ಗೋವಾದಲ್ಲಿ ’ಪಿ.ಎಫ್ .ಐ.’ ದ ಕಾರ್ಯ ಮಾಡುವ ಸದಸ್ಯರ ಮೇಲೆ ಕಾನೂನು ರೀತಿಯ ಕ್ರಮ ಕೈಗೊಳ್ಳುವೆವು ! – ಅಭಿಷೇಕ ಧನಿಯಾ, ಪೊಲೀಸ ಅಧಿಕಾರಿ, ದಕ್ಷಿಣ ಗೋವಾ

ಮಡಗಾವ, ಸಪ್ಟೆಂಬರ್ ೨೮(ವಾರ್ತೆ) – ದೇಶದಲ್ಲಿರುವ ಪಾಪ್ಯುಲರ್ ಫ್ರಂಟ್ ಆಫ್ ಇಂಡಿಯಾದ ಸಂಘಟನೆಗಳ ಮೇಲೆ ನಿಷೇಧ ಹೇರಿದ ನಂತರ ಗೋವಾದಲ್ಲಿನ ಈ ಸಂಘಟನೆಯ ಮುಖಂಡ ಮತ್ತು ಕಾರ್ಯಕರ್ತರನ್ನು ಬಂಧಿಸುವ ಕಾರ್ಯಾಚರಣೆ ನಡೆಯುತ್ತಿದ್ದು ದಕ್ಷಿಣ ಗೋವಾದಲ್ಲಿ ಇಲ್ಲಿಯವರೆಗೆ ೨೯ ಜನರನ್ನು ಬಂಧಿಸಲಾಗಿರುವುದು ತಿಳಿದು ಬಂದಿದೆ. ಇದಕ್ಕೆ ಸಂಬಂಧಿಸಿದ ದಕ್ಷಿಣ ಗೋವಾದ ಪೊಲೀಸ್ ಅಧಿಕಾರಿ ಅಭಿಷೇಕ ಧನಿಯಾ ಇವರನ್ನು ಕೇಳಿದಾಗ, ನಾವು ಇಲ್ಲಿಯವರೆಗೆ ಯಾರನ್ನು ಕೂಡ ಬಂಧಿಸಿಲ್ಲ, ಆದರೆ ನಿರೋಧಕ ಕ್ರಮಗಳನ್ನು ಕೈಗೊಂಡಿದ್ದೇವೆ ಎಂದು ಅವರು ಹೇಳಿದರು.

ಈ ಸಂದರ್ಭದಲ್ಲಿ ಅವರು ಹೇಳಿದರು,

ಗೋವಾದಲ್ಲಿ ಯಾರಾದರೂ ಪಿ .ಎಫ್ .ಐ. (ಪಾಪ್ಯುಲರ್ ಫ್ರಂಟ್ ಆಫ್ ಇಂಡಿಯಾ) ಈ ಸಂಘಟನೆಯ ಕಾರ್ಯ ಮಾಡುತ್ತಿರುವುದು ಕಂಡುಬಂದಲ್ಲಿ ಈ ಸಂಘಟನೆಯಲ್ಲಿನ ಸದಸ್ಯರ ಮೇಲೆ ಕಠಿಣ ಕಾನೂನು ಕ್ರಮ ಕೈಗೊಳ್ಳಲಾಗುವುದು. ಈ ಸಂಘಟನೆಯ ಸದಸ್ಯರ ಮೇಲೆ ನಾವು ಗಮನ ಇಟ್ಟಿದ್ದೇವೆ. ದೊರೆತಿರುವ ಮಾಹಿತಿಯ ಪ್ರಕಾರ ಮಾಯಣಾ ಕುಡತರಿ ಪೊಲೀಸರು ರೂಮಡಮಳ ಇಲ್ಲಿಯ ವಿವಾದಾತ್ಮಕ ಪಂಚ ಉಮ್ರಾನ್ ಪಠಾಣ ಇವನನ್ನು ಸೆಪ್ಟೆಂಬರ್ ೨೮ ರಂದು ಮಧ್ಯಾಹ್ನ ವಶಕ್ಕೆ ಪಡೆದಿದ್ದಾರೆ. ’ಪಿ .ಎಫ್ .ಐ.’ ನ ಗೋವಾ ಮುಖ್ಯಸ್ಥ ಶೇಕ್ ಅಬ್ದುಲ್ಲಾ ರೌಫ ಇವನನ್ನು ಕೂಡ ಪೊಲೀಸರು ಪೋಲಿಸ್ ಠಾಣೆಗೆ ಕರೆಸಿದ್ದರು. ಫಾತೋಡಿ ಪ್ರದೇಶದಲ್ಲಿ ಕಾರ್ಯನಿರತ ’ಪಿ .ಎಫ್. ಐ.’ ನ ನಾಯಕ ಶೇಖ ಮುಜಫರ್ ಇವನನ್ನು ಕೂಡ ಮಡಗಾವ ಪೊಲೀಸರು ವಶಕ್ಕೆ ಪಡೆದಿದ್ದಾರೆ.