ಗೋವಾದ ರಾಮನಾಥಿಯಲ್ಲಿರುವ ಸನಾತನ ಆಶ್ರಮದಲ್ಲಿ ‘ವರದಿಗಾರ ಮತ್ತು ಸಂಪಾದಕ ತರಬೇತಿ ಶಿಬಿರ’ !
ರಾಮನಾಥಿ (ಗೋವಾ), ಅಕ್ಟೋಬರ್ ೧೨ (ವಾರ್ತೆ.) – ಪತ್ರಿಕೆಗಳಗಳ ಮೂಲಕ ಚಳುವಳಿಯನ್ನು ನಿರ್ಮಾಣ ಮಾಡುವ ಉದ್ದೇಶದಿಂದ ಸನಾತನ ಪ್ರಭಾತ ನಿಯತಕಾಲಿಕೆಗಳ ಸಂಸ್ಥಾಪಕ ಸಂಪಾದಕರಾದ ಸಚ್ಚಿದಾನಂದ ಪರಬ್ರಹ್ಮ ಡಾ. ಜಯಂತ ಅಠವಲೆಯವರು ‘ಸನಾತನ ಪ್ರಭಾತ’ವನ್ನು ಆರಂಭಿಸಿದ್ದಾರೆ. ಆದ್ದರಿಂದ ಪ್ರತಿಯೊಬ್ಬ ವರದಿಗಾರನು, ತಾನು ಮಾಡಿದ ವಾರ್ತೆಯಿಂದ ಚಳುವಳಿಯನ್ನು ಹೇಗೆ ಮಾಡಬಹುದು ? ಎಂಬ ದೃಷ್ಟಿಯಿಂದ ಪ್ರಯತ್ನಿಸಬೇಕು. ಇದರೊಂದಿಗೆ ಕೇವಲ ವಾರ್ತೆಗಾಗಿ ವಾರ್ತೆ ಮಾಡುವ ಬದಲು ವಾರ್ತೆಯ ಮಾಧ್ಯಮದಿಂದ ನಮ್ಮ ಸಾಧನೆ ಹೇಗೆ ಆಗಬಹುದು ?, ಎಂಬ ದೃಷ್ಟಿಯಿಂದ ಪ್ರಯತ್ನಿಸಬೇಕು. ಶಿಬಿರದಲ್ಲಿ ಕಲಿತೆವು ಅದನ್ನು ವರ್ಷವಿಡೀ ಕಾರ್ಯರೂಪಕ್ಕೆ ತಂದರೆ ಈ ಶಿಬಿರವು ಫಲಪ್ರದವಾಗಿದೆ ಎನ್ನಬಹುದು. ಏನೆಲ್ಲಾ ಕಲಿತೆವು ಅದು ಕಾರ್ಯರೂಪಕ್ಕೆ ತರುವುದೇ ಕೃತಜ್ಞತೆ ಎಂದು ಶೇ. ೬೮ ಆಧ್ಯಾತ್ಮಿಕ ಮಟ್ಟದ ಸನಾತನ ಪ್ರಭಾತದ ಸಮೂಹ ಸಂಪಾದಕ ಶ್ರೀ. ನಾಗೇಶ ಗಾಡೆಯವರು ಪ್ರತಿಪಾದಿಸಿದರು.
ಗೋವಾದ ರಾಮನಾಥಿಯಲ್ಲಿರುವ ಸನಾತನ ಸಂಸ್ಥೆಯ ಆಶ್ರಮದಲ್ಲಿ ಅಕ್ಟೋಬರ್ ೧೧ ರಿಂದ ೧೩ ರವರೆಗೆ ‘ವರದಿಗಾರ ಮತ್ತು ಸಂಪಾದಕ ತರಬೇತಿ ಶಿಬಿರ’ವನ್ನು ಆಯೋಜಿಸಲಾಗಿದೆ. ಈ ಶಿಬಿರದ ಉದ್ಘಾಟನಾ ಸಮಾರಂಭದಲ್ಲಿ ಶ್ರೀ. ನಾಗೇಶ ಗಾಡೆಯವರು ಮಾತನಾಡುತ್ತಿದ್ದರು. ಈ ಸಂದರ್ಭದಲ್ಲಿ ‘ಸನಾತನ ಪ್ರಭಾತ’ನ ಸಹಸಂಪಾದಕರಾದ ಶ್ರೀ. ಭೂಷಣ ಕೇರಕರ ಅವರೂ ಕೂಡ ಶಿಬಿರಾರ್ಥಿಗಳನ್ನು ಉದ್ದೇಶಿಸಿ ಮಾತನಾಡಿದರು. ಈ ಶಿಬಿರದಲ್ಲಿ ಮಹಾರಾಷ್ಟ್ರ, ಗೋವಾ ಮತ್ತು ಕರ್ನಾಟಕದ ಶಿಬಿರಾರ್ಥಿಗಳು ಭಾಗಿಯಾಗಿದ್ದಾರೆ. ವರ್ಷಾ ಕುಲಕರ್ಣಿಯವರು ಸೂತ್ರಸಂಚಾಲನೆ ಮಾಡಿದರು. ಈ ಶಿಬಿರದಲ್ಲಿ ವಾರ್ತೆಯನ್ನು ತಯಾರಿಸುವುದು, ವಾರ್ತೆಯಲ್ಲಿನ ಸುಧಾರಣೆ, ಶುದ್ಧ ಲೇಖನ ಅಭ್ಯಾಸ, ಸರಕಾರಿ ಕಛೇರಿಗಳ ಕಾರ್ಯನಿರ್ವಹಣೆ ಹೇಗೆ ನಡೆಯುತ್ತದೆ ?, ಇದರೊಂದಿಗೆ ಸಮಸ್ಯೆಯನ್ನಾಧರಿಸಿದ ವಾರ್ತೆಗಳನ್ನು ಹೇಗೆ ಪಡೆಯುವುದು ? ಸಮಾಜಾಭಿಮುಖಿ ಪತ್ರಿಕಾರಂಗಕ್ಕಾಗಿ ಮಾಡುವ ಪ್ರಯತ್ನ ಹೀಗೆ ವಿವಿಧ ವಿಷಯಗಳ ಕುರಿತು ಮಾರ್ಗದರ್ಶನ ನೀಡಲಾಗುವುದು.
ಈ ಸಂದರ್ಭದಲ್ಲಿ ಮಾರ್ಗದರ್ಶನ ನೀಡುತ್ತಾ ಶೇ. ೬೮ ಆಧ್ಯಾತ್ಮಿಕ ಮಟ್ಟವನ್ನು ಹೊಂದಿದ ಶ್ರೀ. ಭೂಷಣ ಕೇರಕರ ಅವರು, “ವರದಿಗಾರನಾಗಿ ಸೇವೆ ಮಾಡುವ ಮೂಲಕ ಸಮಷ್ಟಿ ಸಾಧನೆ ಮಾಡುವ ಅಮೂಲ್ಯ ಅವಕಾಶ ಸಿಕ್ಕಿದೆ. ಲೇಖಣಿಯು ಒಂದು ಆಯುಧವಾಗಿದೆ. ಲೇಖಣಿಯ ಹೊಡೆತವು ಆಯುಧಕ್ಕಿಂತ ಹೆಚ್ಚು ಪರಿಣಾಮಕಾರಿಯಾಗಿರುತ್ತದೆ. ‘ಕೇಸರಿ’ ಮತ್ತು ‘ಮರಾಠಾ’ ಪತ್ರಿಕೆಗಳ ಮೂಲಕ ಲೋಕಮಾನ್ಯ ತಿಲಕರ ಬರಹಗಳು ಜನಾಭಿಪ್ರಾಯವನ್ನು ಜಾಗೃತಗೊಳಿಸಿದವು ಹಾಗೂ ಬ್ರಿಟಿಷರ ಕಣ್ಣು ಕುಕ್ಕುವಂತೆ ಇತ್ತು. ಯಾವ ಕಾರ್ಯವನ್ನು ಸ್ವಾತಂತ್ರ್ಯ ಪೂರ್ವದಲ್ಲಿ ‘ಕೇಸರಿ’ ಮಾಡಿತ್ತೋ ಅದೇ ಕಾರ್ಯವನ್ನು ಇಂದು ‘ಸನಾತನ ಪ್ರಭಾತ’ವು ಮಾಡುತ್ತಿದೆ. ಹಿಂದೂ ರಾಷ್ಟ್ರ ಸ್ಥಾಪನೆಯ ವಿಶಾಲ ಗುರಿಯೊಂದಿಗೆ ‘ಸನಾತನ ಪ್ರಭಾತ’ವು ಕಾರ್ಯ ಮಾಡುತ್ತಿರುವುದರಿಂದ ವರದಿಗಾರರು ಈ ಗುರಿಯತ್ತ ಸಾಗಬೇಕು. ಈ ಶಿಬಿರದ ಸದುಪಯೋಗ ಪಡೆದು ಸಕ್ಷಮ ವರದಿಗಾರರಾಗಬೇಕು ಮತ್ತು ಧರ್ಮ ಜಾಗೃತಿಯ ಭಾರವನ್ನು ಹೊರಬೇಕು. ವರದಿಗಾರನ ಸೇವೆಯ ಪಯಣವು ಉತ್ತಮ ಪತ್ರಕರ್ತ, ಸಾಧಕ-ಪತ್ರಕರ್ತ, ಶಿಷ್ಯ-ಪತ್ರಕರ್ತ, ನಂತರ ಸಂತ-ಪತ್ರಕರ್ತ ಹೀಗೆ ಆಗಬೇಕು” ಎಂದು ಹೇಳಿದರು.