ಅಖಂಡ ಹಿಂದೂ ರಾಷ್ಟ್ರದ ಕಾರ್ಯವನ್ನು ಈಗ ಯಾರೂ ತಡೆಯಲು ಸಾಧ್ಯವಿಲ್ಲ !

ಹತ್ತನೇ ‘ಅಖಿಲ ಭಾರತೀಯ ಹಿಂದೂ ರಾಷ್ಟ್ರ ಅಧೀವೇಶನ’ದಲ್ಲಿ ಎಲ್ಲ ಹಿಂದುತ್ವನಿಷ್ಠರ ದೃಢ ವಿಶ್ವಾಸ !

ಫೋಂಡಾ (ಗೋವಾ) – ಪ್ರಸ್ತುತ ಕಾಲಪ್ರವಾಹವು ಹಿಂದೂಗಳಿಗೆ ಅನುಕೂಲಕರವಾಗಿದೆ. ೧೦ ವರ್ಷಗಳ ಹಿಂದೆ ಹಿಂದೂ ರಾಷ್ಟ್ರದ ಮೊದಲ ಅಧಿವೇಶನವನ್ನು ಆಯೋಜಿಸಿದಾಗ ಎಲ್ಲರೂ ‘ಹಿಂದೂ ರಾಷ್ಟ್ರ’ ಎಂಬ ಪದ ಪ್ರಯೋಗವನ್ನು ಸಂಶಯದಿಂದ ನೋಡುತ್ತಿದ್ದರು. ಇಂದು ೧೦ ವರ್ಷಗಳ ನಂತರ ‘ಹಿಂದೂ ರಾಷ್ಟ್ರ’ ಎಂಬ ಪದವು ಸಂಸತ್ತಿನಲ್ಲಾಗಲಿ ಅಥವಾ ಜನತಾ ಸಂಸತ್ತಿನಲ್ಲಾಗಲಿ ಪ್ರಚಲಿತವಾಗಿದೆ. ಪುರಿಯ ಶಂಕರಾಚಾರ್ಯರ ‘ಹಿಂದೂ ರಾಷ್ಟ್ರಸಂಘ’, ಕಾಶಿ ವಿದ್ವತ್ ಪರಿಷತ್ತಿನ ‘ಸಂಸ್ಕೃತಿ ಸಂಸದ್’ನಿಂದ ಹಿಡಿದು ದಕ್ಷಿಣ ಭಾರತದಲ್ಲಿ ‘ಸೇವ್ ಟೆಂಪಲ್ಸ್’ ಮತ್ತು ‘ರಿಕ್ಲೇಮ್ ಟೆಂಪಲ್ಸ್’ ಎಂಬ ನೂರಾರು ಚಳುವಳಿಗಳು ಹಿಂದುತ್ವದ ಮತ್ತು ಹಿಂದೂ ರಾಷ್ಟ್ರದ ದಿಕ್ಕಿನಲ್ಲಿ ಭಾರತದಾದ್ಯಂತ ಪ್ರಾರಂಭವಾಗಿವೆ. ಹಿಂದೂಗಳು ‘ಹಿಂದೂ ರಾಷ್ಟ್ರ’ದ ಪರಿಕಲ್ಪನೆಯನ್ನು ಒಪ್ಪಿಕೊಂಡಿದ್ದಾರೆ. ಆದ್ದರಿಂದ ‘ಹಿಂದೂ ರಾಷ್ಟ್ರ’ದ ವಿರುದ್ಧ ರಾಷ್ಟ್ರವಿರೋಧಿ, ಧರ್ಮವಿರೋಧಿ, ಸೆಕ್ಯುಲರವಾದಿ ಇತ್ಯಾದಿಗಳು ಸಕ್ರಿಯವಿದ್ದರೂ ಅವರನ್ನು ಎದುರಿಸಲು ಸಮಸ್ತ ಹಿಂದುತ್ವನಿಷ್ಠ ಸಂಘಟನೆಗಳು ಒಗ್ಗೂಡಿ ಪಾಂಡವರಂತೆ ‘ವಾಯಂ ಪಂಚಾಧಿಕಂ ಶತಮ್’ (‘ನಾವು ನೂರಾ ಐದು’) ಒಟ್ಟಿಗೆ ಬಂದು ಹೋರಾಡಲು ಸಿದ್ಧರಾಗಬೇಕು, ಎಂದು ಹತ್ತನೇ ‘ಅಖಿಲ ಭಾರತೀಯ ಹಿಂದೂ ರಾಷ್ಟ್ರ ಅಧಿವೇಶನ’ಕ್ಕೆ ಬಂದಿದ್ದ ದೇಶಾದ್ಯಂತದ ೧೭೭ ಸಂಘಟನೆಗಳ ಪ್ರತಿನಿಧಿಗಳು ಕರೆ ನೀಡಿರುವ ಬಗ್ಗೆ ಹಿಂದೂ ಜನಜಾಗೃತಿ ಸಮಿತಿಯ ಮಹಾರಾಷ್ಟ್ರ ಮತ್ತು ಛತ್ತೀಸಗಢ ರಾಜ್ಯ ಸಂಘಟಕ ಶ್ರೀ. ಸುನೀಲ ಘನವಟ ಇವರು ಪತ್ರಿಕಾಗೋಷ್ಠಿ ಮಾಹಿತಿ ನೀಡಿದರು. ಅವರು ಗೋವಾದ ಫೋಂಡಾದಲ್ಲಿ ಪತ್ರಿಕಾಗೋಷ್ಠಿಯಲ್ಲಿ ಮಾತನಾಡುತ್ತಿದ್ದರು. ಈ ವೇಳೆ ‘ಸಮರ್ಥ ಭಾರತ’ದ ಡಾ. ಉದಯ ದೇಶಮುಖ ಮತ್ತು ‘ಹಿಂದೂ ಜನಜಾಗೃತಿ ಸಮಿತಿ’ಯ ಗೋವಾ ರಾಜ್ಯ ಸಮನ್ವಯಕರಾದ ಶ್ರೀ. ಸತ್ಯವಿಜಯ ನಾಯಿಕ ಇವರು ಉಪಸ್ಥಿತರಿದ್ದರು.

ಹಿಂದೂ ರಾಷ್ಟ್ರಕ್ಕಾಗಿ ಕಾರ್ಯ ಮಾಡುವವರ ಹೆಸರನ್ನೂ ಇತಿಹಾಸದಲ್ಲಿ ಸುವರ್ಣಾಕ್ಷರಗಳಲ್ಲಿ ಬರೆಯಲಾಗುವುದು ! – ಟಿ. ರಾಜಾಸಿಂಹ

ಈ ಅಧಿವೇಶನದಲ್ಲಿ ಭಾಗವಹಿಸಿ ಮಾತನಾಡಿದ ‘ತೆಲಂಗಾಣಾದ ಭಾಜಪದ ಹಿಂದುತ್ವವಾದಿ ಶಾಸಕ ಶ್ರೀ. ಟಿ. ರಾಜಾಸಿಂಹ ಇವರು, ಸಂತರು ೨೦೨೫ ರ ತನಕ ಭಾರತ ಹಿಂದೂ ರಾಷ್ಟ್ರವಾಗಲಿದೆ ಎಂದು ಹೇಳಿದ್ದಾರೆ. ಹಿಂದೂ ರಾಷ್ಟ್ರ ಸ್ಥಾಪನೆಗೆ ಮುನ್ನ ಬರಲಿರುವ ಚಂಡಮಾರುತವನ್ನು ಎದುರಿಸಲು ಪ್ರತಿಯೊಬ್ಬ ಹಿಂದೂ ತನ್ನನ್ನು ತಾನು ಸಿದ್ಧಪಡಿಸಬೇಕಾಗಿದೆ. ಭಾರತದ ಸ್ವಾತಂತ್ರ್ಯಕ್ಕಾಗಿ ಹೋರಾಡಿದ ಭಗತಸಿಂಗ್, ರಾಜಗುರು ಮತ್ತು ಸುಖದೇವ ಅವರ ಹೆಸರನ್ನು ಸುವರ್ಣಾಕ್ಷರಗಳಲ್ಲಿ ಬರೆಯಲಾಗಿದೆ. ಹಾಗೆಯೇ ಹಿಂದೂ ರಾಷ್ಟ್ರಕ್ಕಾಗಿ ಸಮರ್ಪಿತರಾಗಿ ಕಾರ್ಯ ಮಾಡುತ್ತಿರುವವರ ಹೆಸರುಗಳು ಸಹ ಇತಿಹಾಸದಲ್ಲಿ ಸುವರ್ಣಾಕ್ಷರಗಳಲ್ಲಿ ಬರೆಯಲಾಗುವುದು ಎಂದು ಹೇಳಿದರು.

ಈ ವೇಳೆ ಸಮಿತಿಯ ಗೋವಾ ರಾಜ್ಯ ಸಮನ್ವಯಕರಾದ ಶ್ರೀ. ಸತ್ಯವಿಜಯ ನಾಯಿಕ ಅವರು ಮಾತನಾಡುತ್ತಾ, ಹಿಂದೂ ರಾಷ್ಟ್ರ-ಸ್ಥಾಪನೆ ಕುರಿತು ಸಮಾಜದಲ್ಲಿ ಜಾಗೃತಿ ಮೂಡಿಸುವ ನಿಟ್ಟಿನಲ್ಲಿ ಸಮಾನಸೂತ್ರ ಕಾರ್ಯಕ್ರಮದ ಅಂತರ್ಗತ ‘ಹಿಂದೂ ರಾಷ್ಟ್ರ ಜಾಗೃತಿ ಸಭೆ’, ‘ಹಲಾಲ್ ಜಿಹಾದ್ ಕುರಿತು ಜನಜಾಗೃತಿ ಸಭೆ’, ‘ಹಿಂದೂ ರಾಷ್ಟ್ರ ಜಾಗೃತಿ ಆಂದೋಲನ’, ‘ಹಿಂದೂ ರಾಷ್ಟ್ರ ಅಧಿವೇಶನ’ ಇತ್ಯಾದಿ ವಿವಿಧ ಉಪಕ್ರಮಗಳನ್ನು ಮುಂಬರುವ ವರ್ಷಗಳಲ್ಲಿ ಹಮ್ಮಿಕೊಳ್ಳಲಾಗುವುದು ಎಂದು ಅಧಿವೇಶನದಲ್ಲಿ ನಿರ್ಧರಿಸಲಾಯಿತು. ಇಂತಹ ಯೋಜನಾಬದ್ಧ, ನಿಸ್ವಾರ್ಥ ವೃತ್ತಿಯಿಂದ ಮಾಡಲಾದ ಸಂಘಟಿತ ಕಾರ್ಯದಿಂದಲೇ ಹಿಂದೂ ರಾಷ್ಟ್ರವು ಸ್ಥಾಪನೆಯಾಗುತ್ತದೆ ಮತ್ತು ಇದೇ ಕಾರ್ಯವು ದೇಶವನ್ನು ಕಲ್ಯಾಣಕಾರಿ ಭವಿಷ್ಯದತ್ತ ಕೊಂಡೊಯ್ಯುವುದು ಎಂದು ಹೇಳಿದರು.
ಅಮೆರಿಕಾ ಮತ್ತು ನೆದರ್‌ಲ್ಯಾಂಡ್‌ನಲ್ಲಿರುವ ಧರ್ಮಪ್ರೇಮಿ ಹಿಂದೂಗಳು ‘I support Hindu Rashtra Adhiveshan ಈ ರೀತಿಯ ಫಲಕಗಳನ್ನು ಹಿಡಿದು ಹಿಂದೂ ರಾಷ್ಟ್ರ ಅಧಿವೇಶನವನ್ನು ಬೆಂಬಲಿಸಿದ್ದಾರೆ. ಆದ್ದರಿಂದ ಈ ಅಧಿವೇಶನಕ್ಕೆ ಅಂತರರಾಷ್ಟ್ರೀಯ ಮಟ್ಟದಲ್ಲೂ ಬೆಂಬಲ ಸಿಗುತ್ತಿದೆ.

ಹತ್ತನೇ ‘ಅಖಿಲ ಭಾರತೀಯ ಹಿಂದೂ ರಾಷ್ಟ್ರ ಅಧಿವೇಶನ’ದಲ್ಲಿ ಅಂಗೀಕರಿಸಲಾದ ಠರಾವು !

* ಭಾರತದಲ್ಲಿರುವ ಬಹುಸಂಖ್ಯಾತ ಹಿಂದೂಗಳಿಗೆ ನ್ಯಾಯ ದೊರಕಿಸಲು ಸಂವಿಧಾನದಿಂದ ‘ಸೆಕ್ಯುಲರ್’ ಮತ್ತು ‘ಸೋಶಿಯಾಲಿಸ್ಟ್’ ಪದಗಳನ್ನು ಕೈಬಿಟ್ಟು ‘ಸ್ಪಿರಿಚ್ಯುವಲ್’ ಎಂಬ ಪದವನ್ನು ಸೇರಿಸಬೇಕು ಮತ್ತು ಭಾರತವನ್ನು ‘ಹಿಂದೂ ರಾಷ್ಟ್ರ’ ಎಂದು ಘೋಷಿಸಬೇಕು.

* ‘ನೇಪಾಳವನ್ನು ಹಿಂದೂ ರಾಷ್ಟ್ರವೆಂದು ಘೋಷಿಸಬೇಕು’, ಎಂಬ ನೇಪಾಳದಲ್ಲಿರುವ ಹಿಂದೂಗಳ ಬೇಡಿಕೆಯನ್ನು ಅಧಿವೇಶನವು ಸಂಪೂರ್ಣವಾಗಿ ಬೆಂಬಲಿಸುತ್ತದೆ.

* ಹಿಂದೂಗಳ ಮೂಲಭೂತ ಹಕ್ಕುಗಳನ್ನು ಉಲ್ಲಂಘಿಸುವ ‘ಪ್ಲೆಸಸ್ ಆಫ್ ವರ್ಶಿಪ್ ಆಕ್ಟ ೧೯೯೧’ ಈ ಕಾಯ್ದೆಯನ್ನು ತಕ್ಷಣವೇ ರದ್ದುಗೊಳಿಸಬೇಕು ಮತ್ತು ಕಾಶಿ, ಮಥುರಾ, ತಾಜಮಹಲ್, ಭೋಜಶಾಲಾ ಮುಂತಾದ ಮೊಘಲ್ ಆಕ್ರಮಣಕಾರರು ವಶಪಡಿಸಿಕೊಂಡ ಸಾವಿರಾರು ದೇವಾಲಯಗಳು ಮತ್ತು ಭೂಮಿಯನ್ನು ಹಿಂದೂಗಳಿಗೆ ಹಸ್ತಾಂತರಿಸಬೇಕು.

* ದೇಶಾದ್ಯಂತ ಸರಕಾರದ ಅಧೀನದಲ್ಲಿರುವ ಎಲ್ಲಾ ದೇವಾಲಯಗಳ ಸರಕಾರಿಕರಣವನ್ನು ರದ್ದುಪಡಿಸಿ ದೇವಾಲಯಗಳನ್ನು ಭಕ್ತರಿಗೆ ಹಸ್ತಾಂತರಿಸಬೇಕು.

* ‘ಗೋಹತ್ಯೆ ನಿಷೇಧ’ ಹಾಗೂ ‘ಮತಾಂತರ ನಿಷೇಧ’ಕ್ಕೆ ಸಂಬಂಧಿಸಿದಂತೆ ಕೇಂದ್ರ ಸರಕಾರವು ಇಡೀ ದೇಶದಲ್ಲಿ ಕಾನೂನು ಜಾರಿಗೆ ತರಬೇಕು. ಮತಾಂತರಕ್ಕಾಗಿ ಸಂವಿಧಾನದ ೨೫ ನೇ ಪರಿಚ್ಛೇದಕ್ಕೆ ತಿದ್ದುಪಡಿ ತಂದು ಅದರಲ್ಲಿರುವ ಧರ್ಮದ ‘ಪ್ರಚಾರ’ (Propagate) ಎಂಬ ಪದವನ್ನು ತೆಗೆದುಹಾಕಬೇಕು.

* ಭಾರತದಲ್ಲಿ ‘ಎಫ್.ಎಸ್.ಎಸ್.ಎ.ಐ.’(FSSAI) ಮತ್ತು ‘ಎಫ್.ಡಿ.ಎ.’(FDA)ಗಳಂತಹ ಸರಕಾರಿ ಸಂಸ್ಥೆಗಳಿರುವಾಗ, ಧಾರ್ಮಿಕ ಆಧಾರದಲ್ಲಿ ‘ಸಮನಾಂತರ ಅರ್ಥವ್ಯವಸ್ಥೆ’ಯನ್ನು ಸೃಷ್ಟಿಸುವ ‘ಹಲಾಲ್ ಸರ್ಟಿಫಿಕೇಶನ’ಅನ್ನು ತಕ್ಷಣವೇ ನಿಲ್ಲಿಸಬೇಕು.

* ಗೋವಾದಲ್ಲಿ ‘ಇನ್.ಕ್ವಿಝಿಶನ’ ನೆಪದಲ್ಲಿ ೨೫೦ ವರ್ಷಗಳ ಕಾಲ ಗೋಮಾಂತಕಿಯರ ಮೇಲೆ ಅಮಾನವೀಯ ಮತ್ತು ಕ್ರೂರವಾಗಿ ದೌರ್ಜನ್ಯ ನಡೆಸಿದ ಬಗ್ಗೆ ಕ್ರೈಸ್ತರ ಧರ್ಮಗುರು ಪೋಪ್ ಅವರು ಗೋವಾದ ಜನರಲ್ಲಿ ಬಹಿರಂಗವಾಗಿ ಕ್ಷಮೆ ಯಾಚಿಸಬೇಕು.

* ಕಾಶ್ಮೀರ ಕಣಿವೆಯಲ್ಲಿ, ನಿರಾಶ್ರಿತ ಕಾಶ್ಮೀರಿ ಹಿಂದೂಗಳಿಗೆ ಪುನರ್ವಸತಿ ಕಲ್ಪಿಸಲು ‘ಪನೂನ್ ಕಾಶ್ಮೀರ’ ಕೇಂದ್ರಾಡಳಿತ ಪ್ರದೇಶವನ್ನು ರಚಿಸಬೇಕು.

* ಪಾಕಿಸ್ತಾನ, ಬಾಂಗ್ಲಾದೇಶ ಮತ್ತು ಶ್ರೀಲಂಕಾದಲ್ಲಿ ಹಿಂದೂಗಳ ಮೇಲೆ ನಡೆಯುತ್ತಿರುವ ದೌರ್ಜನ್ಯಗಳ ಬಗ್ಗೆ ಅಂತಾರಾಷ್ಟ್ರೀಯ ಮಾನವ ಹಕ್ಕುಗಳ ಸಂಘಟನೆ ಮತ್ತು ಭಾರತ ಸರಕಾರದಿಂದ ತನಿಖೆ ನಡೆಸಿ ಅಲ್ಲಿನ ಅಲ್ಪಸಂಖ್ಯಾತ ಹಿಂದೂಗಳಿಗೆ ಭದ್ರತೆ ಒದಗಿಸಬೇಕು.

* ಭಾರತಕ್ಕೆ ನುಸುಳಿರುವ ರೋಹಿಂಗ್ಯಾ ಮತ್ತು ಬಾಂಗ್ಲಾದೇಶಿ ಮುಸಲ್ಮಾನರನ್ನು ಮರಳಿ ಕಳುಹಿಸಲು ಸರಕಾರ ಕಠಿಣ ಕಾನೂನು ರೂಪಿಸಬೇಕು.

* ಕಳೆದ ಕೆಲವು ವರ್ಷಗಳಲ್ಲಿ ಹಿಂದೂಯೇತರ ಜನಸಂಖ್ಯೆಯ ಸ್ಫೋಟವನ್ನು ಗಮನದಲ್ಲಿಟ್ಟುಕೊಂಡು, ಎಲ್ಲಾ ಧರ್ಮಗಳ ಜನಸಂಖ್ಯೆಯ ಸಮತೋಲನವನ್ನು ಕಾಯ್ದುಕೊಳ್ಳಲು ದೇಶದಲ್ಲಿ ತಕ್ಷಣವೇ ‘ಜನಸಂಖ್ಯಾ ನಿಯಂತ್ರಣ ಕಾಯ್ದೆ’ಯನ್ನು ಜಾರಿಗೆ ತರಬೇಕಾಗಿದೆ.

* ಮಾನವೀಯತೆಯ ದೃಷ್ಟಿಯಿಂದ ಮತ್ತು ಸಾಂವಿಧಾನಿಕ ಹಕ್ಕುಗಳನ್ನು ಪರಿಗಣಿಸಿ, ಗೋವಾ ಮುಖ್ಯಮಂತ್ರಿ ಶ್ರೀ. ಪ್ರಮೋದ ಸಾವಂತ ಅವರು ಕರ್ನಾಟಕದ ‘ಶ್ರೀರಾಮ ಸೇನೆ’ಯ ಅಧ್ಯಕ್ಷ ಶ್ರೀ. ಪ್ರಮೋದ ಮುತಾಲಿಕ ಇವರ ಮೇಲಿನ ಗೋವಾ ರಾಜ್ಯ ನಿಷೇಧವನ್ನು ಹಿಂಪಡೆಯಬೇಕು.