೬ ದೇಶಗಳ ಸಹಿತ ಭಾರತದ ೨೬ ರಾಜ್ಯಗಳಲ್ಲಿನ ಹಿಂದುತ್ವನಿಷ್ಠ ಸಹಭಾಗ !
ರಾಮನಾಥಿ – ಹಿಂದೂ ರಾಷ್ಟ್ರದ ಸ್ಥಾಪನೆಯು ಧರ್ಮಸಂಸ್ಥಾಪನೆಯ ಈಶ್ವರಿ ಕಾರ್ಯವಾಗಿದೆ. ಈಶ್ವರನು ಅವತರಿಸಿ ಕಾರ್ಯ ಮಾಡುತ್ತಾನೆ, ಆಗ ಭಕ್ತರು ಈ ಕಾರ್ಯದಲ್ಲಿ ತನ್ನ ಸಾಧನೆಯೆಂದು ಸಹಭಾಗಿಯಾಗುತ್ತಾರೆ. ಯಾರು ಕಾರ್ಯದಲ್ಲಿ ಸಹಭಾಗಿಯಾಗುತ್ತಾರೆ ಅವರ ಆಧ್ಯಾತ್ಮಿಕ ಪ್ರಗತಿಯಾಗುತ್ತದೆ ಹಾಗೂ ಮೃತ್ಯುವಿನ ನಂತರ ಪಾರಮಾರ್ಥಿಕ ಉನ್ನತಿಯು ಸುಲಭವಾಗಿ ಆಗುತ್ತದೆ. ಆದ್ದರಿಂದ ಹಿಂದೂ ರಾಷ್ಟ್ರ ಸ್ಥಾಪನೆಯತ್ತ ತಟಸ್ಥರಾಗಿ ನೋಡುವುದನ್ನು ಬಿಟ್ಟು ಮುಂದಾಳತ್ವ ವಹಿಸಿ ಕಾರ್ಯ ಮಾಡಬೇಕೆಂದು ಹಿಂದೂ ಜನಜಾಗೃತಿ ಸಮಿತಿಯ ರಾಷ್ಟ್ರೀಯ ಮಾರ್ಗದರ್ಶಕರಾದ ಸದ್ಗುರು ಡಾ. ಚಾರುದತ್ತ ಪಿಂಗಳೆ ಇವರು ಹತ್ತನೇ ‘ಅಖಿಲ ಭಾರತೀಯ ಹಿಂದೂ ರಾಷ್ಟ್ರ ಅಧಿವೇಶನ’ದ ಸಮಾರೋಪ ಮಾರ್ಗದರ್ಶನದಲ್ಲಿ ಕರೆ ನೀಡಿದರು. ಅಧಿವೇಶನದಲ್ಲಿ ಭಾರತದ ೨೬ ರಾಜ್ಯಗಳ ಸಹಿತ, ಅಮೇರಿಕಾ, ನೇಪಾಳ, ಹಾಂಕಾಂಗ್, ಫಿಜಿ, ಆಸ್ಟ್ರೇಲಿಯಾ ಮತ್ತು ಇಂಗ್ಲೆಂಡಿನಿಂದ ೧೧೭ ಹಿಂದುತ್ವನಿಷ್ಠ ಸಂಘಟನೆಗಳ ೪೦೦ ಕ್ಕೂ ಹೆಚ್ಚು ಹಿಂದುತ್ವನಿಷ್ಠರು ಸಹಭಾಗಿಯಾಗಿದ್ದರು.
ಜೂನ್ ೧೨ ರಿಂದ ನಡೆದ ಈ ಅಧಿವೇಶನದ ಜೂನ್ ೧೮ ರಂದು ಸಮಾರೋಪವಾಯಿತು. ಅಧಿವೇಶನ ಮುಗಿದ ನಂತರ ತಮ್ಮ ತಮ್ಮ ಪ್ರದೇಶಕ್ಕೆ ಹೋದ ಮೇಲೆ ಹಿಂದೂ ರಾಷ್ಟ್ರದ ಸ್ಥಾಪನೆಗಾಗಿ ಸಮರ್ಪಿತರಾಗಿ ಕಾರ್ಯ ಮಾಡುವುದಾಗಿ ಉಪಸ್ಥಿತ ಎಲ್ಲಾ ಹಿಂದುತ್ವನಿಷ್ಠರು ನಿರ್ಧರಿಸಿದರು.
ಸದ್ಗುರು (ಡಾ.) ಚಾರುದತ್ತ ಪಿಂಗಳೆಯವರು ಮಾತು ಮುಂದುವರೆಸುತ್ತಾ,
೧. ಪ್ರಾಂತ, ಭಾಷೆ, ಸಂಸ್ಥೆ, ಕಾರ್ಯಶೈಲಿ ಇತ್ಯಾದಿಗಳು ಭಿನ್ನವಾಗಿದ್ದರೂ ‘ಹಿಂದೂ ರಾಷ್ಟ್ರ’ವೇ ನಮ್ಮೆಲ್ಲರ ಗುರಿಯಾಗಿದೆ. ಪ್ರಸ್ತುತ ಅತ್ಯಲ್ಪ ಸಮಯದಲ್ಲಿ ೧೦೦ ಕೋಟಿ ಹಿಂದೂಗಳ ಸಂಘಟನೆ ಅಸಾಧ್ಯವಾಗಿದೆ. ಆದ್ದರಿಂದ ಹಿಂದೂ ರಾಷ್ಟ್ರದ ಸ್ಥಾಪನೆಗಾಗಿ ಸಮವಿಚಾರಿ ಹಿಂದೂ ಶಕ್ತಿಗಳನ್ನು ಒಗ್ಗೂಡಿಸುವುದು ಮುಖ್ಯವಾಗಿದೆ.
೨. ಹಿಂದೂ ರಾಷ್ಟ್ರದಿಂದ ಪ್ರೇರಿತರಾದ ಎಲ್ಲಾ ಹಿಂದೂಶಕ್ತಿ ಒಗ್ಗಟ್ಟಾದಾಗ ಹಿಂದೂ ರಾಷ್ಟ್ರ ಆಗುವುದು. ಅದಕ್ಕಾಗಿ ಯಾವುದೇ ಚುನಾವಣೆ ಅಥವಾ ಯಾರ ಬೌದ್ಧಿಕ ಪ್ರಶ್ನೆಗಳಿಗೆ ಉತ್ತರಿಸುವ ಅವಶ್ಯಕತೆ ಇರುವುದಿಲ್ಲ.
೩. ಕೇವಲ ಭಾರತ ಸಾಂವಿಧಾನಿಕವಾಗಿ ಹಿಂದೂ ರಾಷ್ಟ್ರ ಸ್ಥಾಪನೆಯಾದರೆ ಹಿಂದೂಗಳ ಗೌರವ ರಕ್ಷಣೆ ಆಗುವುದಿಲ್ಲ. ನಾವು ಧರ್ಮಾಧಾರಿತ ಹಿಂದೂ ರಾಷ್ಟ್ರದ ಬೀಜ ಬಿತ್ತಬೇಕಾಗುವುದು. ಧರ್ಮಾಧಾರಿತ ರಾಜ್ಯಭಾರ ಆಗುವುದಿಲ್ಲವೋ ಅಲ್ಲಿಯವರೆಗೆ ಗೋವು ಗಂಗೆ, ಸತಿ, ವೇದ, ಸತ್ಯವಾದಿ, ದಾನಶೂರ ಮುಂತಾದವರ ಸಂಪೂರ್ಣ ರಕ್ಷಣೆ ಆಗಲು ಸಾಧ್ಯವಿಲ್ಲ.
೪. ಕಾಲಪ್ರವಾಹ ಹಿಂದೂ ರಾಷ್ಟ್ರಕ್ಕಾಗಿ ಅನುಕೂಲವಾಗುತ್ತಿದೆ, ಎಂಬುದನ್ನು ಗಮನದಲ್ಲಿಡಿ. ೧೦ ವರ್ಷಗಳ ಮೊದಲು ಆಯೋಜಿಸಲಾದ ಹಿಂದೂ ರಾಷ್ಟ್ರದ ಮೊದಲ ಅಧಿವೇಶನದ ಸಮಯದಲ್ಲಿ ಎಲ್ಲರೂ ‘ಹಿಂದೂ ರಾಷ್ಟ್ರ’ ಶಬ್ದ ಪ್ರಯೋಗದ ಕಡೆಗೆ ಸಂಶಯದ ದೃಷ್ಟಿಯಿಂದ ನೋಡುತ್ತಿದ್ದರು, ಆದರೆ ಇಂದು ಸಂಸತ್ತಿನಲ್ಲಿ ಇರಲಿ ಅಥವಾ ಜನಸಮೂಹದಲ್ಲಿ ಹಿಂದೂ ರಾಷ್ಟ್ರ ಈ ಶಬ್ದ ಪ್ರಚಲಿತವಾಗಿದೆ. ಇದು ಕಾಲದ ಮಹಿಮೆಯಾಗಿದೆ.
೫. ಭಾರತ ಅಂತರರಾಷ್ಟ್ರೀಯ ಮಟ್ಟದಲ್ಲಿ ತಟಸ್ಥವಾಗಿದ್ದರು, ಭವಿಷ್ಯದಲ್ಲಿ ಯಾವುದಾದರೂ ಒಂದು ಕಡೆಗೆ ಯುದ್ಧದಲ್ಲಿ ಸಹಭಾಗಿಯಾಗಬೇಕಾಗುವುದು. ವರ್ತಮಾನ ಸ್ಥಿತಿ ನೋಡಿದರೆ ಯುದ್ಧ ಬಹಳ ದೂರವಾಗಿಲ್ಲ ಎಂದು ಅನಿಸುತ್ತದೆ.
೬. ‘ಕಾಶ್ಮೀರಿ ಫೈಲ್ಸ್’ ಚಲನಚಿತ್ರ ಪ್ರದರ್ಶಿತವಾದ ನಂತರ ನಡೆದಿರುವ ದಂಗೆ ಹಾಗೂ ಶ್ರೀರಾಮನವಮಿ ಮತ್ತು ಹನುಮ ಜಯಂತಿಯ ದಿನದಂದು ನಡೆದಿರುವ ಮೆರವಣಿಗೆಯ ಮೇಲೆ ಮತಾಂಧರಿಂದಾದ ದಾಳಿ, ಇದೆಲ್ಲಾ ಭವಿಷ್ಯದಲ್ಲಿನ ಗೃಹ ಯುದ್ಧದ ತಾಲೀಮಾಗಿದೆ ಇದನ್ನು ಗಮನಿಸಬೇಕು.
೭. ಅರಾಜಕತೆ ನಿರ್ಮಾಣವಾದರೆ ಆಗ ದೇಶದ ಆಂತರಿಕ ಮತ್ತು ಬಾಹ್ಯ ಗಡಿಗಳು ಅಸುರಕ್ಷಿತವಾಗುತ್ತದೆ, ಇಂತಹ ಸಮಯದಲ್ಲಿ ಗಡಿಯ ಹೊರಗಿನಿಂದ ಆಕ್ರಮಣ ಮತ್ತು ಗೃಹಯುದ್ಧದ ಅಪಾಯ ಇರುತ್ತದೆ. ಗಡಿಯಲ್ಲಿ ಸೈನಿಕರು ಭಾರತದ ರಕ್ಷಣೆ ಮಾಡುವರು, ಆದರೆ ಆಂತರಿಕ ಸುರಕ್ಷತೆಗಾಗಿ ಎಲ್ಲಾ ದೇಶಭಕ್ತ ಮತ್ತು ಹಿಂದುತ್ವನಿಷ್ಠ ಸಂಘಟನೆಗಳು ಇವರಿಗೆ ಶಾರೀರಿಕ ಮಟ್ಟದಲ್ಲಿ ಕಾರ್ಯ ಮಾಡಬೇಕಾಗುತ್ತದೆ.
ಹಿಂದೂ ರಾಷ್ಟ್ರದ ಸ್ಥಾಪನೆಗಾಗಿ ಪ್ರಭಾವಿ ವಿಷಯ ಮಂಡನೆ ಮಾಡುವ ವಕ್ತಾರರಾಗಿ
ಪ್ರಸ್ತುತ ಎಲ್ಲೆಡೆ ವೈಚಾರಿಕ ಮಟ್ಟದಲ್ಲಿ ಧೃವೀಕರಣವಾಗುತ್ತಿರುವಾಗ ನಾವು ಸ್ವತಃ ಹಿಂದೂ ರಾಷ್ಟ್ರ ಸ್ಥಾಪನೆಗಾಗಿ ಪ್ರಭಾವಿ ವಿಷಯ ಮಂಡಿಸಲು ವಕ್ತಾರರಾಗಬೇಕು ಹಾಗೂ ಲೇಖನ, ಸಾಮಾಜಿಕ ಜಾಲತಾಣ ಮಾಧ್ಯಮಗಳು ಮುಂತಾದ ಮಾಧ್ಯಮದಿಂದ ವೈಚಾರಿಕ ಕಾರ್ಯ ಮಾಡಬೇಕೆಂದು ಸದ್ಗುರು ಡಾ. ಚಾರುದತ್ತ ಪಿಂಗಳೆ ಇವರು ಈ ಸಮಯದಲ್ಲಿ ಕರೆ ನೀಡಿದರು.
ಹಿಂದೂವಿರೋಧಿ, ‘ಪ್ರಾರ್ಥನಾಸ್ಥಳ ಕಾನೂನು’ ರದ್ದುಗೊಳಿಸಿ ! – ಒಮ್ಮತದಿಂದ ಪ್ರಸ್ತಾವ ಸಮ್ಮತ
ಹಿಂದೂಗಳ ಮೂಲಭೂತ ಅಧಿಕಾರದ ಹನನವಾಗುವ ಪ್ರಾರ್ಥನಾಸ್ಥಳ ಕಾನೂನು ಎಂದರೆ ‘ಪ್ಲೇಸಸ್ ಅಫ್ ವರ್ಷಿಪ್ ಆಕ್ಟ್ ೧೯೯೧’ ಈ ಕಾನೂನು ರದ್ದುಪಡಿಸಿ ಕಾಶಿ, ಮಥುರಾ, ತಾಜಮಹಲ್, ಭೋಜಶಾಲೆ ಮುಂತಾದ ಮೊಘಲ ಆಕ್ರಮಣಕಾರರು ವಶಪಡಿಸಿಕೊಂಡಿರುವ ಸಾವಿರಾರು ದೇವಸ್ಥಾನಗಳು ಮತ್ತು ಭೂಮಿ ಹಿಂದೂಗಳ ವಶಕ್ಕೆ ನೀಡಬೇಕು, ಎಂಬ ಪ್ರಸ್ತಾವನೆಯನ್ನು ಹಿಂದುತ್ವನಿಷ್ಠರು ಒಮ್ಮತದಿಂದ ಸಮ್ಮತಿಸಿದರು.
ಸಮ್ಮತಿಸಲಾದ ಇತರ ಠರಾವುಗಳು
೧. ಭಾರತದಲ್ಲಿರುವ ಬಹುಸಂಖ್ಯಾತ ಹಿಂದೂಗಳಿಗೆ ನ್ಯಾಯ ದೊರಕಿಸಲು ಸಂವಿಧಾನದಿಂದ ‘ಸೆಕ್ಯುಲರ್ ಮತ್ತು ‘ಸೋಶಿಯಾಲಿಸ್ಟ್’ ಪದಗಳನ್ನು ಕೈಬಿಟ್ಟು ‘ಸ್ಪಿರಿಚ್ಯುವಲ್ ಎಂಬ ಪದವನ್ನು ಸೇರಿಸಬೇಕು ಮತ್ತು ಭಾರತವನ್ನು ‘ಹಿಂದೂ ರಾಷ್ಟ್ರ ಎಂದು ಘೋಷಿಸಬೇಕು.
೨. ‘ನೇಪಾಳವನ್ನು ಹಿಂದೂ ರಾಷ್ಟ್ರವೆಂದು ಘೋಷಿಸಬೇಕು’, ಎಂಬ ನೇಪಾಳದಲ್ಲಿರುವ ಹಿಂದೂಗಳ ಬೇಡಿಕೆಯನ್ನು ಅಧಿವೇಶನವು ಸಂಪೂರ್ಣವಾಗಿ ಬೆಂಬಲಿಸುತ್ತದೆ.
೩. ದೇಶಾದ್ಯಂತ ಸರಕಾರದ ಅಧೀನದಲ್ಲಿರುವ ಎಲ್ಲಾ ದೇವಾಲಯಗಳ ಸರಕಾರಿಕರಣವನ್ನು ರದ್ದುಪಡಿಸಿ ದೇವಾಲಯಗಳನ್ನು ಭಕ್ತರಿಗೆ ಹಸ್ತಾಂತರಿಸಬೇಕು.
೪. ‘ಗೋಹತ್ಯೆ ನಿಷೇಧ’ ಹಾಗೂ ‘ಮತಾಂತರ ನಿಷೇಧ’ಕ್ಕೆ ಸಂಬಂಧಿಸಿದಂತೆ ಕೇಂದ್ರ ಸರಕಾರವು ಇಡೀ ದೇಶದಲ್ಲಿ ಕಾನೂನು ಜಾರಿಗೆ ತರಬೇಕು. ಮತಾಂತರಕ್ಕಾಗಿ ಸಂವಿಧಾನದ ೨೫ ನೇ ಪರಿಚ್ಛೇದಕ್ಕೆ ತಿದ್ದುಪಡಿ ತಂದು ಅದರಲ್ಲಿರುವ ಧರ್ಮದ ‘ಪ್ರಚಾರ’ (Pಡಿoಠಿಚಿgಚಿಣe) ಎಂಬ ಪದವನ್ನು ತೆಗೆದುಹಾಕಬೇಕು.
೫. ಭಾರತದಲ್ಲಿ ‘ಎಫ್.ಎಸ್.ಎಸ್.ಎ.ಐ.’(ಈSSಂI) ಮತ್ತು ‘ಎಫ್.ಡಿ.ಎ.’(ಈಆಂ)ಗಳಂತಹ ಸರಕಾರಿ ಸಂಸ್ಥೆಗಳಿರುವಾಗ, ಧಾರ್ಮಿಕ ಆಧಾರದಲ್ಲಿ ‘ಸಮನಾಂತರ ಅರ್ಥವ್ಯವಸ್ಥೆ’ಯನ್ನು ಸೃಷ್ಟಿಸುವ ‘ಹಲಾಲ್ ಸರ್ಟಿಫಿಕೇಶನ’ಅನ್ನು ತಕ್ಷಣವೇ ನಿಲ್ಲಿಸಬೇಕು.
೬. ಗೋವಾದಲ್ಲಿ ‘ಇನ್.ಕ್ವಿಝಿಶನ’ ನೆಪದಲ್ಲಿ ೨೫೦ ವರ್ಷಗಳ ಕಾಲ ಗೋಮಾಂತಕಿಯರ ಮೇಲೆ ಅಮಾನವೀಯ ಮತ್ತು ಕ್ರೂರವಾಗಿ ದೌರ್ಜನ್ಯ ನಡೆಸಿದ ಬಗ್ಗೆ ಕ್ರೈಸ್ತರ ಧರ್ಮಗುರು ಪೋಪ್ ಅವರು ಗೋವಾದ ಜನರಲ್ಲಿ ಬಹಿರಂಗವಾಗಿ ಕ್ಷಮೆ ಯಾಚಿಸಬೇಕು.
೭. ಕಾಶ್ಮೀರ ಕಣಿವೆಯಲ್ಲಿ, ನಿರಾಶ್ರಿತ ಕಾಶ್ಮೀರಿ ಹಿಂದೂಗಳಿಗೆ ಪುನರ್ವಸತಿ ಕಲ್ಪಿಸಲು ‘ಪನೂನ್ ಕಾಶ್ಮೀರ’ ಕೇಂದ್ರಾಡಳಿತ ಪ್ರದೇಶವನ್ನು ರಚಿಸಬೇಕು.
೮. ಪಾಕಿಸ್ತಾನ, ಬಾಂಗ್ಲಾದೇಶ ಮತ್ತು ಶ್ರೀಲಂಕಾದಲ್ಲಿ ಹಿಂದೂಗಳ ಮೇಲೆ ನಡೆಯುತ್ತಿರುವ ದೌರ್ಜನ್ಯಗಳ ಬಗ್ಗೆ ಅಂತಾರಾಷ್ಟ್ರೀಯ ಮಾನವ ಹಕ್ಕುಗಳ ಸಂಘಟನೆ ಮತ್ತು ಭಾರತ ಸರಕಾರದಿಂದ ತನಿಖೆ ನಡೆಸಿ ಅಲ್ಲಿನ ಅಲ್ಪಸಂಖ್ಯಾತ ಹಿಂದೂಗಳಿಗೆ ಭದ್ರತೆ ಒದಗಿಸಬೇಕು.
೯ ಭಾರತಕ್ಕೆ ನುಸುಳಿರುವ ರೋಹಿಂಗ್ಯಾ ಮತ್ತು ಬಾಂಗ್ಲಾದೇಶಿ ಮುಸಲ್ಮಾನರನ್ನು ಮರಳಿ ಕಳುಹಿಸಲು ಸರಕಾರ ಕಠಿಣ ಕಾನೂನು ರೂಪಿಸಬೇಕು.
೧೦. ಕಳೆದ ಕೆಲವು ವರ್ಷಗಳಲ್ಲಿ ಹಿಂದೂಯೇತರ ಜನಸಂಖ್ಯೆಯ ಸ್ಫೋಟವನ್ನು ಗಮನದಲ್ಲಿಟ್ಟುಕೊಂಡು, ಎಲ್ಲಾ ಧರ್ಮಗಳ ಜನಸಂಖ್ಯೆಯ ಸಮತೋಲನವನ್ನು ಕಾಯ್ದುಕೊಳ್ಳಲು ದೇಶದಲ್ಲಿ ತಕ್ಷಣವೇ ‘ಜನಸಂಖ್ಯಾ ನಿಯಂತ್ರಣ ಕಾಯ್ದೆ’ಯನ್ನು ಜಾರಿಗೆ ತರಬೇಕಾಗಿದೆ.
೧೧. ಮಾನವೀಯತೆಯ ದೃಷ್ಟಿಯಿಂದ ಮತ್ತು ಸಾಂವಿಧಾನಿಕ ಹಕ್ಕುಗಳನ್ನು ಪರಿಗಣಿಸಿ, ಗೋವಾ ಮುಖ್ಯಮಂತ್ರಿ ಶ್ರೀ. ಪ್ರಮೋದ ಸಾವಂತ ಅವರು ಕರ್ನಾಟಕದ ‘ಶ್ರೀರಾಮ ಸೇನೆ’ಯ ಅಧ್ಯಕ್ಷ ಶ್ರೀ. ಪ್ರಮೋದ ಮುತಾಲಿಕ ಇವರ ಮೇಲಿನ ಗೋವಾ ರಾಜ್ಯ ನಿಷೇಧವನ್ನು ಹಿಂಪಡೆಯಬೇಕು.