ಪ್ರಧಾನಮಂತ್ರಿ ಶೇಖ ಹಸೀನಾರವರಿಗೆ ಇಂತಹ ಪ್ರಶ್ನೆಗಳನ್ನು ಕೇಳಬೇಕಾಗುತ್ತದೆ, ಇದರಿಂದಲೇ ‘ಅವರು ಹಿಂದೂಗಳ ರಕ್ಷಣೆಗಾಗಿ ವಿಶೇಷವಾಗಿ ಏನೂ ಮಾಡುವುದಿಲ್ಲ’, ಎಂಬುದನ್ನು ಭಾರತವು ಗಮನದಲ್ಲಿಟ್ಟುಕೊಳ್ಳಬೇಕು ಹಾಗೂ ಬಾಂಗ್ಲಾದೇಶದಲ್ಲಿದ ಹಿಂದೂಗಳನ್ನು ರಕ್ಷಿಸಲು ಸ್ವತಃ ಕೃತಿ ಮಾಡಬೇಕು; ಆದರೆ ಈವರೆಗಿನ ಅನುಭವವನ್ನು ನೋಡಿದರೆ ಭಾರತವು ಈ ರೀತಿ ಮಾಡುವ ಸಾಧ್ಯತೆಗಳಿಲ್ಲ ! -ಸಂಪಾದಕರು
ನವ ದೆಹಲಿ – ನಾನು ‘ಲಜ್ಜಾ’ ಈ ಕಾದಂಬರಿಯನ್ನು ಬಾಂಗ್ಲಾದೇಶದಲ್ಲಾಗುವ ಧಾರ್ಮಿಕ ಹಿಂಸಾಚಾರಗಳ ವಿರುದ್ಧ ಬರೆದಿದ್ದೆ. 28 ವರ್ಷಗಳ ಹಿಂದೆ ಬಾಂಗ್ಲಾದೇಶದ ಆಗಿನ ಪ್ರಧಾನಮಂತ್ರಿಗಳಾದ ಖಾಲಿದಾ ಝಿಯಾರವರು ಅದರ ಮೇಲೆ ನಿರ್ಬಂಧ ಹೇರಿದ್ದರು. ಒಂದು ವೇಳೆ ಈಗಿನ ಪ್ರಧಾನಮಂತ್ರಿಗಳಾದ ಶೇಖ ಹಸೀನಾ ಧಾರ್ಮಿಕ ಹಿಂಸಾಚಾರದ ವಿರುದ್ಧವಾಗಿದ್ದರೆ, ಅವರು ಆ ಪುಸ್ತಕದ ಮೇಲೆ ಹೇರಿರುವ ನಿರ್ಬಂಧವನ್ನು ಏಕೆ ತೆಗೆದು ಹಾಕಲಿಲ್ಲ, ಎಂದು ಕಾದಂಬರಿಯ ಲೇಖಕಿ ತಸ್ಲೀಮಾ ನಸರೀನರವರು ಟ್ವಿಟ್ ಮೂಲಕ ಪ್ರಶ್ನಿಸಿದ್ದಾರೆ. ಬಾಂಗ್ಲಾದೇಶದಲ್ಲಿ ಕುರಾನ್‍ನ ತಥಾಕಥಿತ ಅವಮಾನದ ಕಾರಣಕ್ಕಾಗಿ ಮತಾಂಧರು ಹಿಂದೂಗಳ ಮೇಲೆ ನಡೆಸಿರುವ ದಾಳಿಯ ಬಳಿಕ ಪ್ರಧಾನ ಮಂತ್ರಿ ಶೇಖ ಹಸೀನಾರವರು ‘ಆರೋಪಿಗಳ ಮೇಲೆ ಕಠಿಣ ಕ್ರಮ ಜರುಗಿಸಲಾಗುವುದು’, ಎಂದು ಹೇಳಿದ್ದಾರೆ. ಈ ಹಿನ್ನಲೆಯಲ್ಲಿ ನಸರೀನರವರು ಟ್ವಿಟ್ ಮಾಡಿದ್ದಾರೆ. ‘ಲಜ್ಜಾ’ ಕಾದಂಬರಿಯಲ್ಲಿ ಮತಾಂಧರು ಹಿಂದೂಗಳ ಮೇಲೆ ನಡೆಸಿದ ಅತ್ಯಾಚಾರದ ಕಥನವಿದೆ. ಆದ್ದರಿಂದ ಮತಾಂಧರು ಒತ್ತಡ ತಂದು ಅದರ ಮೇಲೆ ಬಾಂಗ್ಲಾದೇಶದಲ್ಲಿ ನಿರ್ಬಂಧ ಹೇರುವಂತೆ ಮಾಡಿ ತಸ್ಲೀಮಾ ನಸರೀನರವರನ್ನು ಕೊಲ್ಲಲು ಪ್ರಯತ್ನಿಸಿದರು. ಆದ್ದರಿಂದ ನಸರೀನರವರು ಬಾಂಗ್ಲಾದೇಶದಿಂದ ಪಲಾಯನ ಮಾಡಬೇಕಾಯಿತು ಹಾಗೂ ಕಳೆದ 28 ವರ್ಷಗಳಿಂದಲೂ ಸ್ಥಳಾಂತರಿತರೆಂದು ಭಾರತ ಹಾಗೂ ಬೇರೆ ದೇಶಗಳಲ್ಲಿ ವಾಸಿಸುತ್ತಿರುತ್ತಾರೆ.
‘Lajja’ is still relevant. pic.twitter.com/GCl9IbWrOj
— taslima nasreen (@taslimanasreen) October 18, 2021