದರು. ಆಗ ಬೆಳ್ಳಿಯ ಬೆಲೆ ಕಿಲೋಗೆ ೪೮ ಸಾವಿರ ರೂಪಾಯಿಯಿತ್ತು. ಆ ವ್ಯಕ್ತಿ ಗುರೂಜಿಯವರಿಗೆ ‘ಬೆಳ್ಳಿಯನ್ನು ಪ್ರತಿ ಕಿಲೋ ೪೦ ಸಾವಿರ ರೂಪಾಯಿಗೆ ಖರೀದಿಸಿದ್ದೀರಲ್ಲ ? ಎಂದು ತಮಾಷೆ ಮಾಡಿದನು, ಪ್ರತ್ಯಕ್ಷದಲ್ಲಿ ಆ ವ್ಯಕ್ತಿ ಸ್ವತಃ ಅಕ್ಕಸಾಲಿಗನಾಗಿದ್ದರು ಗುರೂಜಿಯವರಿಗೆ ಮೋಸ ಮಾಡುತ್ತಿದ್ದನು. ಆ ವ್ಯಕ್ತಿ ಗುರೂಜಿಯವರಿಗೆ ೪೦ ಸಾವಿರ ರೂಪಾಯಿ ಮೋಸ ಮಾಡಿದನು, ಅಷ್ಟೇ ಅಲ್ಲದೆ ಆ ವ್ಯಕ್ತಿ ಸಂಚಾರವಾಣಿಯಲ್ಲಿ ಕೂಡ ಗುರೂಜಿಯವರಿಗೆ ತಮಾಷೆ ಮಾಡುತ್ತಿದ್ದನು. ಆಗ ಗುರೂಜಿಯವರು, “ನಿಮಗೆ ಹಣ ಕೊಡಲಿ ಕ್ಕಿಲ್ಲದಿದ್ದರೆ ಕೊಡಬೇಡಿ, ಆದರೆ ಈ ರೀತಿಯ ತಮಾಷೆ ಮಾಡ ಬೇಡಿ, ನಾನು ‘ಆ ಹಣ ದೇವರಿಗೆ ಅರ್ಪಣೆ ಮಾಡಿದ್ದೇನೆ ಎಂದು ತಿಳಿದುಕೊಳ್ಳುತ್ತೇನೆ, ಎಂದು ಅವರಿಗೆ ಸ್ಪಷ್ಟವಾಗಿ ಹೇಳಿದರು. – ಶ್ರೀ. ರಾಮಾನಂದ ಪರಬ
೧೪. ಸೂಕ್ಷ್ಮದಲ್ಲಿ ತಿಳಿಯುವ ಕ್ಷಮತೆ –
‘ಯಾವ ದೇವರ ಮೂರ್ತಿ ಯಾವ ಶಿಲೆಯಿಂದ ತಯಾರಿಸಬೇಕು ?, ಇದು ಗುರೂಜಿಯವರಿಗೆ ಆ ಶಿಲೆಯನ್ನು ಸ್ಪರ್ಶಿಸುತ್ತಲೇ ತಿಳಿಯುತ್ತದೆ ‘ಮೂರ್ತಿ ತಯಾರಿಸುವುದಕ್ಕಾಗಿ ವಿಶಿಷ್ಟ ರೀತಿಯ ಮೂರ್ತಿಗೆ ವಿಶಿಷ್ಟ ರೀತಿಯ ಶಿಲೆ ಬೇಕಾಗುತ್ತದೆ. ಉದಾ. ಕೃಷ್ಣಶಿಲೆ, ವಜ್ರಶಿಲೆ, ಸಾಲಿಗ್ರಾಮ, ಅಮೃತಶಿಲೆ ಮುಂತಾದವು. ‘ಯಾವ ದೇವತೆಯ ಮೂರ್ತಿ ಯಾವ ಶಿಲೆಯಿಂದ ತಯಾರಿಸಬೇಕು ?, ಇದು ಗುರೂಜಿಯವರಿಗೆ ಶಿಲೆಯನ್ನು ಸ್ಪರ್ಶಿಸುತ್ತಲೇ ತಿಳಿಯುತ್ತದೆ. ಆ ಕಲ್ಲನ್ನು ಸ್ಪರ್ಶಿಸಿದ ನಂತರ ಆ ಕಲ್ಲಿನಿಂದ ಅರಿವಿಗೆ ಬರುವ ಸ್ಪಂದನ ಗಳು ಯಾವ ಮೂರ್ತಿ ತಯಾರಿಸುವುದಿದೆ, ಆ ದೇವತೆಯ ಸ್ಪಂದನಕ್ಕೆ ಹೊಂದಬೇಕು. ಆ ಸ್ಪಂದನದ ಮೂಲಕ ಅವರಿಗೆ ‘ಆ ಮೂರ್ತಿಗಾಗಿ ಈ ಶಿಲೆ ಯೋಗ್ಯವಿದೆಯೇ ? ಇದರ ಬಗ್ಗೆ ಒಳಗಿನಿಂದ ಅರಿ ವಾಗುತ್ತದೆ. ಆ ಶಿಲೆಯು ಆ ದೇವತೆಯ ಮೂರ್ತಿಗಾಗಿ ಯೋಗ್ಯ ವಿಲ್ಲದಿದ್ದರೆ ಆ ಕಲ್ಲಿನಿಂದ ಅರಿವಿಗೆ ಬರುವ ಸ್ಪಂದನಗಳು ಅವರ ಮನಸ್ಸಿನಲ್ಲಿನ ಮೂರ್ತಿಯ ಸ್ಪಂದನಗಳ ಜೊತೆ ಹೊಂದಾಣಿಕೆ ಆಗುವುದಿಲ್ಲ. – ಶ್ರೀ. ರಾಮಾನಂದ ಪರಬ ಮತ್ತು ಶ್ರೀ. ರಾಜು ಸುತಾರ
೧೫. ಭಾವ
೧೫ ಅ. ‘ದೇವರ ನಾಮಜಪದ ಮಾತ್ರೆಯೇ ಔಷಧವಾಗಿದೆ, ಎಂಬ ಭಾವದಿಂದಾಗಿ ಅನೇಕ ನೋವುಗಳಿದ್ದರೂ ಮತ್ತು ವಯಸ್ಸಾಗಿದ್ದರೂ ಸತತವಾಗಿ ಉತ್ಸಾಹ ಮತ್ತು ಆನಂದದಿಂದ ಇರುತ್ತಾರೆ : ಗುರೂಜಿ ಅವರಿಗೆ ಮಧುಮೇಹ ಮತ್ತು ರಕ್ತದೊತ್ತಡ ಇದೆ. ಮೂರ್ತಿ ತಯಾರಿಸುವಾಗ ಕಲ್ಲಿನ ಪುಡಿ ಹಾರುತ್ತದೆ, ಅದರಿಂದ ಅವರ ಯಕೃತದಲ್ಲಿ (ಲಿವರ್ ನಲ್ಲಿ) ಒಂದು ಕಲ್ಲು ನಿರ್ಮಾಣವಾಗಿದೆ. ಈ ಎಲ್ಲಾ ನೋವಿಗೆ ಅವರು ಔಷಧ ತೆಗೆದುಕೊಳ್ಳುತ್ತಾರೆ. ಯಕೃತದಲ್ಲಾದ ಕಲ್ಲಿನ ಬಗ್ಗೆ ವೈದ್ಯರು ಅವರಿಗೆ ಶಸ್ತ್ರಚಿಕಿತ್ಸೆ ಮಾಡಿಸಿಕೊಳ್ಳಲು ಹೇಳಿದ್ದಾರೆ ಮತ್ತು ಅದರ ಖರ್ಚು ೮೦ ಸಾವಿರದಷ್ಟು ಬರುತ್ತದೆ. ಅರಿಗೆ ವಯಸ್ಸಾಗಿರುವುದರಿಂದ(೮೦ ವರ್ಷ) ಶಸ್ತ್ರಚಿಕಿತ್ಸೆಯಿಂದ ಹೆಚ್ಚು ಲಾಭವಾಗುವುದಿಲ್ಲ. ಅದಕ್ಕಾಗಿ ಅವರಿಗೆ ಆಧುನಿಕ ವೈದ್ಯರು ಔಷಧ ನೀಡುತ್ತಿದ್ದಾರೆ. ಆದರೆ ಅವರು ಯಾವುದೇ ಪಥ್ಯ ಪಾಲಿಸುವುದಿಲ್ಲ. ಅವರು ಹೇಳುವುದು, “ಭಗವಂತನ ನಾಮಜಪದ ಮಾತ್ರೆ ತೆಗೆದು ಕೊಳ್ಳುವಾಗ ಪಥ್ಯ ಪಾಲಿಸುವ ಅವಶ್ಯಕತೆ ಏನು ? ಅವರನ್ನು ನೋಡಿದರೆ ‘ಅವರಿಗೆ ನೋವಿದೆ ಅಥವಾ ನೋವಿನಿಂದ ಅವರು ಆಯಾಸಗೊಂಡಿದ್ದಾರೆ, ಹೀಗೆ ತಿಳಿಯುವುದಿಲ್ಲ ಹಾಗೂ ‘ಅವರಿಗೆ ೮೦ ವರ್ಷ ವಯಸ್ಸಾಗಿದೆ, ಎಂಬುದೂ ಸಹ ಅವರನ್ನು ನೋಡಿ ದರೆ ತಿಳಿಯುವುದಿಲ್ಲ.
೧೫ ಆ. ಗುರೂಜಿಯವರಲ್ಲಿನ ಭಾವದಿಂದ ದೇವಿ ಸ್ವತಃ ಅವರಿಗೆ ಮೂರ್ತಿ ತಯಾರಿಸುವ ಬಗ್ಗೆ ಮಾರ್ಗದರ್ಶನ ಮಾಡುತ್ತಾಳೆ
೧೫ ಆ ೧. ಭಟ್ಕಳದಲ್ಲಿನ ದೇವಸ್ಥಾನದಲ್ಲಿ ಸ್ಥಾಪನೆ ಮಾಡಲು ಶ್ರೀ ಪದ್ಮಾವತಿದೇವಿಯ ಮೂರ್ತಿ ತಯಾರಿಸುವಾಗ ದೇವಿ ಸ್ವತಃ ಗುರೂಜಿಯವರಿಗೆ ಮೂರ್ತಿ ತಯಾರಿಸುವ ಬಗ್ಗೆ ಮಾರ್ಗದರ್ಶನ ಮಾಡುತ್ತಿದ್ದಳು, ಅದೇ ರೀತಿ ಎಲ್ಲಾ ಆಚರಣೆ ಪಾಲಿಸಿ ದೇವಿಯ ಮೂರ್ತಿ ತಯಾರಿಸಲು ೧೫ ವರ್ಷ ಬೇಕಾಯಿತು. ಈ ಮೂರ್ತಿ ಬಹಳ ಜಾಗೃತವಾಗಿದೆ : ಭಟ್ಕಳದಲ್ಲಿ ಶ್ರೀ ಪದ್ಮಾವತಿದೇವಿಯ ದೇವಸ್ಥಾನವಿದೆ. ಆ ಮಂದಿರದಲ್ಲಿ ಮೂರ್ತಿ ಸ್ಥಾಪನೆಗಾಗಿ ಶ್ರೀ ಪದ್ಮಾವತಿ ದೇವಿಯ ಮೂರ್ತಿ ತಯಾರಿಸಲು ಗುರೂಜಿಯವರು ತಮ್ಮ ೨೫ ನೇ ವಯಸ್ಸಿನಲ್ಲಿ ಪ್ರಾರಂಭಿಸಿದರು. ಅವರು ವಜ್ರಶಿಲೆಯಲ್ಲಿ ಶ್ರೀ ಪದ್ಮಾವತಿ ದೇವಿಯ ೭ ಅಡಿ ಎತ್ತರದ ಮೂರ್ತಿ ತಯಾರಿಸಲು ಪ್ರಾರಂಭಿಸಿದರು. ಪ್ರಾರಂಭದಲ್ಲಿ ಅವರು ಆ ವಜ್ರಶಿಲೆ ಯಿಂದ ಮೂರ್ತಿ ತಯಾರಿಸುವಾಗ ಧ್ವನಿ ಕೇಳಿಸುತ್ತಿತ್ತು. ‘ಆ ಮೂರ್ತಿ ನನ್ನ ಜೊತೆ ಮಾತನಾಡುತ್ತಿದೆ, ಎಂದು ಅವರ ಗಮನಕ್ಕೆ ಬಂದಿತು. ಆ ಮೂರ್ತಿಯೇ ಅವರಿಗೆ ಮೂರ್ತಿ ತಯಾರಿಸುವ ಬಗ್ಗೆ ಮಾರ್ಗದರ್ಶನ ಮಾಡುತ್ತಿತ್ತು ಮತ್ತು ದೇವಿಯೇ ಅವರಿಂದ ಮೂರ್ತಿ ತಯಾರಿಸಿಕೊಂಡಳು. ಆ ದೇವಿ ಅವರಿಗೆ ಹೇಳಿದಳು, ‘ದಿನಕ್ಕೆ ಒಂದು ಗಂಟೆ ಮಾತ್ರ ಮೂರ್ತಿ ತಯಾರಿಸಬೇಕು, ಈ ರೀತಿಯ ಎಲ್ಲಾ ನಿಯಮಗಳ ಪಾಲಿಸಿ ಆ ಮೂರ್ತಿ ತಯಾರಿಸಲು ಅವರಿಗೆ ೧೫ ವರ್ಷ ಬೇಕಾಯಿತು. ಗುರೂಜಿ ಇದರ ಬಗ್ಗೆ ಹೇಳುತ್ತಾ, “ಆ ಮೂರ್ತಿ ಬಹಳ ಜಾಗೃತವಾಗಿದೆ. ಆಕೆಯ ತಲೆಯ ಮೇಲೆ ನಾಗನ ಹೆಡೆಯಿದೆ. ಅದರ ಮೇಲೆ ಅಲ್ಲಿಯ ಅರ್ಚಕರು ಅಡಿಕೆ ಇಡುತ್ತಾರೆ. ಯಾರಾದರೂ ಭಕ್ತರು ಅವರ ಮನಸ್ಸಿನ ಏನಾದರೂ ಇಚ್ಛೆಯನ್ನು ಆಕೆಯ ಮುಂದೆ ತೆಗೆದುಕೊಂಡು ಬಂದರೆ ಮತ್ತು ಆ ಇಚ್ಛೆ ಪೂರ್ಣವಾಗುತ್ತಿದ್ದರೆ ಆಗ ಆ ಅಡಿಕೆ ಆ ಭಕ್ತನ ಕೈಯಲ್ಲಿ ಬೀಳುತ್ತದೆ, ಎಂದರು.
೧೫ ಆ ೨. ಶ್ರೀ ಪದ್ಮಾವತಿ ದೇವಿಯ ಮೂರ್ತಿ ಭಟ್ಕಳದಲ್ಲಿ ಪ್ರತಿಷ್ಠಾಪನೆಗಾಗಿ ಕೊಂಡೊಯ್ಯುವಾಗ ೪೦ ಜನರು ಎತ್ತಿದರೂ ಆ ಮೂರ್ತಿ ಜಾಗದಿಂದ ಕದಲಲಿಲ್ಲ ಮತ್ತು ಸಾಧುಸಂತರು ಮೂರ್ತಿಯ ಸ್ಥಳಕ್ಕೆ ಬಂದು ಮಂತ್ರ ಸಾಮರ್ಥ್ಯದಿಂದ ಅಗ್ನಿ ಪ್ರಜ್ವಲಿಸಿ ಯಜ್ಞ-ಯಾಗ ಮಾಡಿದ ನಂತರ ೧೫ ಜನರು ಆ ಮೂರ್ತಿ ಎತ್ತಿ ಭಟ್ಕಳಕ್ಕೆ ಕೊಂಡೊಯ್ದರು : ‘ಗುರೂಜಿಯವರು ಕಾರವಾರದ ತಮ್ಮ ಮನೆಯಲ್ಲಿ ಶ್ರೀ ಪದ್ಮಾವತಿ ದೇವಿಯ ಮೂರ್ತಿ ತಯಾರಿಸಿದರು. ಅದರ ನಂತರ ಆ ಮೂರ್ತಿಯನ್ನು ಭಟ್ಕಳಕ್ಕೆ ಪ್ರತಿಷ್ಠಾಪನೆಗಾಗಿ ಕೊಂಡೊಯ್ಯಲು ಎತ್ತಲು ಪ್ರಯತ್ನಿಸಿದಾಗ ಅದು ಜಾಗದಿಂದ ಕದಲಲಿಲ್ಲ. ಭಟ್ಕಳದಿಂದ ೪೦ ಜನರು ಮೂರ್ತಿ ಎತ್ತುವುದಕ್ಕಾಗಿ ಬಂದಿದ್ದರು. ಆದರೂ ಮೂರ್ತಿ ಜಾಗದಿಂದ ಕದಲಲಿಲ್ಲ. ಕೊನೆಗೆ ಸಾಧು-ಸಂತರು ಮೂರ್ತಿಯ ಸ್ಥಳಕ್ಕೆ ಬಂದು ಮಂತ್ರ ಸಾಮರ್ಥ್ಯ ದಿಂದ ಅಗ್ನಿ ಪ್ರಜ್ವಲಿಸಿದರು ಮತ್ತು ಯಜ್ಞ-ಯಾಗ ಮಾಡಿದರು. ಅದರ ನಂತರ ೧೫ ಜನರು ಆ ಮೂರ್ತಿ ಎತ್ತಿ ಭಟ್ಕಳಕ್ಕೆ ತೆಗೆದುಕೊಂಡು ಹೋದರು.
– ಶ್ರೀ. ರಾಮಾನಂದ ಪರಬ (ಆಧ್ಯಾತ್ಮಿಕ ಮಟ್ಟ ಶೇ. ೬೮) ಮತ್ತು ಶ್ರೀ. ರಾಜು ಸುತಾರ, ಸನಾತನ ಆಶ್ರಮ, ರಾಮನಾಥಿ, ಗೋವಾ (೧.೨.೨೦೨೦)