ಭಾರತ ಸರಕಾರವು ಈ ‘ಆ್ಯಪ್’ನ ಮೇಲೆ ಯಾವಾಗ ನಿರ್ಬಂಧ ಹೇರಲಿದೆ ?
ನವ ದೆಹಲಿ – ಪಾಕಿಸ್ತಾನ ಪುರಸ್ಕೃತ ಜಿಹಾದಿ ಉಗ್ರಗಾಮಿ ಸಂಘಟನೆಯಾದ ‘ಜೈಶ್-ಎ-ಮೊಹಮ್ಮದ್ ‘ನ ಮುಖ್ಯಸ್ಥ ಮೌಲಾನಾ (ಇಸ್ಲಾಮಿ ವಿದ್ವಾಂಸ) ಮಸೂದ ಅಜಹರ ಇವರಿಗೆ ಸಂಬಂಧಪಟ್ಟ ‘ಅಚ್ಛಿ ಬಾತೆ’ ಎಂಬ ಹೆಸರಿನ ಒಂದು ಆ್ಯಪ್ ಇದೆ. ‘ಗೂಗಲ್ ಪ್ಲೇ ಸ್ಟೋರ್’ ಅದನ್ನು ಶೈಕ್ಷಣಿಕ ಗುಂಪಿನಲ್ಲಿಟ್ಟಿದೆ. ಈ ಆ್ಯಪ್‍ನಿಂದ ಇಸ್ಲಾಮಿ ಶಿಕ್ಷಣ ನೀಡಲಾಗುತ್ತಿದೆ ಎಂಬುದಾಗಿ ದಾವೆ ಮಾಡಲಾಗುತ್ತಿದೆ; ಆದರೆ ಪ್ರತ್ಯಕ್ಷವಾಗಿ ಈ ಮೂಲಕ ಯುವಕರನ್ನು ಪ್ರಚೋದಿಸಲಾಗುತ್ತಿದೆ. ಆ ಆ್ಯಪ್‍ನ ಸರ್ವರ ಜರ್ಮನಿಯಲ್ಲಿದೆ. (‘ಸರ್ವರ್’ ಅಂದರೆ ಒಂದು ರೀತಿಯ ಸಂಗಣಕ ಅಥವಾ ಸಂಗಣಕದ ಸಮೂಹ. ಅದು ಸಂಬಂಧಪಟ್ಟ ಆ್ಯಪ್‍ನಲ್ಲಿರುವ ಎಲ್ಲಾ ಮಾಹಿತಿಯನ್ನು ತನ್ನ ಬಳಿ ಸುರಕ್ಷಿತವಾಗಿಟ್ಟುಕೊಳ್ಳುತ್ತದೆ ಹಾಗೂ ಆ್ಯಪ್‍ನ ಬಳಕೆದಾರರಿಗೆ (‘ಯೂಜರ್ಸ’ಗೆ ಅದನ್ನು ಪೂರೈಸುತ್ತದೆ.)
#Exclusive
The web page has old write-ups by Masood Azhar under the pen name ‘Saadi’, a pseudo-identity well-identified with the JeM chief.
(@AnkiitKoomar)https://t.co/ihGj0Tqz0L— IndiaToday (@IndiaToday) October 12, 2021
1. ಈ ಆ್ಯಪ್‍ನಲ್ಲಿ ಮಸೂದ ಅಜಹರ ಹಾಗೂ ಅವನ ಸಹಚರನಿಗೆ ಸಂಬಂಧಪಟ್ಟ ಪುಸ್ತಕಗಳಲ್ಲಿನ ಲೇಖನಗಳು ಹಾಗೂ ಧ್ವನಿ ಸಂದೇಶ (ಆಡಿಯೋ) ಇದೆ. ಈ ಮೂಲಕ ಯುವಕರಿಗೆ ಭಯೋತ್ಪಾದನೆಯತ್ತ ತಳ್ಳಲು ಪ್ರಯತ್ನಿಸಲಾಗುತ್ತಿದೆ.
2. ಈ ಆ್ಯಪ್‍ಅನ್ನು ಡಿಸಂಬರ 4, 2020 ರಂದು ಪ್ರಾರಂಭಿಸಲಾಯಿತು. ಇಲ್ಲಿಯವರೆಗೂ 5 ಸಾವಿರಕ್ಕಿಂತ ಹೆಚ್ಚು ಸಲ ಡೌನ್‍ಲೋಡ್ ಮಾಡಲಾಗಿದೆ. ಪಾಕಿಸ್ತಾನದಲ್ಲಿನ ಅನೇಕ ಇಸ್ಲಾಮಿ ಧರ್ಮಗುರುಗಳ ವಿಚಾರ, ಸಂದೇಶ ಹಾಗೂ ಪುಸ್ತಕದಲ್ಲಿನ ಲೇಖನಗಳು ಈ ಆ್ಯಪ್‍ನಲ್ಲಿದೆ.