Video – ಹಿಂದೂಗಳನ್ನು ಸಂಘಟಿತ ಗೊಳಿಸುವುದು ಹಾಗೂ ಭಾರತೀಯ ಪರಂಪರೆ ಕಾಪಾಡುವುದಕ್ಕಾಗಿ ಭಾರತ ಸೇವಾಶ್ರಮ ಸಂಘ ಪ್ರಯತ್ನರತ ವಾಗಿದೆ ! ಸ್ವಾಮಿ ಸಂಯುಕ್ತಾನಂದ ಮಹಾರಾಜ, ಭಾರತ ಸೇವಾಶ್ರಮ ಸಂಘ, ಬಂಗಾಲ

ಸ್ವಾಮಿ ಸಂಯುಕ್ತಾನಂದ ಮಹಾರಾಜ

ಬಂಗಾಳದ ಕೊಲ್ಕತ್ತದಲ್ಲಿ ಕಟ್ಟಾ ದೇಶಪ್ರೇಮಿ ಸಂತ ಆಚಾರ್ಯ ಶ್ರೀಮತ್ ಸ್ವಾಮಿ ಪ್ರಣವಾನಂದ ಮಹಾರಾಜ ಇವರು ಭಾರತ ಸೇವಾಶ್ರಮ ಸಂಘವನ್ನು ೧೬೧೭ ನೇ ಇಸ್ವಿಯಲ್ಲಿ ಸ್ಥಾಪಿಸಿದರು . ನಮ್ಮ ಸಂಘ ನಿಸ್ವಾರ್ಥ ಕರ್ಮಯೋಗಿ ಮತ್ತು ಮಾನವೀಯತೆಗೆ ಸಹಾಯ ಮಾಡುವುದಕ್ಕಾಗಿ ಸಮರ್ಪಿತವಾಗಿದೆ. ಭಾರತ ಮತ್ತು ವಿದೇಶದಲ್ಲಿ ಈ ಸಂಘದ ಒಟ್ಟು ೪೬ ಕೇಂದ್ರಗಳು ಇವೆ. ದೇಶವಿದೇಶಗಳಲ್ಲಿ ನಮ್ಮ ಸಂಘದ ಕಾರ್ಯ ನಡೆಯುತ್ತಿದೆ. ಮಹಾರಾಷ್ಟ್ರದ ಲೋಕಮಾನ್ಯ ತಿಲಕರು ಹಿಂದೂಗಳನ್ನು ಒಗ್ಗೂಡಿಸಲು ಗಣೇಶೋತ್ಸವ ಪ್ರಾರಂಭಿಸಿದರು. ಅದೇ ರೀತಿ ನಮ್ಮ ಸಂಘಟನೆಯ ವತಿಯಿಂದ ನಾವು ಬಂಗಾಲ ದಲ್ಲಿ ಗಣೇಶೋತ್ಸವ ಪ್ರಾರಂಭಿಸಿ ಹಿಂದೂಗಳನ್ನು ಸಂಘಟಿತ ಮಾಡುವ ಕಾರ್ಯ ಮಾಡಿದ್ದೇವೆ. ಭಾರತ ಸೇವಾಶ್ರಮ ಸಂಘದ ಪರವಾಗಿ ರಾಮಾಯಣದ ಅನುವಾದ ಮಾಡಿ ಅದರ ಗ್ರಂಥಗಳನ್ನು ಸಿದ್ಧಪಡಿಸಲಾಗಿದೆ. ಚಿಕ್ಕಮಕ್ಕಳಿಗಾಗಿ ರಾಮಾಯಣದ ಎರಡು ಗ್ರಂಥಗಳನ್ನು ಸಿದ್ಧಪಡಿಸಲಾಗಿದೆ. ಬಂಗಾಲದ ಹಳ್ಳಿಹಳ್ಳಿಗಳಲ್ಲಿ ರಾಮಾಯಣದ ಪಾರಾಯಣ ಆರಂಭವಾಗಿದೆ. ಹಾಗೂ ರಾಮಾಯಣದ ಪಾರಾಯಣಕ್ಕಾಗಿ ಅಂತರಾಷ್ಟ್ರೀಯ ಪರಿಷತ್ತಿನ ಯೋಜನೆ ಮಾಡಲಾಗಿದೆ. ಸಮಾಜದಲ್ಲಿ ಯಾರಿಗೆ ಮಕ್ಕಳ ಆಧಾರವಿಲ್ಲ ಅಂತಹ ವಯೋವೃದ್ಧ. ಜೇಷ್ಠ ನಾಗರಿಕರಿಗಾಗಿ ವೃದ್ಧಾಶ್ರಮಗಳನ್ನು ಕಟ್ಟಲಾಗಿದೆ. ಭಾರತ ಸೇವಾಶ್ರಮ ಸಂಘದ ವತಿಯಿಂದ ನಮ್ಮ ಆಶ್ರಮದಲ್ಲಿ ಸೂರ್ಯ ನಮಸ್ಕಾರ, ಯೋಗಾಸನ ಮತ್ತು ಚಿಕ್ಕ ಮಕ್ಕಳ ಮೇಲೆ ಒಳ್ಳೆಯ ಸಂಸ್ಕಾರಕ್ಕಾಗಿ ಶಿಬಿರಗಳ ಆಯೋಜನೆ ಮಾಡಲಾಗುತ್ತಿದೆ. ಮಕ್ಕಳಿಗೆ ನಾನು ಆಶ್ರಮದ ವ್ಯವಸ್ಥಾಪನೆ ಕಲಿಸಿದ್ದೇನೆ. ಅವರು ಆಶ್ರಮದ ಕೆಲಸವನ್ನು ವ್ಯವಸ್ಥಿತವಾಗಿ ನಡೆಸುತ್ತಾರೆ. ಭಾರತ ಸೇವಾಶ್ರಮ ಸಂಘ ಬರೀ ಮಾತನಾಡುವುದಿಲ್ಲ ಆದರೆ ಪ್ರತ್ಯಕ್ಷ ಕೃತಿ ಮಾಡಿ ತೋರಿಸುತ್ತದೆ. ಆದ್ದರಿಂದ ಸಂಘಕ್ಕೆ ಕೇಂದ್ರ ಸರಕಾರದಿಂದ ರಾಷ್ಟ್ರೀಯ ಪುರಸ್ಕಾರ ದೊರೆತಿದೆ. ಹಿಂದೂಗಳನ್ನು ಒಗ್ಗೂಡಿಸುವುದು, ಸಂಸ್ಕೃತಿ ಮತ್ತು ಭಾಷೆಯ ಸಂವರ್ಧನೆ ಮಾಡುವುದು ಹಾಗೂ ಭಾರತೀಯ ಪರಂಪರೆ ಕಾಪಾಡುವುದಕ್ಕಾಗಿ ಸಂಘ ಪ್ರಯತ್ನಿಸುತ್ತಿದೆ. ಹಿಂದುತ್ವಕ್ಕಾಗಿ ನಮ್ಮ ಆಶ್ರಮ ಇರುವುದು. ಧರ್ಮ ಮತ್ತು ಸಂಸ್ಕೃತಿ ಇದರ ಸಂವರ್ಧನೆ ಮಾಡುವುದಕ್ಕಾಗಿ ಹೋರಾಟ ಮಾಡಬೇಕು. ಸಂತ ಆಚಾರ್ಯ ಶ್ರೀಮತ್ ಸ್ವಾಮಿ ಪ್ರಣವಾನಂದ ಮಹಾರಾಜ ಇವರ ಆಶೀರ್ವಾದದಿಂದ ಬಂಗಾಲದ ಹಿಂದೂಗಳು ಜಾಗೃತರಾಗುತ್ತಿದ್ದಾರೆ.

ಬಂಗಾಲದಲ್ಲಿ ಸರಕಾರವು ಹಿಂದೂಗಳ ಶೋಷಣೆ ಮಾಡುತ್ತಿದೆ; ಆದರೆ ಹಿಂದೂಗಳು ಸಂಘಟಿತರಾಗುತ್ತಿರುವುದರಿಂದ ಈ ಶೋಷಣೆ ಬೇಗನೆ ಕೊನೆಗಾಣುವುದು.