ಭಯೋತ್ಪಾದಕರೊಂದಿಗೆ ನಂಟಿರುವ ಆರೋಪವಿರುವ ‘ಪಾಪ್ಯುಲರ್ ಫ್ರಂಟ್ ಆಫ್ ಇಂಡಿಯಾ’ದ ಹತ್ತನೇ ಅಖಿಲ ಭಾರತೀಯ ಹಿಂದೂ ರಾಷ್ಟ್ರ ಅಧಿವೇಶನದಿಂದ ಹೊಟ್ಟೆಶೂಲೆ !
ಮಡಗಾವ – ಫೊಂಡಾದ ರಾಮನಾಥಿಯಲ್ಲಿ ನಡೆದ ಹತ್ತನೇ ಅಖಿಲ ಭಾರತೀಯ ಹಿಂದೂ ರಾಷ್ಟ್ರ ಅಧಿವೇಶನದಲ್ಲಿ ಸಂವಿಧಾನದಿಂದ ‘ಪಂಥನಿರಪೇಕ್ಷ’ (ಸೆಕ್ಯುಲರ್) ಮತ್ತು ‘ಸಮಾಜವಾದಿ’ (ಸೋಶಿಯಲಿಸ್ಟ್) ಶಬ್ದಗಳನ್ನು ತೆರವುಗೊಳಿಸಲು ಒತ್ತಾಯಿಸಲಾಯಿತು, ಇದು ದೇಶದ್ರೋಹಿ ಮತ್ತು ಸಂವಿಧಾನವಿರೋಧಿ ಬೇಡಿಕೆಯಾಗಿದೆ. ಸರಕಾರವು ಅಧಿವೇಶನದ ಆಯೋಜಕರ ಮೇಲೆ ಕ್ರಮ ಕೈಗೊಳ್ಳಬೇಕು ಎಂದು ಭಯೋತ್ಪಾದನೆಯೊಂದಿಗೆ ನಂಟಿರುವ ಆರೋಪವಿರುವ ‘ಪಾಪ್ಯುಲರ್ ಫ್ರಂಟ್ ಆಫ್ ಇಂಡಿಯಾ’ (‘ಪಿ.ಎಫ್.ಐ.’) ಈ ಸಂಘಟನೆಯ ಪದಾಧಿಕಾರಿಗಳು ಮಡಗಾವದಲ್ಲಿ ಪತ್ರಕರ್ತರ ಜೊತೆ ಮಾತನಾಡುತ್ತಿದ್ದರು.
‘ಪಿ.ಎಫ್.ಐ.’ ಪದಾಧಿಕಾರಿಗಳು ಮಾತು ಮುಂದುವರಿಸಿ, “ಸಂವಿಧಾನದ ರಕ್ಷಣೆ ಮಾಡುವುದಕ್ಕಾಗಿ ‘ಪಿ.ಎಫ್.ಐ.’ ಕಾರ್ಯ ಮಾಡುತ್ತಿದೆ. ನಮ್ಮ ಸಂವಿಧಾನವು ‘ಪಂಥನಿರಪೇಕ್ಷ’ (ಸೆಕ್ಯುಲರ್) ಆಗಿದೆ ಮತ್ತು ಇಲ್ಲಿನ ಸಾಮಾಜಿಕ ಸೌಹಾರ್ದತೆ ಕಾಪಾಡುವುದು ಪ್ರತಿಯೊಬ್ಬರ ಜವಾಬ್ದಾರಿಯಾಗಿದೆ. ಫೊಂಡಾದ ರಾಮನಾಥಿಯಲ್ಲಿ ಕಳೆದ ೧೦ ವರ್ಷಗಳಿಂದ ಅಖಿಲ ಭಾರತೀಯ ಹಿಂದೂ ರಾಷ್ಟ್ರ ಅಧಿವೇಶನದ ಆಯೋಜನೆ ಮಾಡಲಾಗುತ್ತದೆ ಮತ್ತು ಪ್ರತಿ ಬಾರಿ ಬೇರೆಬೇರೆ ಬೇಡಿಕೆಗಳು ಈ ಸ್ಥಳಗಳಲ್ಲಿ ಮಾಡಲಾಗುತ್ತದೆ, ಇಂತಹ ಅಧಿವೇಶನಕ್ಕೆ ಸರಕಾರ ಏಕೆ ಪ್ರೋತ್ಸಾಹ ನೀಡುತ್ತದೆ? ಸರಕಾರವು ಇಲ್ಲಿಯ ಕಾನೂನು ಮತ್ತು ಸುವ್ಯವಸ್ಥೆ ಕಾಪಾಡಬೇಕು”, ಎಂದರು.
ಸಂಪಾದಕರ ನಿಲುವುಶ್ರೀರಾಮಜನ್ಮಭೂಮಿ ವಿಷಯವಾಗಿ ಸರ್ವೋಚ್ಚ ನ್ಯಾಯಾಲಯ ನೀಡಿರುವ ತೀರ್ಪು ಒಪ್ಪದೇ ಬಾಬರಿ ಮಸೀದಿ ಪುನಃ ಕಟ್ಟುವೆವು’, ಎಂದು ಡಿಸೆಂಬರ್ ೬ ಸಾರ್ವಜನಿಕವಾಗಿ ಪ್ರಸಾರ ಮಾಡುವ ‘ಪಿ.ಎಫ್.ಐ.’ ಹಿಂದೂಗಳಿಗೆ ಸಂವಿಧಾನವಿರೋಧಿ ಎನ್ನುವುದು ಹಾಸ್ಯಾಸ್ಪದ. ಗೋವಾದ ಮುಸಲ್ಮಾನರು ಈ ಸಂಘಟನೆಯಿಂದ ದೂರ ಉಳಿಯುವುದೇ ಒಳಿತು ! |