ಪೊಲೀಸರೊಂದಿಗೆ ವಾದ ಮಾಡಿದ ಬಳಿಕ ಮತಾಂಧರಿಂದ ಸ್ವತಃ ತಮ್ಮದೇ ಧಾರ್ಮಿಕ ಮೆರವಣಿಗೆ ಸಮಯದಲ್ಲಿ ಹಿಂಸಾಚಾರ

ಭಯಭೀತರಾದ ಹಿಂದೂಗಳಿಗೆ ಭದ್ರತೆ ನೀಡುವ ಬೇಡಿಕೆ

* ಮತಾಂಧರು ಧಾರ್ಮಿಕ ಮೆರವಣಿಗೆಯ ಸಮಯದಲ್ಲಿ ಏಕೆ ಹಿಂಸಾಚಾರ ಮಾಡುತ್ತಾರೆ ? ಎಂಬುದನ್ನು ಜಾತ್ಯತೀತರು ಹಾಗೂ ಪ್ರಗತಿ(ಅಧೋಗತಿ)ಪರರು ಹೇಳಬಹುದೇ ? – ಸಂಪಾದಕರು 

* ‘ಭಾರತದಲ್ಲಿ ಅಲ್ಪಸಂಖ್ಯಾತರು ಭಯದ ಛಾಯೆಯಲ್ಲಿರಬೇಕಾಗಿದೆ’, ಎಂದು ಕೂಗಾಡುವವರು ಹಿಂದೂ ಬಹುಸಂಖ್ಯಾತ ಭಾರತದಲ್ಲಿ ಹಿಂದೂಗಳೇ ಅಲ್ಪಸಂಖ್ಯಾತರ ಭಯದ ಛಾಯೆಯಲ್ಲಿರಬೇಕಾಗುವ ವಸ್ತುಸ್ಥಿತಿಯ ಬಗ್ಗೆ ಚಕಾರವನ್ನೂ ಎತ್ತುವುದಿಲ್ಲ, ಎಂಬುದನ್ನು ಗಮನದಲ್ಲಿಟ್ಟುಕೊಳ್ಳಿರಿ ! -ಸಂಪಾದಕರು 

ನವದೆಹಲಿ – ದಕ್ಷಿಣ ದೆಹಲಿಯ ಬಟುಕೇಶ್ವರ (ಬಿ.ಕೆ.) ದತ್ತ ಕಾಲನಿಯಲ್ಲಿ ಅಕ್ಟೋಬರ 14 ರಂದು ಮತಾಂಧರ ಒಂದು ಧಾರ್ಮಿಕ ಮೆರವಣಿಗೆಯ ಸಮಯದಲ್ಲಿ ಅವರು ದೆಹಲಿಯ ಪೊಲೀಸರೊಂದಿಗೆ ನಡೆಸಿದ ವಾದದ ಬಳಿಕ ಹಿಂಸಾಚಾರ ನಡೆಸಿದರು. ಈ ಸಮಯದಲ್ಲಿ ಪೊಲೀಸರು ಅಡ್ಡ ಹಾಕಿದ್ದ ಬೇಲಿಗಳನ್ನು (ಬ್ಯಾರಕೆಡ್) ಅನ್ನು ಮುರಿದು ಹಾಕಿದರು. ಆ ಸಂದರ್ಭದಲ್ಲಿನ ಒಂದು ವಿಡಿಯೋ ಅನ್ನು ಭಾಜಪದ ಪ್ರದೇಶ ಉಪಾಧ್ಯಕ್ಷರಾದ ಸುನೀಲ ಯಾದವ ಇವರು ಟ್ವಿಟ್ ಮಾಡಿದ್ದಾರೆ. ‘ಆ ಘಟನೆಯಿಂದ ಸ್ಥಳೀಯ ಹಿಂದೂಗಳು ಗಾಬರಿಗೊಂಡಿದ್ದು ಅವರಿಗೆ ಭದ್ರತೆ ಪೂರೈಸಬೇಕು’, ಎಂಬ ಪೊಲೀಸರಲ್ಲಿ ಒತ್ತಾಯಿಸಲಾಗಿದೆ. ಈ ಬಗ್ಗೆ ಯಾದವ ಇವರು ‘#SaveBKDuttPeoples’ ಎಂಬ ಹೆಸರಿನ ‘ಹ್ಯಾಶಟ್ಯಾಗ ಟ್ರೆಂಡ್’ (ಒಂದೇ ವಿಷಯದ ಮೇಲೆ ಚರ್ಚೆ ನಡೆಸುವುದು) ಮಾಡಿದ್ದರು. ಈ ಪ್ರಕರಣಕ್ಕೆ ಸಂಬಂಧಿಸಿದಂತೆ ಪೊಲೀಸರು ಅಪರಾಧವನ್ನು ನೋಂದಾಯಿಸಿಕೊಂಡಿದ್ದರೂ, ಇಲ್ಲಿಯವರೆಗೆ ಯಾರನ್ನೂ ಕೂಡ ಬಂಧಿಸಿಲ್ಲ.

ಸುನೀಲ ಯಾದವ ಇವರು, ಬಿ.ಕೆ. ದತ್ತ ಕಾಲನಿಯನ್ನು ವಿಭಜನೆಯ ಸಮಯದಲ್ಲಿ ಪಾಕಿಸ್ತಾನದಿಂದ ಭಾರತಕ್ಕೆ ಬಂದ ಹಿಂದೂಗಳಿಗೋಸ್ಕರ ಇಡಲಾಗಿತ್ತು. ಅಲ್ಲಿ ಹಿಂದೆ ಮುಸಲ್ಮಾನರ 4 ಮನೆಗಳಿದ್ದವು, ಈಗ 40 ಕ್ಕಿಂತ ಹೆಚ್ಚು ಮನೆಗಳಾಗಿವೆ. ಅದು ಹೇಗಾಯಿತು ?, ಎಂಬುದು ಯಾರಿಗೂ ತಿಳಿದಿಲ್ಲ. ಅಲ್ಲಿ ಹಿಂಸಾಚಾರದ ಸಮಯದಲ್ಲಿ ಮತಾಂಧರಿಂದ ಮಹಿಳೆಯರನ್ನು ಉದ್ದೇಶಪೂರ್ವಕವಾಗಿ ಮುಂದೆ ಸರಿಸಲಾಯಿತು. ಈ ಮೆರವಣಿಗೆಯಲ್ಲಿ ಹೊರಗಿನಿಂದ ಜನರು ಬಂದಿದ್ದರು. ಪ್ರತೀವರ್ಷ ಈ ರೀತಿಯ ಮೆರವಣಿಗೆಯ ಸಮಯದಲ್ಲಿ ಹಿಂಸಾಚಾರ ಆಗುತ್ತದೆ. (ಒಂದು ವೇಳೆ ಪ್ರತಿವರ್ಷ ಹಿಂಸಾಚಾರವಾಗುತ್ತಿದ್ದಲ್ಲಿ ಪೊಲೀಸರು ಏನು ಮಾಡುತ್ತಿರುತ್ತಾರೆ ? ಅವರಿಗೆ ಹಿಂಸಾಚಾರವನ್ನು ನಿಲ್ಲಿಸಲು ಸಾಧ್ಯವಾಗದಿದ್ದರೆ, ಅವರು ಜನಸಾಮಾನ್ಯರನ್ನು ಹೇಗೆ ರಕ್ಷಿಸಲಿದ್ದಾರೆ ? – ಸಂಪಾದಕರು)