ಹತ್ತನೆ ಅಖಿಲ ಭಾರತೀಯ ಹಿಂದೂ ರಾಷ್ಟ್ರ ಅಧಿವೇಶನದಲ್ಲಿ ವೀಡಿಯೊ ಮೂಲಕ ಸಹಾಭಾಗ
ಕಾಶ್ಮೀರದಲ್ಲಿ ಜ್ಞಾನ ಇತ್ತು; ಆದರೆ ಶಕ್ತಿ ಇರಲ್ಲಿಲ್ಲ. ಆದ್ದರಿಂದ ಕಾಶ್ಮೀರದಿಂದ ಹಿಂದೂಗಳು ಪಲಾಯನ ಮಾಡಬೇಕಾಯಿತು. ಆದ್ದರಿಂದ ಹಿಂದೂಗಳಿಗೆ ಶಕ್ತಿ ಮತ್ತು ಭಕ್ತಿ ಎರಡರ ಆವಶ್ಯಕತೆ ಇದೆ. ಹಿಂದೂ ರಾಷ್ಟ್ರ ಸ್ಥಾಪನೆ, ಇದು ನಮ್ಮ ಗುರಿ ಆಗಿದೆ. ಒಗ್ಗಟಾಗಿ ಹಿಂದೂ ರಾಷ್ಟ್ರ ಸ್ಥಾಪನೆ ಮಾಡಬೇಕಾಗಿದೆ. ಅದಕ್ಕಾಗಿ ಕಷ್ಟ ಪಡಬೇಕಾಗಬಹುದು. ಸಮಯ ನೀಡಬೇಕು. ಸಮಾಜದಲ್ಲಿ ಭಯದ ವಾತಾವರಣ ಇದೆ. ಹಿಂದೂಗಳ ಮನಸ್ಸಿಂದ ಈ ಭಯ ಹೋಗಿಸಿ ಸಮಾಜದಲ್ಲಿ ವಿಶ್ವಾಸ ಮತ್ತು ಕ್ಷಾತ್ರತೇಜ ನಿರ್ಮಾಣ ಮಾಡಬೇಕಾಗುವುದು. ಕಾಶ್ಮೀರ, ಕೇರಳ, ದೆಹಲಿ, ಬಿಹಾರ, ಕರ್ನಾಟಕದಲ್ಲಿ ಏನು ನಡೆಯಿತು, ಇದು ಮುಂಬರುವ ಕಠಿಣ ಕಾಲದ ಮುನ್ಸೂಚನೆ ಆಗಿದೆ. ಇದನ್ನು ಎದುರಿಸಲು ಧ್ಯೇಯ ಅವಶ್ಯಕವಾಗಿದೆ. ಇದಕ್ಕಾಗಿ ಶಾರೀರಿಕ, ಮಾನಸಿಕ ಮತ್ತು ಬೌದ್ಧಿಕ ಶಕ್ತಿ ಹೆಚ್ಚಿಸಬೇಕು. ಅಖಿಲ ಭಾರತೀಯ ಹಿಂದೂರಾಷ್ಟ್ರ ಅಧಿವೇಶನದಿಂದ ಸಿಕ್ಕಿರುವ ಮಾರ್ಗದರ್ಶನಕ್ಕನುಸಾರ ನಾವು ಕಾರ್ಯ ಮಾಡಬೇಕಾಗಿದೆ, ಎಂದು ಕರ್ನಾಟಕದ ಶ್ರೀ ರಾಮ ಸೇನೆಯ ಸಂಸ್ಥಾಪಕ ಅಧ್ಯಕ್ಷ ಶ್ರೀ. ಪ್ರಮೋದ ಮುತಾಲಿಕ ಅವರು ಕರೆ ನೀಡಿದರು.
ಆಗಿನ ಗೋವಾ ಸರಕಾರವು ರಾಜ್ಯಕ್ಕೆ ಬರದಂತೆ ನಿಷೇಧಿಸಿರುವ ಕಾರಣ ಶ್ರೀ ರಾಮ ಸೇನೆ ಸಂಸ್ಥಾಪಕ ಅಧ್ಯಕ್ಷ ಶ್ರೀ. ಪ್ರಮೋದ ಮುತಾಲಿಕ ಅವರು ‘ವೀಡಿಯೊ’ ಮೂಲಕ ಹತ್ತನೇ ಅಖಿಲ ಭಾರತೀಯ ಹಿಂದೂರಾಷ್ಟ್ರ ಅಧಿವೇಶನದ ಪ್ರತಿನಿಧಿಗಳ ಜತೆ ಸಂವಾದ ನಡೆಸಿದರು.