ವಿದ್ಯಾಪೀಠ ಅನುದಾನ ಆಯೋಗದ ಪಠ್ಯಕ್ರಮದಲ್ಲಿ ಮೊಗಲರ ಬದಲಾಗಿ ಹಿಂದೂ ರಾಜರ ಇತಿಹಾಸವನ್ನು ಕಲಿಸಲಾಗುವುದು !

ಇತಿಹಾಸದ ಪಠ್ಯಕ್ರಮದ ಹೊಸ ನೀಲನಕ್ಷೆಯನ್ನು ವಿದ್ಯಾಪೀಠ ಅನುದಾನ ಆಯೋಗ ಅಂದರೆ ‘ಯು.ಜಿ.ಸಿ.’ಯು ಸಿದ್ಧಪಡಿಸಿದೆ. ಇದರಲ್ಲಿ ಭಾರತದ ಮೇಲೆ ದಾಳಿ ಮಾಡುದ ಹಾಗೂ ಅಲ್ಲಿಯ ಅನೇಕ ವಾಸ್ತುಗಳನ್ನು ಧ್ವಂಸ ಮಾಡಿದ ಮುಸಲ್ಮಾನ ಆಕ್ರಮಣಕಾರರ ಬದಲು ಭಾರತೀಯ ರಾಜ್ಯಕರ್ತರ ಕೆಲಸ ಹಾಗೂ ಅವರ ಗೌರವಶಾಲಿ ಇತಿಹಾಸದ ಮೇಲೆ ಹೆಚ್ಚು ಬೆಳಕು ಚೆಲ್ಲಲಿದೆ.

ಸತತವಾಗಿ ಗೊಂದಲಗಳಿಂದ ಸದನದ ಕಾರ್ಯಕಲಾಪಗಳಾಗಲು ಬಿಡದ ಜನತಾದ್ರೋಹಿ ಜನಪ್ರತಿನಿಧಿಗಳ ಸದಸ್ಯತ್ವವನ್ನು ಸರಕಾರವು ಶಾಶ್ವತವಾಗಿ ರದ್ದುಪಡಿಸಬೇಕು, ಎಂಬುದು ಜನರ ಬೇಡಿಕೆಯಾಗಿದೆ !

‘ಪೆಗಾಸಸ್’ ಎಂಬ ಸಂಗಣಕದ ವ್ಯವಸ್ಥೆಯನ್ನು ಬಳಸಿಕೊಂಡು ಗಣ್ಯ ವ್ಯಕ್ತಿಗಳ ದೂರವಾಣಿಯನ್ನು ‘ಟ್ಯಾಪ್’ ಮಾಡಿದ ಬಗ್ಗೆ ಲೋಕಸಭೆಯಲ್ಲಿ ಜುಲೈ ೨೮ ರಂದು ಪ್ರತಿಪಕ್ಷಗಳು ಗೊಂದಲ ನಡೆಸಿದವು. ಈ ಸಮಯದಲ್ಲಿ ವಿರೋಧಕರು ಕಾಗದಪತ್ರಗಳನ್ನು ಎಸೆದರು ಮತ್ತು ಸರಕಾರದ ವಿರುದ್ಧ ಘೋಷಣೆಗಳನ್ನು ಕೂಗಿದರು.

ಕಳೆದ ವರ್ಷಕ್ಕೆ ಹೋಲಿಸಿದರೆ ವರ್ಷ 2020ರಲ್ಲಿ ನಕ್ಸಲವಾದಿಗಳ ಆಕ್ರಮಣದಲ್ಲಿ ನಗಣ್ಯ ಕಡಿತ!

ದೇಶದಲ್ಲಿ ಕಳೆದ 6 ದಶಕಗಳಿಂದ ನಡೆಯುತ್ತಿರುವ ನಕ್ಸಲವಾದವು ಇಷ್ಟರಲ್ಲಿ ಕೊನೆಗೊಳ್ಳುವುದು ಅಪೇಕ್ಷಿತವಾಗಿರುವಾಗ ಪ್ರತೀವರ್ಷ ಅದರಲ್ಲಿ ನಗಣ್ಯ ಕಡಿತವೆಂದರೆ ಅದು ಸರ್ವಪಕ್ಷೀಯ ರಾಜಕಾರಣಿಗಳಿಗೆ ಲಜ್ಜಾಸ್ಪದವಾಗಿದೆ !

ಕೊರೊನಾದ ಲಸಿಕೆ ತೆಗೆದುಕೊಂಡಿದ್ದ ಜನರೂ ಸಹ ‘ಡೆಲ್ಟಾ’ ರೋಗಾಣುವಿಗೆ ತುತ್ತಾಗುತ್ತಿದ್ದಾರೆ

ಕೊರೊನಾದ ‘ಡೆಲ್ಟಾ’ ರೋಗಾಣುವಿನ ವಿಧವು ಮಾರಕವಾಗಿದ್ದು, ಇದು ವಿಶ್ವದಾದ್ಯಂತ ಆತಂಕದ ವಿಷಯವಾಗಿದೆ. ಭಾರತದಲ್ಲಿಯೂ, ಕೊರೊನಾದ ಎರಡನೇ ಅಲೆಯ ಸೋಂಕು ವೇಗವಾಗಿ ಹರಡಲು ಡೆಲ್ಟಾವೇ ಕಾರಣವಾಗಿದೆ ಎಂದು ಹೇಳಲಾಗುತ್ತದೆ.

ಭಿಕ್ಷುಕರನ್ನು ಭಿಕ್ಷೆ ಬೇಡುವುದರಿಂದ ಯಾರೂ ತಡೆಯಲಾರರು ! – ಸರ್ವೋಚ್ಚ ನ್ಯಾಯಾಲಯ

ನ್ಯಾಯಾಲಯಗಳಲ್ಲಿ ಕೋಟಿಗಟ್ಟಲೆ ಪ್ರಕರಣಗಳು ಬಾಕಿ ಇರುವಾಗ, ಇಂತಹ ಸಾಮಾಜಿಕ ಸಮಸ್ಯೆಗಳನ್ನು ಸಹ ನ್ಯಾಯಾಲಯಗಳೇ ಆಲಿಸಬೇಕಾದ ಸಮಯ ಬಂದಿದೆ. ಈ ಬಗ್ಗೆ ಸರಕಾರಿ ಸಂಸ್ಥೆಗಳು ಗಂಭೀರವಾಗಿ ಯೋಚಿಸುವ ಅಗತ್ಯವಿದೆ !

ಲಡಾಖ್‍ನಲ್ಲಿ ಮತ್ತೆ ಚೀನಾದ ಅತಿಕ್ರಮಣ

ಭಾರತವು ಆಕ್ರಮಕ ಭೂಮಿಕೆಯಲ್ಲಿಲ್ಲದಿರುವುದರ ಲಾಭ ಪಡೆದುಕೊಂಡು ಚೀನಾವು ಈ ರೀತಿ ಅತಿಕ್ರಮಣ ನಡೆಸುತ್ತಿದೆ. ಇದಕ್ಕೆ ಭಾರತವು ತಕ್ಕ ಉತ್ತರ ನೀಡಿದಾಗಲೇ ಈ ರೀತಿಯ ಘಟನೆಗಳು ನಿಲ್ಲಬಲ್ಲದು !

‘ಬ್ರೈನ್ ಟ್ಯೂಮರ್’ನ ಶಸ್ತ್ರ ಚಿಕಿತ್ಸೆ ನಡೆಯುತ್ತಿರುವಾಗ ಯುವತಿಯಿಂದ ಶ್ರೀ ಹನುಮಾನ ಚಾಲಿಸಾ ಪಠಣ !

ಆಸ್ಪತ್ರೆಯಲ್ಲಿ ಅನುಭವೀ ಆಧುನಿಕ ವೈದ್ಯರ ತಂಡವು ಆಕೆಯ ಮೇಲೆ `ನ್ಯೂರೋ ಸರ್ಜರಿ’ ಮಾಡಿದರು. ಸುಮಾರು ೩ ಗಂಟೆಗಳ ಕಾಲ ನಡೆದ ಈ ಶಸ್ತ್ರಚಿಕಿತ್ಸೆಯ ಸಮಯದಲ್ಲಿ ಈ ಯುವತಿಯು ಎಚ್ಚರವಾಗಿದ್ದಳು. ಆಕೆಯ ಮೇಲೆ ನಡೆದ ಶಸ್ತ್ರಚಿಕಿತ್ಸೆಯು ಯಶಸ್ವಿಯಾಗಿದೆ.

ತಡವಾಗುವ ಮುಂಚೆ ನಮ್ಮನ್ನು ಅಫ್ಘಾನಿಸ್ತಾನದಿಂದ ಸುರಕ್ಷಿತವಾಗಿ ಹೊರತೆಗೆಯಿರಿ !

ಅಫಘಾನಿಸ್ತಾನದ ತಾಲಿಬಾನ್‍ಗಳಿಂದ ಭಯಭೀತರಾಗಿರುವ ಹಿಂದೂಗಳು ಮತ್ತು ಸಿಖ್ಖರು `ತಡವಾಗುವ ಮುಂಚೆ ನಮ್ಮನ್ನು ಸುರಕ್ಷಿತವಾಗಿ ಹೊರಗೆ ಕರೆದೊಯ್ಯಿರಿ’ ಎಂದು ಕಳಕಳಿಯ ಮನವಿಯನ್ನು ಜಗತ್ತಿಗೆ ಮಾಡಿದ್ದಾರೆ.

ತಾಲಿಬಾನಿಯರು ಮೊದಲು ದಾನಿಶ್ ಸಿದ್ದಕಿಯ ಮೇಲೆ ಗುಂಡು ಹಾರಿಸಿದರು ನಂತರ ಆತ ಭಾರತೀಯನಾಗಿದ್ದಾನೆಂಬ ಕೋಪದಿಂದ ಆತನ ತಲೆಯನ್ನು ವಾಹನದಡಿಯಲ್ಲಿ ಹೊಸಕಿ ಹಾಕಿದರು ! – ಅಫ್ಘಾನ್ ಕಮಾಂಡರನು ನೀಡಿದ ಮಾಹಿತಿ

ಭಾರತದ ವಾರ್ತಾಛಾಯಾಚಿತ್ರಕಾರ ಹಾಗೂ ‘ಪುಲಿತ್ಜರ’ ಪ್ರಶಸ್ತಿ ವಿಜೇತ ದಾನಿಶ್ ಸಿದ್ದಕಿಯವರನ್ನು ಕೆಲವು ದಿನಗಳ ಹಿಂದೆ ಅಫಘಾನಿಸ್ತಾನದಲ್ಲಿ ಹತ್ಯೆ ಮಾಡಲಾಗಿತ್ತು. ಗುಂಡು ತಗಲಿದ್ದರಿಂದ ಆತ ಸಾವನ್ನಪ್ಪಿದನು ಎಂದು ಹೇಳಲಾಗುತ್ತದೆ.

ಸೌದಿ ಅರೇಬಿಯಾದಲ್ಲಿ ಧರ್ಮನಿಂದನೆಯ ಸುಳ್ಳು ಪ್ರಕರಣದಲ್ಲಿ ಬಂಧಿಸಲಾಗಿದ್ದ ಹಿಂದೂವಿನ ಬಿಡುಗಡೆ !

ಸೌದಿ ಅರೇಬಿಯಾದಲ್ಲಿ ಡಿಸೆಂಬರ ೨೦೧೯ ರಿಂದ ಬಂಧನದಲ್ಲಿದ್ದ ಭಾರತಿಯ ನಾಗರಿಕ ಹರೀಶ ಬಂಗೇರನನ್ನು ಬಿಡುಗಡೆ ಮಾಡಲಾಗಿದೆ. ಅವರನ್ನು ಧರ್ಮನಿಂದನೆಯ ಸುಳ್ಳು ಆರೋಪದಡಿಯಲ್ಲಿ ಬಂಧಿಸಲಾಗಿತ್ತು.