
‘ಹಿಂದೂ ಮಹಾಸಭಾ’ ಇದು ಭಾರತದ ಅತ್ಯಂತ ಹಳೆಯ ರಾಜಕೀಯ ಪಕ್ಷವಾಗಿದೆ. ನಮ್ಮ ಪಕ್ಷ ಮೊದಲಿನಿಂದಲೂ ಘರವಾಪಸಾತಿಗಾಗಿ ಪ್ರಯತ್ನಿಸುತ್ತಿದೆ. ಮಹಾಸಭೆಯ ಮುಖಂಡರಾದ ಭಾಯಿ ಪರಮಾನಂದ ಮತ್ತು ಸ್ವಾಮಿ ಶ್ರದ್ಧಾನಂದರು ಘರವಾಪಸಾತಿಯ (ಮರಳಿ ಮನೆಗೆ) ಕಾರ್ಯವನ್ನು ಭರದಿಂದ ಆರಂಭಿಸಿದ್ದರು. ಅದಕ್ಕಾಗಿಯೇ ಸ್ವಾಮಿ ಶ್ರದ್ಧಾನಂದರನ್ನು ಹತ್ಯೆ ಮಾಡಲಾಯಿತು. ಇಂದಿಗೂ ಜಿಲ್ಲೆಜಿಲ್ಲೆಗಳಲ್ಲಿರುವ ಯಾರಾದರೂ ಘರವಾಪಸಾತಿಗೆ ಬಯಸಿದರೆ, ನಮ್ಮ ಕಾರ್ಯಕರ್ತರು ಆ ಬಗ್ಗೆ ಮಹಾಸಭೆಯ ಕೇಂದ್ರ ಕಚೇರಿಗೆ ತಿಳಿಸುತ್ತಾರೆ. ಅನಂತರ ಘರವಾಪಸಾತಿಗೆ(ಮರಳಿ ಮನೆಗೆ) ಎಲ್ಲ ವ್ಯವಸ್ಥೆಯನ್ನೂ ಮಾಡುತ್ತೇವೆ. ಜಾತಿ ಪದ್ಧತಿಯನ್ನು ತೊಲಗಿಸಿ ಹಿಂದೂ ವ್ಯವಸ್ಥೆಯನ್ನು ನಿರ್ಮಿಸುವ ಮೂಲಕ ಬಲಿಷ್ಠ ಹಿಂದೂ ರಾಷ್ಟ್ರದ ಸ್ಥಾಪನೆಗೆ ಶ್ರಮಿಸಬೇಕು. ನಮ್ಮ ಮಹಾಪುರುಷರ ನನಸಾಗದ ಕನಸುಗಳನ್ನು ಈಡೇರಿಸಬೇಕು. ಇರಾನ್, ಇರಾಕ್, ಅಫ್ಘಾನಿಸ್ತಾನ, ಪಾಕಿಸ್ತಾನ, ನೇಪಾಳ, ಭೂತಾನ್, ಬಾಂಗ್ಲಾದೇಶ ಮತ್ತು ಮ್ಯಾನ್ಮಾರ್ ಅನ್ನು ಒಗ್ಗೂಡಿಸಿ ಮುಂದೆ ಅಖಂಡ ಹಿಂದೂ ರಾಷ್ಟ್ರವನ್ನು ಮಾಡಬೇಕಾಗಿದೆ. ಪುರಾತನ ಭಾರತದ ವೈಭವವನ್ನು ಮರಳಿ ಪಡೆಯಲು ನಾವು ಬಯಸುತ್ತೇವೆ ಎಂದು ಅಖಿಲ ಭಾರತ ಹಿಂದೂ ಮಹಾಸಭಾದ ರಾಷ್ಟ್ರೀಯ ಅಧ್ಯಕ್ಷ ಮುನ್ನಾಕುಮಾರ್ ಶರ್ಮಾ ಅವರು ‘ಘರವಾಪಸಾತಿ ಕಾರ್ಯದಲ್ಲಿ ಹಿಂದೂ ಮಹಾಸಭಾದ ಕೊಡುಗೆ’ ಈ ವಿಷಯದ ಕುರಿತು ಮಾತನಾಡುತ್ತಾ ಹೇಳಿದರು.
ಹಿಂದೂ ಜನಜಾಗತಿ ಸಮಿತಿ ಮತ್ತು ಸನಾತನ ಸಂಸ್ಥೆಗಳು ಭಾರತದಲ್ಲಿ ’ಹಿಂದೂ ರಾಷ್ಟ್ರ ಸ್ಥಾಪನೆ’ ಕಾರ್ಯದಲ್ಲಿ ಪ್ರಮುಖ ಸಂಸ್ಥೆಗಳಾಗಿವೆ!ಶ್ರೀ. ಮುನ್ನಕುಮಾರ್ ಶರ್ಮಾ ಮಾತನಾಡಿ, ‘ಹಿಂದೂ ರಾಷ್ಟ್ರ ಸ್ಥಾಪನೆಗಾಗಿ ಹಿಂದೂ ಜನಜಾಗೃತಿ ಸಮಿತಿ ಮತ್ತು ಸನಾತನ ಸಂಸ್ಥೆ ಭಾರತದಲ್ಲಿ ಪ್ರಮುಖ ಸಂಸ್ಥೆಗಳಾಗಿವೆ. ಕೇವಲ ಸಂಖ್ಯಾತ್ಮಕ ಶಕ್ತಿ ಮಾತ್ರ ಸಾಕಾಗುವುದಿಲ್ಲ. ಹಿಂದೂ ಜನಜಾಗೃತಿ ಸಮಿತಿ ಹಾಗೂ ಸನಾತನ ಸಂಸ್ಥೆಯ ಕಾರ್ಯ ಶ್ಲಾಘನೀಯ. ನೀವು ನಮಗೆ ನೀಡುವ ಯಾವುದೇ ಸೇವೆಯನ್ನು ಹಿಂದೂ ಮಹಾಸಭೆಯು ಸ್ವೀಕರಿಸುತ್ತದೆ. ನಾವು ಪೂರ್ಣ ಹೃದಯದಿಂದ ನಿಮ್ಮೊಂದಿಗೆ ನಡೆಯುತ್ತೇವೆ. ಅಖಂಡ ಹಿಂದೂ ರಾಷ್ಟ್ರದ ಕೆಲಸದಲ್ಲಿ ನಾವು ಯಾವಾಗಲೂ ಒಗ್ಗಟ್ಟಾಗಿರೋಣ! |
ಮಹಿಳೆಯ ಎದೆಗೆ ಸ್ಪರ್ಶಿಸುವುದು ಅತ್ಯಾಚಾರದ ಪ್ರಯತ್ನವಲ್ಲ! – ಉಚ್ಚ ನ್ಯಾಯಾಲಯ : Attempt to Rape
ಅಮರಕಂಟಕ (ಮಧ್ಯಪ್ರದೇಶ)ಇಲ್ಲಿನ ನರ್ಮದಾ ಉಗಮ ದೇವಸ್ಥಾನದ ಚಿನ್ನ ಮತ್ತು ಬೆಳ್ಳಿ ನಾಪತ್ತೆ! : Amarkantak Temple Donation Scam
ಬೆಂಗಳೂರಿನಲ್ಲಿ ದೇಶದ ಮೊದಲ ‘ಎಐ’ ವಿಶ್ವವಿದ್ಯಾಲಯ ಆರಂಭ ! : Karnataka AI University
ಗುಜರಾತ್ ನ ಪ್ರಸಿದ್ಧ ಶಕ್ತಿಪೀಠ ಅಂಬಾಜಿ ದೇವಸ್ಥಾನದಲ್ಲೂ ನೋಟು ಎಣಿಕೆಯ ಸಮಯದಲ್ಲಿ ೨ ತಿಂಗಳ ಹಿಂದೆ ಕಳ್ಳತನ ನಡೆದಿರುವುದು ಬಹಿರಂಗ ! : Ambaji Temple Donation Theft
ಸಮಾಜವಾದಿ ಪಕ್ಷದ ಅಧಿಕಾರಾವಧಿಯಲ್ಲಿ ‘ವಕ್ಫ್ ಮಂಡಳಿ’ಯ ಶತಕೋಟಿ ರೂಪಾಯಿಗಳ ಹಗರಣ! – ಮೌಲಾನಾ ಶಹಾಬುದ್ದೀನ ರಿಜ್ವಿ ಬರೇಲವಿ
“ನಾನು ಛತ್ರಪತಿ ಶಿವಾಜಿ ಮಹಾರಾಜರ ಅನುಯಾಯಿಯಾಗಿದ್ದು ರಣರಂಗ ಬಿಟ್ಟು ಓಡಿಹೋಗುವವನಲ್ಲ!”